ಪಂಜ: ಮಕ್ಕಳ ಭಜನಾ ತರಬೇತಿ ಶಿಬಿರ ಉದ್ಘಾಟನೆ

Advt_Headding_Middle
Advt_Headding_Middle

 

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ , ಜೈ ಕರ್ನಾಟಕ ಯುವಕ ಮಂಡಲ ಮತ್ತು ಕೃಪಾ ಯುವತಿ ಮಂಡಲ ಅಳ್ಪೆ – ಚಿಂಗಾಣಿಗುಡ್ಡೆ ಪಂಜ, ಶ್ರೀ ಶಾರದಾಂಬಾ ಭಜನಾ ಮಂಡಳಿ ಪಂಜ ಇವುಗಳ ಆಶ್ರಯದಲ್ಲಿ ಮಕ್ಕಳ ಭಜನಾ ತರಬೇತಿ ಶಿಬಿರ ಸೆ.12 ರಂದು ಜೈ ಕರ್ನಾಟಕ ಯುವಕ ಮಂಡಲದ ಸಭಾಭವನದಲ್ಲಿ ಜರಗಿತು.

ಕಾರ್ಯಕ್ರಮವನ್ನು ಶ್ರೀ ಕ್ಷೇತ್ರ ಧರ್ಮಸ್ಥಳ, ರಾಜ್ಯ ಭಜನಾ ಪರಿಷತ್ ಪ್ರಧಾನ ಕಾರ್ಯದರ್ಶಿ ಜಯರಾಮ
ನೆಲ್ಲಿತ್ತಾಯ ಉದ್ಘಾಟಿಸಿ ಮಾತನಾಡಿ ” ಮಕ್ಕಳಿಗೆ ಭಜನಾ ತರಬೇತಿ ಮೂಲಕ ಅವರಿಗೆ ಧಾರ್ಮಿಕ ಅರಿವು ಮೂಡಿಸುವ ಉತ್ತಮ ಕಾರ್ಯಕ್ರಮ ಇಲ್ಲಿ ಆಗಿದೆ”ಎಂದು ಅವರು ಹೇಳಿದರು.ಯುವಕ ಮಂಡಲದ
ಅಧ್ಯಕ್ಷ ಲೋಕೇಶ್ ಕೋಡಿ ಸಭಾಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಶಿವಪ್ರಸಾದ್ ಆಲೆಟ್ಟಿ, ತಾಲೂಕು ಭಜನಾ ಪರಿಷತ್ ಗೌರವಾಧ್ಯಕ್ಷ ವಿಶ್ವನಾಥ ರೈ ಅರ್ಗುಡಿ, ತರಬೇತುದಾರೆ ಉಷಾಚಂದ್ರ ಮುಳಿಯ
ಉಪ್ಪಿನಂಗಡಿ, ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ಬಾಲಕೃಷ್ಣ ಪುತ್ಯ, ಯುವತಿ ಮಂಡಲ ಅಧ್ಯಕ್ಷೆ ಜಲಜಾಕ್ಷಿ ಕೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ತೀರ್ಥಾಕ್ಷಿ ಕೋಟಿಯಡ್ಕ ಪ್ರಾರ್ಥಿಸಿದರು.ದಯಾನಂದ ಮೇಲ್ಮನೆ ಸ್ವಾಗತಿಸಿ, ಪ್ರಾಸ್ತಾವನೆಗೈದರು.ಪ್ರಕಾಶ್ ಅಳ್ಪೆ ಮತ್ತು ಗುರುಪ್ರಸಾದ್ ತೋಟ ನಿರೂಪಿಸಿದರು.ಪವನ್ ಬನ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.