Breaking News

ಬೆಳ್ಳಾರೆ: ವಿಶ್ವಕರ್ಮ ಜಯಂತಿ, ಧಾರ್ಮಿಕ ಸಭೆ, ಸನ್ಮಾನ

Advt_Headding_Middle
Advt_Headding_Middle


ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸುಳ್ಯ ತಾಲೂಕು ಮತ್ತು ಸುಳ್ಯ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘ ಬೆಳ್ಳಾರೆ ಇವುಗಳ ಆಶ್ರಯದಲ್ಲಿ ಶ್ರೀ ವಿಶ್ವಕರ್ಮ ಜಯಂತಿ, ವಿಶ್ವಕರ್ಮ ಪೂಜೆ, ಧಾರ್ಮಿಕ ಸಭೆ ಮತ್ತು ಸನ್ಮಾನ ಕಾರ್ಯಕ್ರಮ ಸೆ. 16 ರಂದು‌ ಬೆಳ್ಳಾರೆಯ ಪನ್ನೆಯಲ್ಲಿರುವ ಶ್ರೀ ಗಾಯತ್ರಿ ವಿಶ್ವಕರ್ಮ ನಿವೇಶನದಲ್ಲಿ ನಡೆಯಿತು.

ಬೆಳಿಗ್ಗೆ ಧ್ವಜಾರೋಹಣದ ಬಳಿಕ ವಿಶ್ವೇಶ್ವರ ಪುರೋಹಿತರ ನೇತೃತ್ವದಲ್ಲಿ ವಿಶ್ವಕರ್ಮ ಪೂಜೆ ಆರಂಭಗೊಂಡಿತು. ಮಧ್ಯಾಹ್ನ ವಿಶ್ವಕರ್ಮ ಪೂಜೆ ಸಮಾಪ್ತಿಯ ಬಳಿಕ ಸುಳ್ಯ ತಾಲೂಕು ವಿಶ್ವ ಬ್ರಾಹ್ಮಣ ಸಮಾಜ ಸೇವಾ ಸಂಘದ ಅಧ್ಯಕ್ಷ ಸಿ.ಹೆಚ್. ಸೋಮಶೇಖರರ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಶ್ರೀಮತಿ ತ್ರಿವೇಣಿ ವಿಶ್ವೇಶ್ವರ ಪುರೋಹಿತ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿವೃತ್ತ ಅಧ್ಯಾಪಕ ಪುರುಷೋತ್ತಮ ಆಚಾರ್ಯ ಕುಂಠಿಕಾನ ನಿವೃತ್ತ ಉಪ ಅರಣ್ಯಾಧಿಕಾರಿ ಕೆ. ನಾರಾಯಣ ಆಚಾರ್ಯ ಕಾರ್ತೋಡಿಯವರನ್ನು ವೇದಿಕೆಯಲ್ಲಿ ಉಪಸ್ಥಿತರಿದ್ದ
ಸುಳ್ಯ ತಾಲೂಕು ಕಚೇರಿಯ ಉಪ ತಹಶಿಲ್ದಾರ್ ವಿನೋದ್ ಕುಮಾರ್ ಎ. ಸನ್ಮಾನಿಸಿ ಗೌರವಿಸಿದರು. ಸನ್ಮಾನ ಪತ್ರವನ್ನು ವಾಸುದೇವ ಆಚಾರ್ಯ ವಿ ವಾಚಿಸಿದರು. ವಿಶ್ವೇಶ್ವರ ಪುರೋಹಿತ ಬಾಳಿಲ ಧಾರ್ಮಿಕ ಉಪನ್ಯಾಸ ನೀಡಿದರು. ಪಿ.ಯು.ಸಿ.ಯಲ್ಲಿ ತಾಲೂಕಿಗೆ ಹೆಚ್ಚು ಅಂಕ ಗಳಿಸಿದ ವಿಶ್ವಕರ್ಮ ಸಮಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ತಾಲೂಕು ಶಿಕ್ಷಣ ಸಂಯೋಜಕರಾದ ವಸಂತ ಏನೆಕಲ್ಲು ವೇದಿಕೆಯಲ್ಲಿ ಉಪಸ್ಥಿತರಿದ್ದು ಸ್ವಾಗತಿಸಿ ಶುಭ ಹಾಾರಿಸಿದರು. ಸುಮಾ ವಿ. ಆಚಾರ್ಯ ಪ್ರಾರ್ಥಿಸಿ, ನಾರಾಯಣ ಆಚಾರ್ಯ ಮುಂಡುಗಾರು ವಂದಿಸಿದರು. ಸುಳ್ಯ ರೋಟರಿ ಶಾಲಾ ಶಿಕ್ಷಕಿ ಶ್ರೀಮತಿ ನಳಿನಾಕ್ಷಿ ವಿ. ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.