Breaking News

ಸುಳ್ಯ ಜೇಸಿಐ ಸಪ್ತಾಹದಲ್ಲಿ ಕೊರೊನಾ ಬಗ್ಗೆ ಜಾಗೃತಿ – ಸಾಧಕರಿಗೆ ಗೌರವಾರ್ಪಣೆ

Advt_Headding_Middle
Advt_Headding_Middle

ಜೇಸಿಐ ಸುಳ್ಯ ಪಯಸ್ವಿನಿ ಮತ್ತು ಜೇಸಿರೆಟ್, ಯುವ ಜೇಸಿ ವಿಭಾಗ, ಪಯಸ್ವಿನಿ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಆಶ್ರಯದಲ್ಲಿ ನಡೆಯುತ್ತಿರುವ ಜೇಸಿ ಸಪ್ತಾಹ ಕಾರ್ಯಕ್ರಮದ ನಾಲ್ಕನೇ ದಿನದ ಅಂಗವಾಗಿ ಸೆ.12 ರಂದು ಕೊರೊನಾ ಜಾಗೃತಿ ಮಾಹಿತಿ ಹಾಗೂ ಸಾಧಕರಿಗೆ ಗೌರವಾರ್ಪಣಾ ಕಾರ್ಯಕ್ರಮ ನಾವೂರು ಕಾಲೊನಿಯಲ್ಲಿ ನಡೆಯಿತು.

ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ದೇವರಾಜ್ ಕುದ್ಪಾಜೆ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸುಳ್ಯ ಸಿ.ಎ.ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ ಉದ್ಘಾಟನೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ
ಜೇಸಿಐ ರಾಷ್ಟ್ರೀಯ ನಿರ್ದೇಶಕ ಅಶೋಕ್ ಚೂಂತಾರ್, ಜರ್ನಲಿಸ್ಟ್ ಯೂನಿಯನ್ ತಾಲೂಕು ಕಾರ್ಯದರ್ಶಿ ಯಶ್ವಿತ್ ಕಾಳಮ್ಮನೆ, ನಾವೂರು ಮಹಮ್ಮಾಯಿ ದೇವಸ್ಥಾನ ಮಲ್ಲ ಭಾಗವಹಿಸಿದ್ದರು. ಸಪ್ತಾಯ ನಿರ್ದೇಶಕ ರಂಜಿತ್ ಕುಕ್ಕೆಟ್ಟಿ ಪ್ರಾಸ್ತಾವಿಕ ಮಾತನಾಡಿದರು.

ಗೌರವಾರ್ಪಣೆ : ಸಮಾರಂಭದಲ್ಲಿ ಹಿರಿಯ ಕಾರ್ಮಿಕ ಅಬ್ದುಲ್ ಕುಂಭಕ್ಕೊಡು, ನಾವೂರು ಕಾಲನಿ ಹಿರಿಯರಾದ ಕಂಜಳ, ಕಲ್ಕುಡ ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ನಾವೂರು, ಅಂಗನವಾಡಿ ಕಾರ್ಯಕರ್ತೆ ಶೋಭಾರನ್ನು ಗೌರವಿಸಲಾಯಿತು.
ಸುರೇಶ್ ಕಾಮತ್ ಸ್ವಾಗತಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.