ಪಾಂಡಿಗದ್ದೆ ಶಾಲೆಗೆ ಕಂಪ್ಯೂಟರ್ ಕೊಡುಗೆ

Advt_Headding_Middle
Advt_Headding_Middle

ಹಳೆ ವಿದ್ಯಾರ್ಥಿಗಳು, ಪೋಷಕರು, ಊರಿನ ದಾನಿಗಳು, ಶಿಕ್ಷಕರ ನೆರವಿನಿಂದ ದ.ಕ.ಜಿ.ಪಂ.ಕಿ.ಪ್ರಾ.ಶಾಲೆ ಪಾಂಡಿಗದ್ದೆಗೆ ಕಂಪ್ಯೂಟರ್ ಕೊಡುಗೆ ನೀಡಲಾಗಿದ್ದು ಅದರ ಉದ್ಘಾಟನಾ ಕಾರ್ಯಕ್ರಮವನ್ನು ಸೆ.೧೬ರಂದು ನೆರವೇರಿಸಲಾಯಿತು.


ಪಂಜ ವೃತ್ತದ ಶಿಕ್ಷಣ ಸಂಯೋಜಕರಾದ ಶ್ರೀಮತಿ ಸಂಧ್ಯಾ ಕುಮಾರಿ ಉದ್ಘಾಟನೆಯನ್ನು ನೆರವೇರಿಸಿ, ಆಧುನಿಕ ಜಗತ್ತಿನಲ್ಲಿ ಕಂಪ್ಯೂಟರ್ ಅತ್ಯಂತ ಅವಶ್ಯಕ ಸಾಧನವಾಗಿದ್ದು ಶಾಲೆಯ ಎಲ್ಲಾ ಕೆಲಸ ಕಾರ್‍ಯಗಳಿಗೆ ಅತ್ಯಂತ ಅವಶ್ಯಕವಾಗಿದೆ. ಇದರ ಸಂಪೂರ್ಣ ಸದ್ಬಳಕೆಯಾಗಿ ಪೂರ್ಣ ಪ್ರಯೋಜನ ವಿದ್ಯಾರ್ಥಿಗಳಿಗೆ ದೊರೆಯಲಿ ಎಂದು ಶುಭ ಹಾರೈಸಿದರು.
ಸಭೆಯ ಅಧ್ಯಕ್ಷತೆಯನ್ನು ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ವಾಚಣ್ಣ ಕೆರೆಮೂಲೆ ವಹಿಸಿ, ನಮ್ಮ ಶಾಲೆಯೂ ಕಂಪ್ಯೂಟರ್ ಹೊಂದುವ ಮೂಲಕ ಇನ್ನಷ್ಟು ವೇಗವಾಗಿ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದ್ದು, ಈ ಬೆಳವಣಿಗೆ ನಿರಂತರವಾಗಿರಲಿ ಎಂದು ನುಡಿದರು.
ಕಾರ್‍ಯಕ್ರಮದಲ್ಲಿ ಪೋಷಕರಾದ ಕಮಲಾಕ್ಷಿ, ಕುಶಾಲಪ್ಪ ಗೌಡ, ಮೋಹನ್ ಮೇಲ್ಪಾಡಿ, ಹೇಮಲತಾ, ಪವಿತ್ರ, ಚೈತ್ರ, ನಳಿನಾಕ್ಷಿ, ಸರೋಜಿನಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯಗುರುಗಳಾದ ಶ್ರೀಮತಿ ಧರ್ಮಾವತಿ ಟಿ. ಸ್ವಾಗತಿಸಿದರು. ಸಹಶಿಕ್ಷಕರಾದ ಅಶೋಕ್ ಕುಮಾರ್ ವಂದಿಸಿದರು.
ಸಹಶಿಕ್ಷಕರಾದ ಯಶೋಧರ ಕೆ. ಕಾರ್‍ಯಕ್ರಮ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.