Breaking News

ಸುಳ್ಯ ಜೂನಿಯರ್ ಕಾಲೇಜ್ ರಸ್ತೆ : ಚರಂಡಿ ಎತ್ತರಿಸಿದರೆ ವಾಹನ ಪಾರ್ಕಿಂಗ್‌ಗೆ ಸಮಸ್ಯೆ – ಅಧಿಕಾರಿಗಳಿಗೆ ಸ್ಥಳೀಯ ಮಾಲಕರ ಮನವಿ

Advt_Headding_Middle
Advt_Headding_Middle

 

ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿರುವ ಚರಂಡಿಯನ್ನು ಎತ್ತರಿಸುವ ಕಾಮಗಾರಿ ನಡೆಯುತ್ತಿದ್ದು ಇದರಿಂದ ವಾಹನ ಪಾರ್ಕಿಂಗ್‌ಗೆ ಸಮಸ್ಯೆಯಾಗುತ್ತಿದೆ. ಆದ್ದರಿಂದ ವಾಹನ ಪಾರ್ಕಿಂಗ್‌ಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಾಮಗಾರಿ ನಡೆಸಬೇಕು ಎಂದು ಸ್ಥಳೀಯ ಅಂಗಡಿ ಮಾಲಕರು ನಗರ ಪಂಚಾಯತ್ ಮುಖ್ಯಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.

ಈಶ ಎಲೆಕ್ಟ್ರಿಕಲ್ ಸಂಸ್ಥೆಯ ಮಾಲಕ ರಾಜೇಶ್ ಶೆಟ್ಟಿ ಮೇನಾಲರವರ ನೇತೃತ್ವದಲ್ಲಿ ಈ ಮನವಿಯನ್ನು ಮಾಡಲಾಗಿದ್ದು ಆ ರಸ್ತೆಯಲ್ಲಿರುವ ಅಂಗಡಿ ಮಾಲಕ, ಸಂಘ ಸಂಸ್ಥೆಗಳ ಮುಖ್ಯಸ್ಥರು ಈ ಮನವಿಗೆ ಸಹಿ ಮಾಡಿದ್ದಾರೆ.

ಸುಳ್ಯ ನಗರದಲ್ಲಿ ವಾಹನ ಪಾರ್ಕಿಂಗ್‌ಗೆ ಸರಿಯಾದ ವ್ಯವಸ್ಥೆ ಇಲ್ಲದೆ ಖಾಸಗಿ ಹಾಗೂ ಸರಕಾರಿ ವಾಹನಗಳ ನಿಲುಗಡೆಗೆ ಸ್ಥಳದ ಕೊರತೆಯೇ ದೊಡ್ಡ ಸಮಸ್ಯೆಯಾಗಿರುತ್ತದೆ. ಹೀಗಾಗಿ ನಗರದ ಒಳ ರಸ್ತೆಗಳಲ್ಲಿ ಅನುಕೂಲ ಇರುವ ಸ್ಥಳಗಳನ್ನು ಸಾವಜನಿಕರ ವಾಹನ ನಿಲುಗಡೆಗೆ ಬಳಸುತ್ತಿದ್ದಾರೆ. ಸುಳ್ಯ ಜೂನಿಯರ್ ಕಾಲೇಜ್ ರಸ್ತೆಯಲ್ಲಿ ಮಹಿಳಾ ಸಮಾಜದ ಮುಂಭಾಗದಲ್ಲಿ ರಸ್ತೆ ಅಗಲವಾಗಿದ್ದು ವಾಹನ ಪಾರ್ಕಿಂಗ್ ಮಾಡಲು ಅನುಕೂಲಕರ ವ್ಯವಸ್ಥೆ ಇದ್ದು, ಇಲ್ಲಿ ಜೇನು ಸೊಸೈಟಿ, ಲ್ಯಾಂಪ್ ಸೊಸೈಟಿ ಮತ್ತು ಲಯನ್ಸ್ ಕ್ಲಬ್ ಸಭಾಭವನದ ಕಾರ್ಯಕ್ರಮಕ್ಕೆ ಬರುವ ಗ್ರಾಹಕರಿಗೆ, ಸಾರ್ವಜನಿಕರಿಗೆ ಮೀನು ಮಾರುಕಟ್ಟೆ ಗ್ರಾಹಕರಿಗೆ ಈ ಪ್ರದೇಶದಲ್ಲಿ ವಾಹನ ನಿಲುಗಡೆ ಬಳಕೆಗೆ ತುಂಬಾ ಅನುಕೂಲವಾಗಿದೆ.


 ಆದರೆ ಇದೀಗ ನಗರ ಪಂಚಾಯತ್ ವತಿಯಿಂದ ಈ ರಸ್ತೆ ಬದಿಯ ಚರಂಡಿಯನ್ನು ರಸ್ತೆ ಲೆವೆಲ್‌ಗಿಂತ ಎತ್ತರಿಸುವ ದುರಸ್ಥಿ ಕಾಮಗಾರಿ ನಡೆಯುತ್ತಿದ್ದು ಇದರಿಂದ ಈ ಪ್ರದೇಶದಲ್ಲಿ ವಾಹನ ಪಾರ್ಕಿಂಗ್‌ಗೆ ತುಂಬಾ ಅಡಚಣೆಯಾಗಿರತ್ತದೆ. ಆದ್ದರಿಂದ ಸಾರ್ವಜನಿಕ ವಾಹನಗಳ ಪಾರ್ಕಿಂಗ್ ಸೌಲಭ್ಯದ ದೃಷ್ಠಿಯಿಂದ ಚರಂಡಿ ಎತ್ತರಿಸುವ ಕಾಮಗಾರಿಯನ್ನು ಸ್ಥಗಿತಗೊಳಿಸಿ ಈ ಹಿಂದಿನಂತೆಯೇ ವಾಹನ ಪಾರ್ಕಿಂಗ್‌ಗೆ ಅವಕಾಶ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಮನವಿಯ ಪ್ರತಿಯನ್ನು ಸಂಸದರು, ಶಾಸಕರು, ಸಹಾಯಕ ಕಮಿಷನರ್‌ರಿಗೆ ಕಳುಹಿಸಿರುವುದಾಗಿ ರಾಜೇಶ್ ಶೆಟ್ಟಿ ಮೇನಾಲ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.