ರೈತರಿಗೆ, ಕಾರ್ಮಿಕರಿಗೆ, ಸರಕಾರದಿಂದ ಅನ್ಯಾಯ

Advt_Headding_Middle
Advt_Headding_Middle

 

ಸುಳ್ಯದಲ್ಲಿ ಸಂಘಟನೆಗಳ ಪ್ರತಿಭಟನೆ

ಕಾರ್ಮಿಕ ಕಾಯ್ದೆ, ಭೂ ಸುಧಾರಣೆ ಕಾಯ್ದೆ ತಿದ್ದುಪಡಿ, ಅಗತ್ಯ ಸರಕುಗಳ ಕಾಯ್ದೆ ತಿದ್ದುಪಡಿ, ವಿದ್ಯುತ್ ಖಾಸಗೀಕರಣ, ಎ.ಪಿ.ಎಂ.ಸಿ. ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತ ಸಂಘ, ಕಾರ್ಮಿಕ ಸಂಘದಿಂದ ಪ್ರತಿಭಟನಾ ಸಭೆಯು ಸೆ.21 ರಂದು ಸುಳ್ಯ ತಾಲೂಕು ಕಚೇರಿ ಎದುರು ನಡೆಯಿತು.

ಪ್ರತಿಭಟನೆ ಯಲ್ಲಿ ಮಾತನಾಡಿದ ಕಾರ್ಮಿಕ ಮುಖಂಡ ಕೆ.ಪಿ.ಜಾನಿಯವರು “ಕೇಂದ್ರ ಸರಕಾರ ಜನ ವಿರೋಧಿ ಕಾಯ್ದೆ ಜಾತಿಗೊಳಿಸುತ್ತಿದೆ. ಕಾರ್ಮಿಕ ನೀತಿಯಿಂದ ಕಾರ್ಮಿಕರಿಗೆ ಅನ್ಯಾಯವಾಗಿದೆ. ಕಾರ್ಪೊರೇಟ್ ಕಂಪೆನಿಗಳಿಗೆ ಅನುಕೂಲವಾಗುವ ಪರಿಸ್ಥಿತಿ. ಮೊದಲು 8 ಗಂಟೆ ದುಡಿಯುತ್ತಿದ್ದ ನಾವು ಈ ಕಾಯ್ದೆಯ ಪ್ರಕಾರ 12 ಗಂಟೆ ದುಡಿಯಬೇಕಾದ ಪರಿಸ್ಥಿತಿ. ಇದು ಸರಿಯೇ? ಎಂದು ಜಾನಿ ಪ್ರಶ್ನಿಸಿದರು. ಭೂ ಸುಧಾರಣೆ ಮಸೂದೆಯೂ ಇದೇ ಹಾದಿಯಲ್ಲಿದೆ ಎಂದು ಆರೋಪಿಸಿದರು.

ವಿದ್ಯುತ್ ಖಾಸಗೀಕರಣ ಮಾಡಿದರೆ ಈಗ ರೈತರಿಗೆ ಸಿಗುವ ವುಚಿತ ವಿದ್ಯುತ್ ಉಚಿತವಾಗಿ ಸಿಗಲಿದೆಯೇ. ಖಾಸಗಿ ಯಾಗಿ ಪಡೆದಾತ ಉಚಿತವಾಗಿ ನೀಡಿಯಾನೆ ಎನ್ನುವುದನ್ನು ನಾವು ತಿಳಿಯಬೇಕು. ಆದ್ದರಿಂದ ಈ ಕಾನೂನನ್ನು ಅರಿತು ಮುನ್ನಡೆಯಬೇಕು.‌ಕಾಯ್ದೆಗಳಿಂದಾಗುವ ತೊಂದರೆಗಳನ್ನು ಅರಿತು ನಾವು ಪ್ರತಿಭಟಿಸುತ್ತಿದ್ದೇವೆ. ಈ ವಿರೋಧಿ ಕಾಯ್ದೆಗಳ ಕುರಿತು ಸಂಪಾಜೆಯಿಂದ ಮಂಗಳೂರಿನವರೆಗೆ ನಡೆಸುತ್ತೇವೆ ಎಂದು ಹೇಳಿದರು.

ಚಿಂತಕ ಎಂ.ಬಿ.ಸದಾಶಿವರು ಮಾತನಾಡಿ ಸರಕಾರಗಳು ಜನರ ಕಷ್ಟಕ್ಕೆ ಸ್ಪಂದಿಸದೇ ತಾರತಮ್ಯ ನೀತಿ ಅನುಸರಿಸುತ್ತಿದೆ. ಮೂರು ಮಸೂದೆಗಳಿಗೆ ತಿದ್ದು ಪಡಿ ತಂದಿರುವುದು ಅಂಬಾನಿ, ಅದಾನಿಯವರಿಗಾಗಿ. ಇದನ್ನು ನಾವು ಅರಿತು ಕೋಳ್ಳಬೇಕು” ಎಂದು ಹೇಳಿದರು.

 

ಪ್ರತಿಭಟನೆ ಯಲ್ಲಿ ರೈತ ಸಂಘದ ಅಧ್ಯಕ್ಷ ಲೋಲಜಾಕ್ಷ ಭೂತಕಲ್ಲು ಮಾತನಾಡಿ ಸರಕಾರಗಳು ಜಾರಿಗೊಳಿಸುವ ಕಾನೂನನ್ನು ಶಾಸಕರು ಅರ್ಥೈಸಿಕೊಳ್ಳಬೇಕು. ಅದು ಜನ ವಿರೋಧಿ ಎಂದು ಗೊತ್ತಾದ ಬಳಿಕ ಸುಮ್ಮನಿರದೆ ಅದನ್ನು ವಿರೋಧಿಸಿ ಶಾಸಕರು ಕೂಡಾ ರೈತರ, ಕಾರ್ಮಿಕರ ಪರವಾಗಿ ನಿಲ್ಲಬೇಕು” ರಂದು ಹೇಳಿದರು.

ರೈತ ಮುಖಂಡ ತೀರ್ಥರಾಮ ಉಳುವಾರು ಮಾತನಾಡಿ ರೈತರಿಗೆ, ಕಾರ್ಮಿಕರಿಗೆ ಅನ್ಯಾಯವಾದರೆ ನಾವು ಸತ್ಯ, ಧರ್ಮದಿಂದ ಹೋರಾಡಿ ನ್ಯಾಯ ಪಡೆಯುತ್ತೇವೆ ಎಂದು ಹೇಳಿದರು.

ಕೃಷಿಕರಾದ ನೂಜಾಲು ಪದ್ಮನಾಭ ಗೌಡರು ಮಾತನಾಡಿ ಸರಕಾರಗಳು ಮಹಾತ್ಮಗಾಂಧಿ, ಅಂಬೇಡ್ಕರ್ ರವರ ನೀತಿಯನ್ನು ನಾವು ಅಳವಡಿಸುವುದಾಗಿ ಹೇಳುತ್ತಿದ್ದರೂ ಆ ರೀತಿ ಕೃತಿಯಲ್ಲಿ ತೋರಿಸುತ್ತಿಲ್ಲ ಎಂದು ಹೇಳಿದರು.

ಕಾರ್ಮಿಕರಾದ ಕೆ.ಕೆ. ಶ್ರೀಧರ್ ಮಾತನಾಡಿ ಸಂಪಾಜೆ ಭಾಗದಲ್ಲಿ ಅಡಿಕೆ ಹಳದಿ ರೋಗ ಬಂದಿದ್ದರೂ ಸರಕಾರ ಪರಿಹಾರ ನೀಡದೆ, ರೈತ ವಿರೋಧಿ ನೀತಿ ಜಾರಿಗೊಳಿಸಿದ್ದು ಖಂಡನೀಯ ಎಂದು ಹೇಳಿದರು

ಪ್ರತಿಭಟನೆಯಲ್ಲಿ ರೈತ ಸಂಘದ ತೀರ್ಥರಾಮ ಉಳುವಾರು, ನ್ಯಾಯವಾದಿ ದಿನೇಶ್ ಮಡಪ್ಪಾಡಿ, ಪೈ, ಸೆಬಾಸ್ಟಿಯನ್ ಮಡಪ್ಪಾಡಿ, ತೀರ್ಥರಾಮ ನೆಡ್ಚಿಲ್, ಜಯಪ್ರಕಾಶ್ ನೆಕ್ರೆಪ್ಪಾಡಿ, ಮಂಜುನಾಥ್ ಮಡ್ತಿಲ, ಲೋಕಯ್ಯ ಅತ್ಯಾಡಿ, ಬೆಳ್ಯಪ್ಪ ಮುಡೂರು, ಹರಿಶ್ಚಂದ್ರ ಪಂಡಿತ್, ನೂಜಾಲು ಪದ್ಮನಾಭ ಗೌಡ, ವಿಶ್ವನಾಥ ನೆಲ್ಲಿಬಂಗಾರಡ್ಕ, ಸೀತಾರಾಮ ಕಾಡುಪಂಜ, ಕೆ.ಕೆ.ಶ್ರೀಧರ್, ಅನಿಷ್ ಕಡಪಳ, ಮೋನಪ್ಪ ರಾಜರಾಂಪುರ, ಮಂಜುನಾಥ್ ಬಳ್ಳಾರಿ ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.