Breaking News

ಜ್ಞಾನದೀಪದಲ್ಲಿ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಪ್ರದರ್ಶನ ತರಗತಿ

Advt_Headding_Middle
Advt_Headding_Middle

ಭಾರತ್ ಸೇವಕ್ ಸಮಾಜದ ಅಂಗೀಕೃತ ಸಂಸ್ಥೆಯಾದ ಸುಳ್ಯಮತ್ತು ಬೆಳ್ಳಾರೆಯ ಜ್ಞಾನದೀಪ ಶಿಕ್ಷಣ ತರಬೇತಿ ಮತ್ತು ಅಭಿವೃದ್ಧಿ ಸಂಸ್ಥೆಯ ೨೦೧೯-೨೦ನೇ ಸಾಲಿನ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಕಮಿಷನ್ ಕ್ಲಾಸ್(ಪ್ರದರ್ಶನ ತರಗತಿ) ಬೆಳ್ಳಾರೆಯ ಅನುಗ್ರಹ ಸಭಾಂಗಣದಲ್ಲಿ ನಡೆಯಿತು.


ಭಾರತ್ ಸೇವಕ್ ಸಮಾಜದ ಕೋ-ಆರ್ಡಿನೇಟರ್, ಉಪ್ಪಳದ ನ್ಯೂ ಭಾರತ್ ಕಾಲೇಜಿನ ಪ್ರಾಂಶುಪಾಲ ರಘುಕುಮಾರ್ ಮತ್ತು ಶಿಕ್ಷಕ ಈಶ್ವರ ಮಾಸ್ಟರ್ ಮೊಟೆಸ್ಸರಿ ಶಿಕ್ಷಕಿಯರ ತರಬೇತಿಯ ವಿದ್ಯಾರ್ಥಿ ಶಿಕ್ಷಕಿಯರು ಒಂದು ವರ್ಷದಲ್ಲಿ ನಡೆಸಿದ ವಿವಿಧ ಶೈಕ್ಷಣಿಕೆ ಚಟುವಟಿಕೆಗಳು, ದಾಖಲೆಗಳು, ಪ್ರಾಜೆಕ್ಟ್‌ಗಳು, ಪ್ರಾಯೋಗಿಕ ತರಗತಿಗಳು ಹಾಗೂ ಸಂವಹನಾ ತರಗತಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

ಗಮನಸೆಳೆದ ವಸ್ತು ಸಂಗ್ರಹ
ಸಂಸ್ಥೆಯಲ್ಲಿ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿ ಶಿಕ್ಷಕಿಯರು ಮಗುವಿಗೆ ಗುರುತಿಸಿ ಕಲಿಯಲು ಅವಕಾಶ ಮಾಡಿಕೊಡುವ ಕಲಿಕಾ ಪದ್ಧತಿಯ ವಿವಿಧ ಅಧ್ಯಯನ ಮಾದರಿಗಳು ಸೇರಿದಂತೆ ತಾವು ಸಂಗ್ರಹಿಸಿದ ಅಪರೂಪದ ಪಾರಂಪರಿಕ ವಸ್ತುಗಳನ್ನು ಪ್ರದರ್ಶಿಸಿದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ, ಮೊಂಟೆಸ್ಸರಿ ಶಿಕ್ಷಕಿ ಗೀತಾ, ಕ್ರಾಫ್ಟ್ ಶಿಕ್ಷಕ ಗಣೇಶ್ ನಾಯಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.