ಬೆಳ್ಳಾರೆ  ಸ್ನೇಹಿತರ ಕಲಾ ಸಂಘ  : ವಾರ್ಷಿಕ ಮಹಾಸಭೆ 

Advt_Headding_Middle
Advt_Headding_Middle

ಬೆಳ್ಳಾರೆ ಸ್ನೇಹಿತರ ಕಲಾ ಸಂಘ ಇದರ ೨೦೧೯-೨೦ ನೇ ಸಾಲಿನ ವಾರ್ಷಿಕ ಮಹಾಸಭೆಯು ಸೆ. ೧೩ ಬೆಳ್ಳಾರೆಯ ಸ್ನೇಹಿತರ ಕಲಾ ಸಂಘದ ಸಭಾಂಗಣದಲ್ಲಿ ಸಂಘದ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ಕುರುಂಬುಡೇಲು ಇವರ ಅಧ್ಯಕ್ಷತೆಯಲ್ಲಿ ಜರುಗಿತು.


ಸಂಘದ ಕಾರ್ಯದರ್ಶಿ ಸಂಜಯ್ ನೆಟ್ಟಾರ್ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ವಸಂತ ಪಡ್ಪು ವಾರ್ಷಿಕ ಜಮಾ ಖರ್ಚು ಲೆಕ್ಕಪತ್ರ ಮಂಡಿಸಿದರು. ಕಾರ್ಯಕ್ರಮದ ಅವಲೋಕನ ನಡೆಯಿತು. ಸಂಘಕ್ಕೆ ಸಿದ್ದಪಡಿಸಲಾದ ನೂತನ ಕಾರ್ಯಕ್ರಮಗಳನ್ನು ಅಂಗೀಕರಿಸಲಾಯಿತು. ಸಭೆಯಲ್ಲಿ ಸೇರಿದ ಸದಸ್ಯರು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ೨೦೨೦-೨೧ನೇ ಸಾಲಿನ ನೂತನ ಪದಾಧಿಕಾರಿಗಳನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಸಂಜಯ್ ನೆಟ್ಟಾರ್ ನಿಕಟ ಪೂರ್ವಾಧ್ಯಕ್ಷರಾಗಿ ಕೊರಗಪ್ಪ ನಾಯ್ಕ ಕುರುಂಬುಡೇಲು, ಉಪಾಧ್ಯಕ್ಷರಾಗಿ ಶಶಿಧರ ಮಣಿಯಾಣಿ ಬೀಡು, ಕಾರ್ಯದರ್ಶಿಯಾಗಿ ವಸಂತ ಪಡ್ಪು, ಕೋಶಾಧಿಕಾರಿಯಾಗಿ ಶ್ರೀನಿವಾಸ ಕುರುಂಬುಡೇಲು ಜತೆ ಕಾರ್ಯದರ್ಶಿಯಾಗಿ ಸುಪ್ರಿತ್ ಬಸ್ತಿಗುಡ್ಡೆ, ಕ್ರೀಡಾ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಉಮೇಶ್ ನೆಟ್ಟಾರು ಹಾಗೂ ಶೇಷಪ್ಪ ಕುಲಾಲ್ ಬಸ್ತಿಗುಡ್ಡೆ ,ಶಿವರಾಮ ನಾಯಕ್ ಪನ್ನೆ, ಪದ್ಮನಾಭ ಚೂಂತಾರು, ಚಿದಾನಂದ ಪನ್ನೆ , ಸತೀಶ್ ಕುಮಾರ್ ಕಿಲಂಗೋಡಿ, ಮಾಧವ ಪುಡ್ಕಜೆ, ಇವರನ್ನು ಕಾರ್ಯಕಾರಿ ಸಮಿತಿ ಸದಸ್ಯರನ್ನು ಆರಿಸಲಾಯಿತು. ಅಜಪಿಲ ಮಹಾವಿಷ್ಣುಮೂರ್ತಿ ಸೇವಾ ಸಮಿತಿ ಅಧ್ಯಕ್ಷರಾದ ಅಮೃತ ಕುಮಾರ್ ಕಿಲಂಗೋಡಿ, ನಿಕಟಪೂರ್ವಾಧ್ಯಕ್ಷ ಆನಂದ ಗೌಡ ಪಡ್ಪು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಚೇತನ್ ಪಡ್ಪು ಸ್ವಾಗತಿಸಿ, ಕಾರ್ಯದರ್ಶಿ ಸಂಜಯ್ ನೆಟ್ಟಾರ್ ವಂದಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.