Breaking News

ಅತಿವೃಷ್ಟಿ ಪಟ್ಟಿಯಲ್ಲಿ ಸುಳ್ಯ ತಾಲೂಕು ಸೇರ್ಪಡೆಗೆ ಬ್ಲಾಕ್ ಕಾಂಗ್ರೆಸ್ ಮುಖ್ಯಮಂತ್ರಿ ಗಳಿಗೆ ಮನವಿ

Advt_Headding_Middle
Advt_Headding_Middle

 

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕು ಅತಿಹೆಚ್ಚು ಮಳೆ ಬೀಳುವ ಪ್ರದೇಶವಾಗಿದ್ದು ಇಲ್ಲಿ ಹಲವಾರು ಮನೆಗಳಿಗೆ, ಕ್ರಷಿ ಬೆಳೆಗಳಿಗೆ ಹಾನಿಯಾಗಿ ಜನತೆ ಸಂಕಷ್ಟ ಕ್ಕೆ ಒಳಗಾಗಿದ್ದಾರೆ. ಅದರೆ ಅತಿವ್ರಷ್ಟಿ ಪಟ್ಟಿಯಲ್ಲಿ ಸುಳ್ಯ ಹೆಸರು ನಾಪತ್ತೆ ಯಾಗಿದೆ.


ಇದರ ಬಗ್ಗೆ ತಕ್ಷಣ ಗಮನಹರಿಸಿ ಅತಿವೃಷ್ಟಿ – ಪ್ರವಾಹ ಪೀಡಿತ ಪಟ್ಟಿಗೆ ಸುಳ್ಯ ತಾಲೂಕನ್ನು ಸೇರ್ಪಡೆ ಗೊಳಿಸಲು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಯಪ್ರಕಾಶ್ ರೈ ಯವರ ನೇತ್ರತ್ವದಲ್ಲಿ ತಹಶಿಲ್ದಾರ್ ಮೂಲಕ ಮುಖ್ಯಮಂತ್ರಿ ಗಳಿಗೆ ಮತ್ತು ಜಿಲ್ಲಾಧಿಕಾರಿ ಯವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಚಾರ ಸಮಿತಿ ಅಧ್ಯಕ್ಷ ರಾಜರಾಮ್ ಬೆಟ್ಟ ,ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಶಂಸುಧ್ಧಿನ್, ಇಂಟಕ್ ವಿಧಾನ ಸಭಾ ಕ್ಷೇತ್ರ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಪೂರ್ಣಚಂದ್ರ ಕಣೆಮರಡ್ಕ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ, ನಂದರಾಜ್ ಸಂಕೇಶ್, ಭವಾನಿ ಶಂಕರ ಕಲ್ಮಡ್ಕ, ಮೋಹಿತ್ ಹರ್ಲಡ್ಕ, ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.