ಸಂಪಾಜೆ: ವಿದ್ಯಾರ್ಥಿಗಳಿಗೆ ಸನ್ಮಾನ

Advt_Headding_Middle
Advt_Headding_Middle

 

 

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಸಂಪಾಜೆ. ಕ.ಸಾ.ಪ.ಘಟಕ ಆಯೋಜಿಸಿದ ಸಂಪಾಜೆ ಸಣ್ಣಯ್ಯ ಪಟೇಲ್ ದತ್ತಿ ಕಾರ್ಯಕ್ರಮ ಮತ್ತು ಹೋಬಳಿ ವ್ಯಾಪ್ತಿಯ SSLC ಮತ್ತು PUC ಕನ್ನಡ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಸೆ.19ರಂದು ಸಂಪಾಜೆ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕೊ.ಜಿ.ಸಾ.ಪ ಅದ್ಯಕ್ಷರಾದ ಲೋಕೇಶ್ ಸಾಗರ್ ರವರು ಮಾತನಾಡಿ,ಜಿಲ್ಲೆಯಲ್ಲಿ ಕನ್ನಡ ಭಾಷಾವಿಷಯದಲ್ಲಿ ಅಪೂರ್ವ ಸಾಧನೆ ಮಾಡಲು ಕಸಾಪ ನೀಡಿದ ಪ್ರೋತ್ಸಾಹದ ಬಗ್ಗೆ ವಿವರಿಸಿದರು.


ಸಣ್ಣಯ್ಯ ಪಟೇಲ್ ದತ್ತಿ ಜಾನಪದ ಸೊಗಡು ವಿಚಾರದ ಬಗ್ಗೆ ಕುಶಾಲನಗರದ ಅಧ್ಯಾಪಕಿ ಶ್ರೀಮತಿ ತುಳಸಿನಿ ಸುಬ್ರಮಣಿ ಉಪನ್ಯಾಸ ನೀಡಿ, ಜನಪದದ ಮಹತ್ವ ಬಗ್ಗೆ ವಿಶ್ಲೇಷಿಸಿದರು.

ಮುಖ್ಯ ಅತಿಥಿ ಜಿಲ್ಲಾ ಕಸಾಪ ಪಧಾದಿಕಾರಿ ಲೋಕನಾಥ್ ಅಮೆಚೂರ್ ಮಾತನಾಡಿ, ಸಂಪಾಜೆ ಘಟಕ ಎದುರಿಸುತ್ತಿರುವ ಸವಾಲು ಮತ್ತು ಹಾದಿಯ ಬಗ್ಗೆ ವಿಷ್ಲೇಶಿಸಿದರು.

ಈ ಸಂದರ್ಭದಲ್ಲಿ ಸಂಪಾಜೆ ಹೋಬಳಿ ವ್ಯಾಪ್ತಿಯ ಸಂಪಾಜೆ, ಚೆಂಬು, ಪೆರಾಜೆ ,ಮದೆನಾಡು ವ್ಯಾಪ್ತಿಯಲ್ಲಿ sslc ಮತ್ತುpuc ಕನ್ನಡ ವಿಷಯದಲ್ಲಿ ಅತ್ಯುತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅದ್ಯಕ್ಷತೆ ವಹಿಸಿದ್ದ ಕಸಾಪ ,ಸಂಪಾಜೆ ಅದ್ಯಕ್ಷರೂ ,ಪಯಸ್ವಿನಿ ಸೊಸೈಟಿಯ ಅದ್ಯಕ್ಷ ಯನ್.ಸಿ.ಅನಂತ್ ರವರು ಕೊಡಗಿನಲ್ಲಿ‌ ಭಾಷಾ ಬೆಳವಣಿಗೆಯಲ್ಲಿ ,ಕಸಾಪದ ಕೊಡುಗೆಯನ್ನು ಶ್ಲಾಘಿಸುತ್ತಾ ,ಮುಂದಿನ ದಿನಗಳಲ್ಲಿ ಕಸಾಪದದ ಯೋಜನೆಗಳನ್ನು ಸಭೆಗೆ ವಿವರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.