Breaking News

ಬಳ್ಪ: ಅಂಗನವಾಡಿ ಕೇಂದ್ರಗಳಲ್ಲಿ ಪೋಷಣ್ ಅಭಿಯಾನ

Advt_Headding_Middle
Advt_Headding_Middle

 

ಬಳ್ಪ ಗ್ರಾಮದ ಸಂಪ್ಯಾಡಿ ಮತ್ತು ಎಣ್ಣೆಮಜಲು ಅಂಗನವಾಡಿ ಕೇಂದ್ರಗಳ ಜಂಟಿ ಆಶ್ರಯದಲ್ಲಿ ಸೆ. 10ರಂದು ನಡೆದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಸಂಬಂಧ ಪಟ್ಟ ಪೋಷಣ್ ಅಭಿಯಾನ ಕಾರ್ಯಕ್ರಮದಡಿಯಲ್ಲಿ ಸಮುದಾಯ ಆಧಾರಿತ ಪೌಷ್ಟಿಕ ಸಪ್ತಾಹ ಕಾರ್ಯಕ್ರಮ, ಹೆಣ್ಣುಮಕ್ಕಳ ದಿನಾಚರಣೆ ಮತ್ತು ಅಂಗನವಾಡಿಯಲ್ಲಿ ಕೈತೋಟ ನಿರ್ಮಾಣ, ಸ್ವಚ್ಛತಾ ಕಾರ್ಯಕ್ರಮ ಮತ್ತು 0-5 ವರ್ಷದೊಳಗಿನ ಎಲ್ಲಾ ಮಕ್ಕಳ ಎತ್ತರ, ತೂಕ, ಕೈ ತೋಳಿನ ಸುತ್ತಳತೆ ಮಾಡಲಾಯಿತು.


ಈ ಸಂದರ್ಭದಲ್ಲಿ ಬಾಲವಿಕಾಸ ಸಮಿತಿ ಅಧ್ಯಕ್ಷೆ ಹೊನ್ನಮ್ಮ. ಜೆ., ಬಾಲವಿಕಾಸ ಸಮಿತಿ ಸದಸ್ಯರಾದ ವಿಶ್ವನಾಥ. ರೈ, ಕಿರಿಯ ಆರೋಗ್ಯ ಮಹಿಳಾ ಸಹಾಯಕಿ ಶ್ರೀಮತಿ ಬಿ. ಎನ್. ಭಾಗ್ಯ, ಆಶಾ ಕಾರ್ಯಕರ್ತೆಯರಾದ ಶ್ರೀಮತಿ ರಮಾ. ಕೆ., ಮತ್ತು ಶ್ರೀಮತಿ ರಾಧಾ. ಕೆ ಯವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುಟಾಣಿ ಹೆಣ್ಣುಮಕ್ಕಳು ಕಾರ್ಯಕ್ರಮ ಉದ್ಘಾಟಿಸಿದರು. ಪೌಷ್ಟಿಕ ಸಪ್ತಾಹದ ಬಗ್ಗೆ ಬಿ. ಎನ್. ಭಾಗ್ಯಯವರು ಮಾಹಿತಿ ನೀಡಿದರು. ಪೌಷ್ಟಿಕ ಉಪಯುಕ್ತ ಆಹಾರವನ್ನು ತಯಾರಿಸಿದ ಎಲ್ಲರಿಗೂ ಬಹುಮಾನ ವಿತರಣೆ ಮಾಡಲಾಯಿತು. ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ಪೋಷಕರು, ಅಂಗನವಾಡಿ ಸಹಾಯಕಿ ಮೋಹಿನಿ. ಎಸ್. ಹಾಜರಿದ್ದರು. ಗಿರಿಜಾ. ಎಸ್. ಪ್ರಾರ್ಥನೆ ಮಾಡಿದರು. ಅಂಗನವಾಡಿ ಕಾರ್ಯಕರ್ತೆ ಯಮುನಾ. ಕೆ. ಕಾರ್ಯಕ್ರಮ ನಿರೂಪಿಸಿ, ಅಂಗನವಾಡಿ ಕಾರ್ಯಕರ್ತೆ ಹರಿಣಾಕ್ಷಿ. ಎ ಸ್ವಾಗತಿಸಿದರು. ಆಶಾ ಕಾರ್ಯಕರ್ತೆ ರಮಾ. ಕೆ. ಧನ್ಯವಾದ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.