ಪೆರುವಾಜೆಯಲ್ಲಿ ಪ್ರಧಾನ ಮಂತ್ರಿ ಪ್ರಜಾ ಸುರಕ್ಷಾ ಯೋಜನಾ ಕಾರ್ಯಕ್ರಮ

Advt_Headding_Middle
Advt_Headding_Middle

 

ಸೇವೆಯಿಂದ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ : ಎಸ್.ಅಂಗಾರ

ಸಮಾಜದ ಅಶಕ್ತ ವರ್ಗದ ಕಣ್ಣೀರನ್ನು ಒರೆಸಲು ಸೇವೆಯಿಂದ ಮಾತ್ರ ಸಾಧ್ಯ ದೇಶದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಸಮಾಜದ ಕಟ್ಟಕೊನೆಯ ವ್ಯಕ್ತಿಗೂ ಕೂಡ ಸರಕಾರದ ಸವಲತ್ತುಗಳನ್ನು ಒದಗಿಸುವುದು ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರ ಮುಖ್ಯ ಧ್ಯೇಯವಾಗಿದೆ ಎಂದು ಶಾಸಕ ಎಸ್. ಅಂಗಾರ ಅವರು ಹೇಳಿದರು.


ಅವರು ಭಾರತೀಯ ಜನತಾ ಪಾರ್ಟಿ ಪೆರುವಾಜೆ ಗ್ರಾಮ ಸಮಿತಿ ವತಿಯಿಂದ ರಾಜ್ಯ ಮತ್ತು ಕೇಂದ್ರ ಸರಕಾರದ ಯೋಜನೆಗಳ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ದೇಶದ ಪ್ರಧಾನಮಂತ್ರಿಯವರ ಆಶಯವನ್ನು ಕಂಕಣಬದ್ಧವಾಗಿ ಸ್ವೀಕರಿಸಿದ ಪ್ರತಿಯೊಬ್ಬ ಕಾರ್ಯಕರ್ತರು ಕೂಡ ಸರಕಾರದ ಯೋಜನೆಗಳನ್ನು ಜನತೆಗೆ ತಲುಪಿಸುವಲ್ಲಿ ಸಕ್ರಿಯರಾಗಿ ಇಂತಹ ಕೆಲಸಗಳಿಂದ ಮಾತ್ರ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದು ಅವರು ಹೇಳಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಂದಿ ಅಸೋಸಿಯೇಟ್ಸ್ ಬೆಂಗಳೂರು ಇದರ ಆಡಳಿತ ನಿರ್ದೇಶಕರಾದ ಲಕ್ಷ್ಮೀನಾರಾಯಣ ಐವರ್ನಾಡು ಮಾತನಾಡಿ ಸರಕಾರದ ಪ್ರತಿಯೊಂದು ಯೋಜನೆಗಳು ಕೂಡ ಸಮಾಜದ ಜನತೆಗೆ ಸಿಕ್ಕಿದಾಗ ಮಾತ್ರ ಯೋಜನೆಗಳ ಯೋಜನೆಗಳಿಂದ ಪ್ರತಿಫಲ ಬಯಸಲು ಸಾಧ್ಯ ಎಂದು ಹೇಳಿದರು.
ವೇದಿಕೆಯಲ್ಲಿ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ ಇದರ ಪ್ರಧಾನ ಕಾರ್ಯದರ್ಶಿಗಳಾದ ಸುಭೋದ್ ಮೇನಾಲ, ಬೂತ್ ಸಮಿತಿ ಅಧ್ಯಕ್ಷರುಗಳಾದ ರಮೇಶ್ ಮಠತಡ್ಕ ರೂಪಾನಂದ,ಚಿದಾನಂದ ಶೆಟ್ಟಿ ಬಜ, ಜೆ.ಡಿ ಅಡಿಟೋರಿಯಂ ಮಾಲಕರಾದ ಪದ್ಮನಾಭ ಶೆಟ್ಟಿ ಪೆರುವಾಜೆ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಉಮೇಶ್ ಕೆಎಂಬಿ, ನಾರಾಯಣ ಕೊಂಡೆ ಪ್ಪಾಡಿ ಉಪಸ್ಥಿತರಿದ್ದರು. ನಾರಾಯಣ ಕೊಂಡಪ್ಪಾಡಿ ಸ್ವಾಗತಿಸಿ, ಉಮೇಶ್ ಕೆಎಂಬಿ ವಂದಿಸಿದರು. ಶ್ರುತಕೀರ್ತಿ ಪ್ರಾರ್ಥಿಸಿ,ಶಿವಪ್ರಸಾದ್ ಪೆರುವಾಜೆ ಕಾರ್ಯಕ್ರಮ ನಿರೂಪಿಸಿದರು .
ಸುಮಾರು ಐನೂರಕ್ಕೂ ಮಿಕ್ಕಿ ಗ್ರಾಮಸ್ಥರು ಹತ್ತಾರು ಯೋಜನೆಗಳ ಸದುಪಯೋಗವನ್ನು ಪಡೆದುಕೊಂಡರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.