ಲಿಖಿತ ದೀಪಕ್ ಕಟ್ಟೆಮನೆಯವರಿಗೆ ಡಾಕ್ಟರೇಟ್

Advt_Headding_Middle
Advt_Headding_Middle

 

ಹಿರಿಯ ರಾಜಕೀಯ ಧುರೀಣ ಭರತ್ ಮುಂಡೋಡಿ ಹಾಗೂ ಶ್ರೀಮತಿ ಅನಿತಾ ದಂಪತಿಗಳ ಪುತ್ರಿ ಹಾಗೂ ಕಟ್ಟೆಮನೆ ದೀಪಕ್ ಅವರ ಪತ್ನಿ ಶ್ರೀಮತಿ ಲಿಖಿತ ದೀಪಕ್ ರವರು ಆಸ್ಟ್ರೇಲಿಯಾ ಸರ್ಕಾರದ ಪೋಸ್ಟ್ ಗ್ರ್ಯಾಜುಯೆಟ್ ಆವಾರ್ಡ್ ಸ್ಕಾಲರ್ ಶಿಪ್ ಪಡೆದು ಅವರು ಮಂಡಿಸಿದ “Study Of Use Of Artificial Topsoils Created From Mine Wastes, Powerplant Waste And Paper Industry Waste In Mine Rehabilitation” ಎಂಬ ಸಂಶೋಧನಾ ಪ್ರಬಂಧಕ್ಕೆ ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಆಸ್ಟ್ರೇಲಿಯಾದ ಮೋನಾಷ್ ವಿಶ್ವವಿದ್ಯಾನಿಲಯದ ಡಾಕ್ಟರೆಟ್ ಪದವಿಯನ್ನು ಪಡೆದಿದ್ದಾರೆ.

ಇವರು ಮೋನಾಷ್ ವಿಶ್ವವಿದ್ಯಾಲಯದ ಎಸೋಸಿಯೇಟ್ ಪ್ರೊಫೆಸರ್ ಗಳಾದ ಮೋಹನ್ ಎಲ್ಲಿಶೆಟ್ಟಿ ಹಾಗೂ ವನೆಸ್ಸಾ ವಾಂಗ್ ರವರ ಮಾರ್ಗದರ್ಶನದಲ್ಲಿ ಈ ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿದ್ದಾರೆ.

ಶ್ರೀಮತಿ ಲಿಖಿತ ಕಟ್ಟೆಮನೆಯವರು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಸುಳ್ಯದ ರೋಟರಿ ವಿದ್ಯಾಸಂಸ್ಥೆಯಲ್ಲಿ ಪೂರೈಸಿ, ಪದವಿ ಪೂರ್ವ ವಿದ್ಯಾಭ್ಯಾಸವನ್ನು ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪಡೆದು ಮಂಗಳೂರಿನ ಪಿ.ಎ. ಎಂಜಿನಿಯರಿಂಗ್ ಕಾಲೇಜಿನಲ್ಲಿ ಬಯೋಟೆಕ್ ಇಂಜಿನಿಯರಿಂಗ್ ಪದವಿ ಹಾಗೂ ಪ್ರತಿಷ್ಠಿತ ವೆಲ್ಲೂರು ವಿಶ್ವವಿದ್ಯಾಲಯದ V.I.T. ಕಾಲೇಜಿನಲ್ಲಿ ಪರಿಸರ ವಿಜ್ಞಾನ ವಿಷಯದಲ್ಲಿ ಎಂ.ಟೆಕ್ ಪದವಿಯನ್ನು ಪಡೆದಿದ್ದಾರೆ. ಶ್ರೀಮತಿ ಲಿಖಿತ ಅವರು ಬಾಳುಗೋಡು ಗ್ರಾಮದ ಕೂಜುಗೋಡು ಕಟ್ಟೆಮನೆ ಶ್ರೀಮತಿ ಪ್ರೇಮ ಹಾಗೂ ಸೀತಾರಾಮ ದಂಪತಿಗಳ ಪುತ್ರ, ಆಸ್ಟ್ರೇಲಿಯಾದ ಮೆಲ್ಬೋರ್ನ್ ನಲ್ಲಿ Ace Contractors ಕಂಪೆನಿಯಲ್ಲಿ ಸೀನಿಯರ್ ಪ್ರೊಜೆಕ್ಟ್ ಮ್ಯಾನೇಜರ್ ಆಗಿ ಕಾರ್ಯ ನೀಡುತ್ತಿರುವ ದೀಪಕ್ ಕಟ್ಟೆ ಮನೆಯವರ ಪತ್ನಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.