ಪೈಲಾರು ಯಕ್ಷನಿಕೇತನ ತಂಡ ರಾಷ್ಟ್ರಮಟ್ಟದ ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ

Advt_Headding_Middle
Advt_Headding_Middle

 

 

ಅಮರಮುಡ್ನೂರು ಗ್ರಾಮದ ಪೈಲಾರು ಯಕ್ಷನಿಕೇತನ ಕಲಾ ತಂಡ ರಾಷ್ಟ್ರಮಟ್ಟದ ಜನಪದ ನೃತ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದಿರುತ್ತದೆ.ಯೂಥ್ ಹಾಸ್ಟೆಲ್ ಅಸೋಸಿಯೇಷನ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕೇಂದ್ರ ಶಾಖೆ ಏರ್ಪಡಿಸಿದ್ದ ರಾಷ್ಟ್ರಮಟ್ಟದ ಜನಪದ ನೃತ್ಯ ಸ್ಪರ್ಧೆಯಲ್ಲಿ ಮಂಗಳೂರು ಶಾಖೆಯನ್ನು ಯಕ್ಷನಿಕೇತನ ಪೈಲಾರು ತಂಡ ಪ್ರತಿನಿಧಿಸಿತ್ತು.ಚರಿಷ್ಮಾ ಕಡಪಳ,ಅನುಷಾ ಮರ್ಗಿಲಡ್ಕ,ರಕ್ಷಿತಾ ಮರ್ಗಿಲಡ್ಕ, ಸುರಕ್ಷಾ ಮರ್ಗಿಲಡ್ಕ,ಪವನ ಕುಕ್ಕುಜಡ್ಕ,ಜಾಹ್ನವಿ ಸಂಕೇಶ,ವಿನುತಾ ಪೈಲೂರು ತಂಡದ ಕಲಾವಿದರಾಗಿದ್ದರು .ಕರಾವಳಿ ಕರ್ನಾಟಕದ ಯಕ್ಷಗಾನ ಕಲೆಯನ್ನು ಬಿಂಬಿಸುವ ನೃತ್ಯವನ್ನು ಕಲಾ ತಂಡವು ಪ್ರದರ್ಶಿಸಿ ಪ್ರಶಸ್ತಿ ಗಳಿಸಿಕೊಂಡಿದೆ. ರಾಜೇಶ್ ಮಣಿಮಜಲು(ಕಳಂಜ) ತಂಡಕ್ಕೆ ನೃತ್ಯ ನಿರ್ದೇಶಿಸಿದ್ದರು.ತೇಜಸ್ವಿ ಕಡಪಳ ತಂಡದ ನೇತೃತ್ವ ವಹಿಸಿದ್ದರು. ಕಿರಣ್ ಮಡಪ್ಪಾಡಿ,ಧನ್ಯರಾಜ್ ಮೂಕಮಲೆ ಮತ್ತು ತೇಜಸ್ ಮರ್ಗಿಲಡ್ಕ ನೃತ್ಯ ಸಂಯೋಜನೆಯಲ್ಲಿ ಸಹಕರಿಸಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.