ಹಾಜಿ ಅಬ್ದುಲ್ಲಾ ಮಲ್ನಾಡ್ ಹಾಗೂ ಗುರುದತ್ತ್ ನಾಯಕ್ ರವರಿಗೆ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle

 

 

ಸುಳ್ಯತಾಲೂಕು ವಾಲಿಬಾಲ್ ಅಸೋಸಿಯೇಷನ್ ಮತ್ತು ಸುಳ್ಯ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಇದರ ವತಿಯಿಂದ ಉದ್ಯಮಿಗಳಾದ ಗುರು ಕೇಬಲ್ ನೆಟ್ ವರ್ಕ್ ಮಾಲಕ,ಕ್ರೀಡಾ ಪ್ರೋತ್ಸಾಹಕರು ಹಾಗೂ ಕ್ರೀಡಾ ಪೋಷಕರಾದ ಗುರುತ್ತದ್ ನಾಯಕ್ ಹಾಗೂಮಲ್ನಾಡ್ ಕಾಶ್ಯೂಶ್ ಮಾಲಕ, ಕೊಡುಗೈದಾನಿ,ಕೈಗಾರಿಕೋದ್ಯಮಿ ಹಾಜಿ ಅಬ್ದುಲ್ಲಾ ಮಲ್ನಾಡ್ ರವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ಸೆ.19ರಂದು ಕೆವಿಜಿ ಸುಳ್ಯ ಹಬ್ಬ ಸಮಿತಿ ಕಛೇರಿಯಲ್ಲಿ ನಡೆಯಿತು.


ಜಿಲ್ಲಾ ವಾಲಿಬಾಲ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಎನ್ ಜಯಪ್ರಕಾಶ್ ರೈ,ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ಬಿ.ಕೆ ಮಾಧವ,ಗೌರವಧ್ಯಕ್ಷ ಎನ್.ಎ ರಾಮಚಂದ್ರ,ತಾಲೂಕು ವಾಲಿಬಾಲ್ ಅಸೋಸಿಯೇಷನ್ ಅಧ್ಯಕ್ಷ ಎಸ್ ಸಂಶುದ್ದೀನ್, ನ.ಪಂಚಾಯತ್ ಮಾಜಿ ಸದಸ್ಯ ಕೆ.ಎಂ ಮುಸ್ತಫಾ ನುಡಿನಮನ ಸಲ್ಲಿಸಿದರು.
ತಾಲೂಕು ವಾಲಿಬಾಲ್ ಅಸೋಸಿಯೇಷನ್ ಉಪಾಧ್ಯಕ್ಷ ರಜ್ಜುಭಯ್ಯಾ,ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಮಾಜಿ ಅಧ್ಯಕ್ಷ ರಾಜುಪಂಡಿತ್,ಸುಳ್ಯ ತಾಲೂಕು ಬ್ಯಾಡ್ಮಿಂಟನ್ ಅಸೋಸಿಯೇಷನ್ ನ ಮನೋಜ್ ಕುಮಾರ್, ವಿಜಯಕುಮಾರ್,ಉದ್ಯಮಿ ಅತ್ತಾವುಲ್ಲಾ, ಪತ್ರಕರ್ತ ಶರೀಫ್ ಜಟ್ಟಿಪಳ್ಳ ಉಪಸ್ಥಿತರಿದ್ದರು. ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ಕಾರ್ಯದರ್ಶಿ ದೊಡ್ಡಣ್ಣ ಬರಮೇಲು ಸ್ವಾಗತಿಸಿ, ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಕಾರ್ಯದರ್ಶಿ ಕೆ.ಟಿ. ವಿಶ್ವನಾಥ್ ವಂದಿಸಿದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.