ಪಂಚಾಯತ್‌ರಾಜ್ ಇಂಜಿನಿಯರ್ ಸುಳ್ಯದ ಗೋವರ್ಧನರವರಿಗೆ ಬೀಳ್ಕೊಡುಗೆ ಸಮಾರಂಭ

Advt_Headding_Middle
Advt_Headding_Middle

 

ಪುತ್ತೂರು ಉಪಭಾಗದ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆಯಲ್ಲಿ ಕಳೆದ 12  ವರ್ಷಗಳಿಂದ ಪಂಚಾಯತ್‌ರಾಜ್ ಇಂಜಿನಿಯರ್ ಆಗಿ ಸೇವೆ ಸಲ್ಲಿಸಿ ಆ.  31 ರಂದು ನಿವೃತ್ತಿ ಹೊಂದಿದ ಗೋವರ್ಧನ್ ಎಂ. ರವರಿಗೆ ಪಂಚಾಯತ್‌ರಾಜ್ ಇಂಜಿನಿಯರಿಂಗ್ ಇಲಾಖೆ ಉಪವಿಭಾಗ ಹಾಗೂ ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಬೀಳ್ಕೊಡುಗೆ ಸಮಾರಂಭ ಕಛೇರಿಯ ಸಭಾಂಗಣದಲ್ಲಿ ಜರಗಿತು.


ಹಿರಿಯ ಗುತ್ತಿಗೆದಾರರಾದ ವಿ.ಕೆ. ಆನಂದರವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸತ್ಯೇಂದ್ರ ಸಾಲಿಯಾನ್ ಮಾತನಾಡಿ ಗೋವರ್ಧನ್‌ರವರು ಸತತ ೩೭ ವರುಷಗಳಿಂದ ಪ್ರಾಮಾಣಿಕತೆ, ನಿಷ್ಠಾವಂತ ಅಧಿಕಾರಿಯಾಗಿ ಜನಮನ್ನಣೆ ಗಳಿಸಿದವರು. ಅತೀ ಹೆಚ್ಚು ವರುಷಗಳು ಸೇವೆ ಮಾಡಿದ ಇವರ ಸ್ಥಾನವನ್ನು ತುಂಬಲು ಇವರೇ ಸಾಟಿ ಎಂದು ಅವರು ಹೇಳಿದರು.
ನಿವೃತ್ತಗೊಂಡ ಇಂಜಿನಿಯರ್ ಗೋವರ್ಧನ ಎಂ. ರವರು ಮಾತನಾಡಿ ಪುತ್ತೂರಿನಲ್ಲಿ ೧೨ ವರುಷಗಳಿಂದ ಕಾರ್ಯನಿರ್ವಹಿಸುತ್ತಿರುವ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿ, ಸಹೋದ್ಯೋಗಿಗಳು ನೀಡಿದ ಸಹಕಾರಕ್ಕೆ ನಾನು ಚಿರಋಣಿಯಾಗಿರುತ್ತೇನೆ ಎಂದು ಹೇಳಿದರು. ಗೋವರ್ಧನರವರಿಗೆ ಪಂಚಾಯತ್‌ರಾಜ್ ಇಂಜಿನಿಯರ್‌ಗಳಿಂದ ಮತ್ತು ತಾಲೂಕು ಸಿವಿಲ್ ಗುತ್ತಿಗೆದಾರರ ಸಂಘದಿಂದ ಮತ್ತು ಅವರ ಹಿತೈಷಿಗಳಿಂದ ವಿಶೇಷವಾಗಿ ಶಾಲು ಹೊಂದಿಸಿ ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಅವರ ಪತ್ನಿ ಮಾಯಾ ಗೋವರ್ಧನ್ ಹಾಗೂ ಪುತ್ರಿ ಎಂ.ಟೆಕ್ ಪದವೀಧರೆ ಶ್ವೇತಾರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.