Breaking News

ಮಂಗಳೂರಿನ ಕಲ್ಕಟ್ಟ ಸ.ಹಿ.ಪ್ರಾ.ಶಾಲಾ ಶಿಕ್ಷಕಿ ಶ್ರೀಮತಿ ಜಯಲಕ್ಷ್ಮಿ ಅವರಿಗೆ ಪ್ರೌಢಶಾಲಾ ಶಿಕ್ಷಕಿಯಾಗಿ ಪದೋನ್ನತಿ

Advt_Headding_Middle
Advt_Headding_Middle

 

ಮಂಗಳೂರು ತಾಲೂಕಿನ ಕಲ್ಕಟ್ಟ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಶ್ರೀಮತಿ ಜಯಲಕ್ಷ್ಮಿ ಜಿ. ಅವರಿಗೆ ಪದೋನ್ನತಿ ಹೊಂದಿದ್ದು ಬಂಟ್ವಾಳ ತಾಲೂಕಿನ ಕಲ್ಲರಕೋಡಿ ಸರಕಾರಿ ಪ್ರೌಢಶಾಲೆಗೆ ಗ್ರೇಡ್ -2 ಶಿಕ್ಷಕಿಯಾಗಿ ಭಡ್ತಿ ಹೊಂದಿದ್ದಾರೆ.


ಇವರು 1998ರಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕದ್ರಿಯಲ್ಲಿ ಶಿಕ್ಷಕ ವೃತ್ತಿಗೆ ಸೇರಿ 17 ವರುಷ ಸೇವೆ ಸಲ್ಲಿಸಿದ್ದಾರೆ.ತದನಂತರ ಮಂಗಳೂರಿನ ಕಲ್ಕಟ್ಟ ಸರಕಾರಿ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡು ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ, ಇದೀಗ ಪ್ರೌಢಶಾಲಾ ಶಿಕ್ಷಕಿಯಾಗಿ ಭಡ್ತಿಗೊಂಡಿದ್ದಾರೆ.
ಇವರು ಅತ್ಯುತ್ತಮ ” ನಲಿಕಲಿ ” ಶಿಕ್ಷಕಿಯಾಗಿದ್ದು ಶಾಲಾ ವಿದ್ಯಾರ್ಥಿಗಳ, ಶಿಕ್ಷಕರ ಎಸ್ .ಡಿ. ಯಂ. ಸಿ. ಯವರ ಪ್ರೀತಿಗೆ ಪಾತ್ರರಾಗಿದ್ದಾರೆ. ಪ್ರತಿಭಾನ್ವಿತೆ ಶಿಕ್ಷಕಿಯಾಗಿರುವ ಶ್ರೀಮತಿ ಜಯಲಕ್ಷ್ಮಿಯವರು ಇತಿಹಾಸ ವಿಭಾಗದ ಎಂ. ಎ. ಪರೀಕ್ಷೆಯಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದಿಂದ 9ನೇ rank ಗಳಿಸಿದ್ದಾರೆ.
ಸಮನ್ವಯ ಶಿಕ್ಷಣ ಸಂಪನ್ಮೂಲ ವ್ಯಕ್ತಿ ಯಾಗಿಯೂ ಇವರು ತರಬೇತಿಯನ್ನು ನೀಡಿದ್ದು, ಶಿಕ್ಷಕರ ರಸಪ್ರಶ್ನೆ ಸ್ಪರ್ಧೆಯಲ್ಲಿ ತಾಲೂಕು ಮಟ್ಟದಲ್ಲಿ ಪ್ರಥಮ, ಹಾಗೂ ಜಿಲ್ಲಾಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿರುತ್ತಾರೆ. ಕರ್ನಾಟಕ ರಾಜ್ಯ ಸರಕಾರಿ ನೌಕರರ ನಾಟಕ ಸ್ಪರ್ಧೆಯಲ್ಲಿ ಜಿಲ್ಲಾಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ನೂರ ಐವತ್ತಕ್ಕೂ ಹೆಚ್ಚು ಚುಟುಕುಗಳನ್ನು ಬರೆದಿರುವ ಇವರು ನಲಿಕಲಿ ” ಮಕ್ಕಳ ಸ್ವಕಲಿಕೆಗಾಗಿ ಪ್ರೇರಣ ಎಡುಕಾನ್ ಯು ಟ್ಯೂಬ್ ಚಾನೆಲ್ ಮೂಲಕ ವೀಡಿಯೊ ಪಾಠಗಳನ್ನು ತಯಾರಿಸಿ ಕಲಿಕೆಗೆ ಪ್ರೇರೇಪಿಸಿದ್ದಾರೆ. ಅನೇಕ ಪೇಪರ್ ಕ್ರಾಫ್ಟ್ ಗಳನ್ನೂ ತಯಾರಿಸಿದ ಶ್ರೀಮತಿ ಜಯಲಕ್ಷ್ಮಿ ಅವರಿಗೆ ಪ್ರೌಢ ಶಾಲೆಗೆ ಭಡ್ತಿ ಪಡೆದ ದಿನವೇ ಪ್ರತಿಷ್ಠಿತ ಜೇಸಿಐ ಮಂಗಳಗಂಗೋತ್ರಿ ಕೊಣಾಜೆ ಯಿಂದ “ಜೆಸಿಐ ಉತ್ತಮ ಶಿಕ್ಷಕಿ ” ಪ್ರಶಸ್ತಿ ಪಡೆದಿರುತ್ತಾರೆ.
ಇವರ ಪತಿ ವೈ. ವಿ. ನಾಯ್ಕ್ ಕೇಂದ್ರ ತೆರಿಗೆ ಮತ್ತು ಕಸ್ಟಮ್ಸ್ ಇಲಾಖೆ ಯಲ್ಲಿ ಸುಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಪುತ್ರಿ ಪ್ರತೀಕ್ಷಾ ಯಂ. ಎಸ್. ಡಿ. ಯಂ. ಆಯುರ್ವೇದ ಕಾಲೇಜಿನಲ್ಲಿ ಬಿ. ಎ. ಯಂ.ಎಸ್. ಕಲಿಯುತ್ತಿದ್ದಾಳೆ. ಪುತ್ರ ಪ್ರತೀಕ್ ಯಂ. ವಿ. ರಾಮಕೃಷ್ಣ ಶಾಲೆ ಬಂಟ್ಸಹಾಸ್ಟೆಲ್ ನಲ್ಲಿ 10 ನೇ ತರಗತಿ ಓದುತ್ತಿದ್ದಾನೆ. ಪ್ರಸ್ತುತ ಮಂಗಳೂರಿನ ಕುಂಪಲದಲ್ಲಿ ನೆಲೆಸಿರುವ ಇವರು ಮೂಲತಃ ಸುಳ್ಯ ತಾಲೂಕು ಜಾಲ್ಸೂರು ನಿವಾಸಿ ಶ್ರೀ ಲಕ್ಷ್ಮಣ ನಾಯ್ಕ್ ಮತ್ತು ಸರಸ್ವತಿ ದಂಪತಿಗಳ ಸುಪುತ್ರಿ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.