ಪೆರುವಾಜೆ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಮತ್ತು ಪೌಷ್ಟಿಕ ಆಹಾರ ಸಪ್ತಾಹ

Advt_Headding_Middle
Advt_Headding_Middle

ಪೆರುವಾಜೆ ಅಂಗನವಾಡಿ ಕೇಂದ್ರದಲ್ಲಿ ಪೋಷಣ್ ಮಾಸಾಚರಣೆ ಮತ್ತು ಪೌಷ್ಟಿಕ ಆಹಾರ ಸಪ್ತಾಹ ಸೆ. 9 ರಂದು ನಡೆಸಲಾಯಿತು. ಕಾರ್ಯಕ್ರಮದಲ್ಲಿ ಬಾಲವಿಕಾಸ ಅಧ್ಯಕ್ಷರು ಶ್ರೀಮತಿ ಯಶೋಧ ಅಧ್ಯಕ್ಷ ಸ್ಥಾನ ವಹಿಸಿದ್ದರು. ಜಯಪ್ರಕಾಶ್ ಅಲೆಕ್ಕಾಡಿ ಕಾರ್ಯಕ್ರಮ ಉದ್ಘಾಟಿಸಿದರು.

ಮಹಿಳಾ ಮೇಲ್ವಿಚಾರಕಿ ಶ್ರೀಮತಿ ಉಷಾಪ್ರಸಾದ್ ರೈ ಇವರು ಕಾರ್ಯಕ್ರಮದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಭಾವೈಕ್ಯ ಮಹಿಳಾ ಮಂಡಲದ ಅಧ್ಯಕ್ಷರು ಶ್ರೀಮತಿ ಸವಿತಾ, ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಲಲಿತಾಕುಮಾರಿ ಹಾಜರಿದ್ದರು. ಆಶಾಕಾರ್ಯಕರ್ತೆ ಶ್ರೀಮತಿ ರಾಗಿಣಿ ಚುಚ್ಚುಮದ್ದು ಹಾಗೂ ಸ್ವಚ್ಛತೆ ಬಗ್ಗೆ ಮಾಹಿತಿ ನೀಡಿದರು. ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಶ್ರೀಮತಿ ಅನುಸೂಯ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಕಾರ್ಯಕ್ರಮದಲ್ಲಿ ಅಪೌಷ್ಟಿಕತೆ ಹಾಗೂ ಮಾಸಾಚರಣೆ ಬಗ್ಗೆ ತಿಳಿಸಲಾಯಿತು. ಮಕ್ಕಳಿಗೆ ಚುಚ್ಚುಮದ್ದು ನೀಡಲಾಯಿತು. ಮಕ್ಕಳ ಪೌಷ್ಟಿಕ ಮಟ್ಟ ಪರಿಶೀಲಿಸಲಾಯಿತು. ಪೌಷ್ಟಿಕ ಆಹಾರ ಸಪ್ತಾಹ ನಡೆಸಿ ಬಹುಮಾನ ವಿತರಿಸಲಾಯಿತು. ಪೌಷ್ಟಿಕ ಕೈತೋಟಕ್ಕೆ ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಮುಕ್ಕೂರು ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ರೂಪ ಇವರು ನಿರೂಪಿಸಿ, ಪೆರುವಾಜೆ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಿಜಯಕುಮಾರಿ.ಡಿ ಸ್ವಾಗತಿಸಿದರು. ಪ್ರಜ್ಞಾ, ಸವಿತಾ ಪ್ರಾರ್ಥಿಸಿದರು. ಶ್ರೀಮತಿ ಚಂದ್ರಾವತಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.