ಪಂಜ: ಭಜನಾ ಮಂಡಳಿ ವತಿಯಿಂದ ವಿದ್ಯಾರ್ಥಿಗಳಿಗೆ ಪುರಸ್ಕಾರ

Advt_Headding_Middle
Advt_Headding_Middle

 

 

ಪಂಜ ಶ್ರೀ ಶಾರದಾಂಭ ಭಜನಾ ಮಂಡಳಿ ಸದಸ್ಯರ ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯಲ್ಲಿ ತೇರ್ಗಡೆ ಗೊಂಡ ವಿದ್ಯಾರ್ಥಿಗಳಿಗೆ ಪುರಸ್ಕಾರ ಸಮಾರಂಭವು ಸೆ.11 ರಂದು ಮಂಡಳಿಯ ಮಾಸಿಕ ಸಭೆಯಲ್ಲಿ ಜರುಗಿತು. ಭಜನಾ ಮಂಡಳಿಯ ಅಧ್ಯಕ್ಷ ಬಾಲಕೃಷ್ಣ ಪುತ್ಯ ಅಧ್ಯಕ್ಷತೆ ವಹಿಸಿದ್ದರು.

ಶಾರದೋತ್ಸವ ಸಮಿತಿ ಪೂರ್ವಾಧ್ಯಕ್ಷ ಬಾಲಕೃಷ್ಣ ಗೌಡ ಕುದ್ವ, ಭಜನಾ ಮಂಡಳಿಯ ಪೂರ್ವಾಧ್ಯಕ್ಷ ಮಹಾಲಿಂಗ ಸಂಪ, ಮಂಡಳಿಯ ಕಾರ್ಯದರ್ಶಿ ಗುರುಪ್ರಸಾದ್ ತೋಟ, ಜೊತೆ ಕಾರ್ಯದರ್ಶಿ ವಿಶ್ವನಾಥ ಸಂಪ, ಭಜನಾ ಮಂಡಳಿಯ ಸದಸ್ಯ ಶಿವಪ್ಪ ಸಂಕಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಿರಣ್ ಸಂಪ, ಗಗನ್ ಎನ್. ಕೆ., ರೂಪಶ್ರೀ ಪಂಜದಬೈಲು, ಮೋಕ್ಷ ಸಂಪ, ಮಿಥುಲ್ ಕಮಿಲ, ಆದಿತ್ಯ ನೆಕ್ಕಿಲ, ಕಾರ್ತಿಕ್ ನಾಗತೀರ್ಥ ರವರನ್ನು ಪುರಸ್ಕರಿಸಲಾಯಿತು. ಈ ವೇಳೆ ಅವರ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಾಲಕೃಷ್ಣ ಪುತ್ಯ ಸ್ವಾಗತಿಸಿದರು. ಗುರುಪ್ರಸಾದ ತೋಟ ನಿರೂಪಿಸಿದರು. ವಿಶ್ವನಾಥ ಸಂಪ ವಂದಿಸಿದರು. ಬಳಿಕ ಭಜನಾ ಕಾರ್ಯಕ್ರಮ ಜರುಗಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.