Breaking News

ಸೆ. 20  ರಿಂದ 26  ರವರೆಗೆ ವಳಲಂಬೆಯಲ್ಲಿ ಉದ್ಯೋಗ ನೈಪುಣ್ಯ ತರಬೇತಿ ಶಿಬಿರ

Advt_Headding_Middle
Advt_Headding_Middle

ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಯತೀಶ್ ಉಳ್ಳಾಲ್ ಅವರಿಂದ ಉದ್ಘಾಟನೆ

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ. 2೦ ರಿಂದ 26 ರವರೆಗೆ ಆತ್ಮ ನಿರ್ಭರ ಭಾರತ ಉದ್ಯೋಗ ನೈಪುಣ್ಯ ತರಭೇತಿ ಶಿಬಿರ ನಡೆಯಲಿದ್ದು ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಯತೀಶ್ ಉಳ್ಳಾಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ ಎಂದು ವೆಂಕಟ್ ದಂಬೆಕೋಡಿ ತಿಳಿಸಿದರು.

ಅವರು ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದಲ್ಲಿ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
15 ವರ್ಷ ಮೇಲ್ಪಟ್ಟ ಸ್ತ್ರೀ/ಪುರುಷರು ಈಗಾಗಲೆ
ನೋಂದಣಿ ಮಾಡಿದ್ದು 160 ಅರ್ಜಿಗಳು ಸಲ್ಲಿಕೆಯಾಗಿವೆ ಅಂದರು.

ನೋಂದಣಿ
ಶುಲ್ಕ ರೂ 250 ಇರಲಿದ್ದು ಪ್ರತಿ ವಿಷಯಕ್ಕೆಗರಿಷ್ಠ ೨೫ ಮಂದಿಗೆ ಅವಕಾಶವಿದೆ ಎಂದರು. ನಿಗದಿತ ಸಂಖ್ಯೆಗಿಂತ ಹೆಚ್ಚು ನೋಂದಣಿ ಆಗಿರುವ ವಿಷಯಕ್ಕೆ ಎರಡು ತಂಡಗಳಾಗಿ ವಿಂಗಡಿಸಿ ತರಭೇತಿ ನೀಡಲಾಗುವುದು ಎಂದರು. ಪತ್ರಿಕಾಗೋಷ್ಠಿಯಲ್ಲಿ ಗುತ್ತಿಗಾರು ಸಹಕಾರಿ ಸಂಘದ ನಿರ್ದೇಶಕ ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ತರಭೇತಿ ಶಿಬಿರದ ಸಂಯೋಜಕ ಕಿಶೋರ್ ಕುಮಾರ್ ಪೈಕ, ಸಹ ಸಂಯೋಕ ಮುಕೇಶ್ ದೇವ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.