Breaking News

ಬೇಂಗಮಲೆಯಲ್ಲಿ ಸ್ಕೂಟಿ – ಬೈಕ್ ಢಿಕ್ಕಿ, ಯುವಕರ ಕಾಲು ಕಟ್

Advt_Headding_Middle
Advt_Headding_Middle

 

ಐವರ್ನಾಡು ಗ್ರಾಮದ ಬೇಂಗಮಲೆ ಚಡಾವಿನಲ್ಲಿ ಇಂದು ಸಂಜೆ 6.30 ರ ಸುಮಾರಿಗೆ ಸ್ಕೂಟಿ ಮತ್ತು ಅಪಾಚ್ಚಿ ಬೈಕ್ ಪರಸ್ಪರ ಡಿಕ್ಕಿ ಹೊಡೆದುಕೊಂಡು ಎರಡು ವಾಹನಗಳ ಸವಾರರು ತೀವ್ರ ಜಖಂಗೊಂಡಿದ್ದಾರೆ.

ಐವರ್ನಾಡು ಕಂಡಿಗೆ ಮೂಲೆಯ ತೀರ್ಥ ಪ್ರಸಾದ್ ಮತ್ತು ಕಲ್ಪಣೆಯ ನಾಗಪ್ಪ ಎಂಬುವರು ಸ್ಕೂಟಿಯಲ್ಲಿ ಹೋಗುತ್ತಿದ್ದರು. ಉಬರಡ್ಕ ನೆಯ್ಯೋಣಿಯ ಶಶಾಂಕ ಎಂಬ ಯುವಕ ಅಪಾಚಿ ಬೈಕ್ ನಲ್ಲಿ ಬರುತ್ತಿದ್ದರು. ಢಿಕ್ಕಿ ಹೊಡೆದ ರಭಸಕ್ಕೆ ಮೂವರ ಕಾಲುಗಳು ಕಟ್ ಆಗಿದೆ. ಓರ್ವ ಯುವಕನ ಕಾಲಿನ ಎಲುಬು ತುಂಡಾಗಿ ಹೊರಗೆ ಬಂದಿತ್ತೆಂದು ತಿಳಿದು ಬಂದಿದೆ.
ಅಪಘಾತವಾಗಿ ಜನ ಸೇರಿದ್ದರೂ ಯಾರೂ ಗಾಯಾಳುಗಳನ್ನು ಎತ್ತಿ ವಾಹನದಲ್ಲಿ ಹಾಕಿ ಆಸ್ಪತ್ರೆಗೆ ತರಲು ಸಿದ್ಧರಾಗದೆ ಗುಂಪುಗೂಡಿ ನೋಡುತ್ತಿದ್ದಾಗ ಆಶ್ರಿತ್ ಎಂಬವರು ಫೋನ್ ಕರೆ ಮಾಡಿದ ಮೇರೆಗೆ ಪೈಚಾರಿನಿಂದ ಆರ್.ಬಿ.ಬಶೀರ್ ಮತ್ತು ತಂಡದವರು ವಾಹನಗಳ ಲ್ಲಿ ಧಾವಿಸಿ ಗಾಯಾಳುಗಳನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತಂದು ದಾಖಲಿಸಿದರು. ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಮೂವರನ್ನೂ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.