ಡಾ. ಲೀಲಾಧರ್ ಡಿ.ವಿ.ಯವರಿಗೆ ಜೇಸಿಐ ಯೂತ್ ಇನ್ ಸ್ಪೈಯರ್ ಅವಾರ್ಡ್ ಪ್ರದಾನ

Advt_Headding_Middle
Advt_Headding_Middle

ಸುಳ್ಯ ಜೇಸಿಐ ಸಿಟಿ ವತಿಯಿಂದ ನೀಡಲಾಗುವ ಯೂತ್ ಇನ್ ಸ್ಪೈಯರ್ ಅವಾರ್ಡ್ ಗೆ ಭಾಜನರಾಗಿರುವ ಸುಳ್ಯ ಆಯುರ್ವೇದ ಮೆಡಿಕಲ್ ಕಾಲೇಜಿ‌ನ ಪ್ರಾಂಶುಪಾಲ ಡಾ.ಲೀಲಾಧರ್ ಡಿ.ವಿ.ಯವರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಸೆ.12 ರಂದು ಸುಳ್ಯ ದ ಪರಿವಾರಕಾನದ ಗ್ರ್ಯಾಂಡ್ ಪರಿವಾರ ಹೋಟೆಲ್ ಸಭಾಭವನದಲ್ಲಿ ನಡೆಯಿತು.

ಜೇಸಿಐ ಸುಳ್ಯ ಸಿಟಿ ಕ್ಲಬ್ ಅಧ್ಯಕ್ಷ ವಿನಯ್ ರಾಜ್ ಮಡ್ತಿಲರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೇಸಿ ವಲಯಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥರು ಡಾ.ಲೀಲಾಧರ್ ಡಿ.ವಿ.ಯವರಿಗೆ ಯೂತ್ ಇನ್ ಸ್ಪೈಯರ್ ಅವಾರ್ಡ್ ನ್ನು ಪ್ರದಾನ ಮಾಡಿದರು.
ನಿವೃತ್ತ ಪ್ರಾಂಶುಪಾಲ ಕೆ.ಆರ್.ಗಂಗಾಧರ್ ಅಭಿನಂದನಾ ಭಾಷಣ ಮಾಡಿದರು.

ವೇದಿಕೆಯಲ್ಲಿ ವಲಯ ಉಪಾಧ್ಯಕ್ಷ ಪ್ರದೀಪ್ ಬಾಕಿಲ, ಜೇಸಿ ವಲಯ ಆಡಳಿತ ನಿರ್ದೇಶಕ ರಾಯನ್ ಉದಯ್, ಐಪಿಪಿ ಸತೀಶ್ ನಾಯಕ್, ಕಾರ್ಯಕ್ರಮ ನಿರ್ದೇಶಕ ಲೋಕೇಶ್ ಊರುಬೈಲು ವೇದಿಕೆಯಲ್ಲಿ ದ್ದರು.

ಸುಳ್ಯ ಜೇಸಿ ಸಿಟಿ ಸ್ಥಾಪಕ ಮನಮೋಹನ ಬಳ್ಳಡ್ಕ ಪ್ರಸ್ತಾವನೆ ಗೈದರು.

ಶಶಿಕಾಂತ್ ಮಿತ್ತೂರು ಅಭಿನಂದನಾ ಭಾಷಣಗಾರರ ಪರಿಚಯ ಮಾಡಿದರು.

ಜೇಸಿ ವಾಣಿಯನ್ನು ಶೃತಿ ವಾಚಿಸಿದರು. ಕಾರ್ಯದರ್ಶಿ ಚಂದ್ರಶೇಖರ ಡಿ.ಎಸ್. ಪ್ರಶಸ್ತಿ ಪತ್ರ ವಾಚಿಸಿದರು. ಸಪ್ತಾಹ ನಿರ್ದೇಶಕ ರಂಜಿತ್ ಪಿ.ಜೆ. ವರದಿ ಮಂಡಿಸಿದರು

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.