ದಾನಿಗಳಿಂದ ಅರೆಭಾಷೆ ಅಕಾಡೆಮಿ ಗ್ರಂಥಾಲಯಕ್ಕೆ ಪುಸ್ತಕಗಳ  ಆಹ್ವಾನ

Advt_Headding_Middle
Advt_Headding_Middle

 

ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ತನ್ನ ಗ್ರಂಥಾಲಯದ ಪುಸ್ತಕ ಭಂಡಾರವನ್ನು ಹೆಚ್ಚಿಸುವುದಕ್ಕಾಗಿ ಅರೆಭಾಷೆ ಪ್ರದೇಶದ ಭಾಷೆ, ಸಂಸ್ಕೃತಿ, ಭೌಗೋಳಿಕತೆ, ವಿಜ್ಞಾನ, ಸಂಶೋಧನೆ, ಅಭಿನಂದನೆಗ್ರಂಥ, ಮಾಸಿಕ, ಪಾಕ್ಷಿಕ ಪತ್ರಿಕೆ, ಸ್ಮರಣ ಸಂಚಿಕೆ ಹೀಗೆ ಸಂಬಂಧಪಟ್ಟ ಎಲ್ಲಾ ತರಹದ ಪುಸ್ತಕಗಳನ್ನು ಎಲ್ಲ ಭಾಷೆಗಳಿಂದಲೂ ದಾನಿಗಳಿಂದ ಆಹ್ವಾನಿಸುತ್ತಿದೆ.

 

ಸಂಗ್ರಹದ ಜೊತೆಗೆ ಎಲ್ಲ ಪುಸ್ತಕಗಳು ಅರೆಭಾಷಿಗರಿಗೆ ಸುಲಭವಾಗಿ ದೊರೆಯುವಂತೆ ಮಾಡಲು ಡಿಜಿಟಲೈಸ್ ಮಾಡುವ, ಯೋಜನೆಯು ಇದೆ. ಇದು ಭಾಷೆಯ ಮೂಲ, ಇದರ ವ್ಯಾಪ್ತಿ ಅಧಿಕೃತವಾಗಿ ದಾಖಲಾಗಲು ಸಹಾಯವಾಗಬಹುದೆಂದು ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಯನ್ನು ರಿಜಿಸ್ಟ್ರಾರ್ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕಾಫಿ ಕೃಪಾ ಕಟ್ಟಡ, ಮಡಿಕೇರಿ(ದೂ: ೦೮೨೭೨-೨೨೩೦೫೫, ಮೊ ನಂ. ೬೩೬೨೫೨೨೬೭೭) ಇಲ್ಲಿಂದ ಪಡೆದುಕೊಳ್ಳಬಹುದು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.