Breaking News

ಸುಳ್ಯ ಪಯಸ್ವಿನಿ ಜೇಸಿಐ ಸಪ್ತಾಹ ಸಮಾರೋಪ ಕಮಲಪತ್ರ, ಪಯಸ್ವಿನಿ ಶ್ರೀ, ಮೌನ ಸಾಧಕ, ಹೈನುಗಾರಿಕಾ ಸಾಧಕ, ಕಲಾಶ್ರೀ ಪ್ರಶಸ್ತಿ ಪ್ರದಾನ

Advt_Headding_Middle
Advt_Headding_Middle

 

ಜೇಸಿಐ ಸುಳ್ಯ ಪಯಸ್ವಿನಿ ಮತ್ತು ಜೇಸಿರೆಟ್, ಯುವ ಜೇಸಿ ವಿಭಾಗ ಹಾಗೂ ಪಯಸ್ವಿನಿ ಜೇಸಿಸ್ ಚಾರಿಟೇಬಲ್ ಟ್ರಸ್ಟ್ ಸುಳ್ಯ ಇದರ ಆಶ್ರಯದಲ್ಲಿ ಒಂದು ವಾರಗಳ ನಡೆದ ಜೇಸಿಐ ಸಪ್ತಾಹ ಇದರ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಸೆ.15 ರಂದು ಸುಳ್ಯದ ಜೇಸಿ ಭವನದಲ್ಲಿ ನಡೆಯಿತು. ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ದೇವರಾಜ್ ಕುದ್ಪಾಜೆಯವರ ಅಧ್ಯಕ್ಷ ತೆಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಪ್ರಾಂಶುಪಾಲ ಪ್ರೊ.ಸೀತಾರಾಮ ಕೇವಳ ಅಭಿನಂದನಾ ಭಾಷಣಗೈದರು. ಜೇಸಿಐ ರಾಷ್ಟ್ರೀಯ ಪೂರ್ವ ಉಪಾಧ್ಯಕ್ಷ ಮುರಳಿ ಶ್ಯಾಂ ಮುಖ್ಯ ಅತಿಥಿಗಳಾಗಿದ್ದರು.

 

ಜೇಸಿಐ ರಾಷ್ಟ್ರೀಯ ಕಾರ್ಯಕ್ರಮ ಸಂಯೋಜಕ ಅಶೋಕ್ ಚೂಂತಾರು, ಸುಳ್ಯ ಪಯಸ್ವಿನಿ ಸೀನಿಯರ್ ಲೀಜನ್ ಅಧ್ಯಕ್ಷ ದಿನೇಶ್ ಮಡಪ್ಪಾಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಜೇಸಿಐ ಸಪ್ತಾಹ ನಿರ್ದೇಶಕ ರಂಜಿತ್ ಕುಕ್ಕೆಟ್ಟಿ, ಜೇಸಿರೇಟ್ ಅಧ್ಯಕ್ಷೆ ಚೈತನ್ಯ ದೇವರಾಜ್, ಯುವ ಜೇಸಿ ಅಧ್ಯಕ್ಷ ಚಿತ್ತಾರ ಬಂಟ್ವಾಳ್, ಚೇತನ್ ಚಿಲ್ಪಾರ್ ,ಜೇಸಿ ಲತಾ ಕುದ್ಪಾಜೆ, ಜೇಸಿ ಗುರುರಾಜ್ ಅಜ್ಜಾವರ ವೇದಿಕೆಯಲ್ಲಿದ್ದರು.

ಸಮಾರಂಭದಲ್ಲಿ ಸುಳ್ಯ ಪಯಸ್ವಿನಿ ಜೇಸಿಐ ಪೂರ್ವಾಧ್ಯಕ್ಷ ಎಂ.ಬಿ. ಸದಾಶಿವರಿಗೆ ಕಮಲಪತ್ರ, ಪತ್ರಕರ್ತ ಗಂಗಾಧರ ಕಲ್ಲಪಳ್ಳಿಯವರಿಗೆ ಪಯಸ್ವಿನಿ ಶ್ರೀ, ಕೃಷಿಕ ಚಿಲ್ಪಾರು ಆನಂದ ಗೌಡರಿಗೆಮೌನ ಸಾಧಕ, ಕೊಡಿಯಾಲ ಬೈಲು ನಾರಾಯಣ ನಾಯಕ್ ರಿಗೆ ಹೈನುಗಾರಿಕೆ, ಗಾಯಕ ಗಣೇಶ್ ಬಿ.ಎಸ್. ರಿಗೆ ಕಲಾಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.