ಎ.ಸಿ. ನೇತೃತ್ವದಲ್ಲಿ ನ.ಪಂ. ಅಧಿಕಾರಿಗಳೊಂದಿಗೆ ಸಭೆ

Advt_Headding_Middle
Advt_Headding_Middle

ನಗರದ ತ್ಯಾಜ್ಯ ಹೊಸ ತಂತ್ರಜ್ಞಾನದೊಂದಿಗೆ ಕಲ್ಚೆರ್ಪೆಯಲ್ಲೇ ವಿಲೇ

 

ಅ.1ರಂದು ಕಲ್ಚೆರ್ಪೆ ಪರಿಸರದ ಜನರೊಂದಿಗೆ ಸಮಾಲೋಚನೆಗೆ ನಿರ್ಧಾರ

ನಗರ ಪಂಚಾಯತ್ ಆವರಣ ಸೇರಿದಂತೆ ನಗರದ ಕೆಲವು ಕಡೆ ಕಸ ತುಂಬಿ ದುರ್ನಾತ ಬೀರುತ್ತಿದ್ದು, ಕಸ ವಿಲೇವಾರಿಯನ್ನು ಆಧುನಿಕ ತಂತ್ರಜ್ಞಾನ ಬಳಸಿ ಕಲ್ಚೆರ್ಪೆ ಯಲ್ಲೇ ಮಾಡಲು ಎ.ಸಿ. ನೇತೃತ್ವದಲ್ಲಿ ಇಂದು ನ.ಪಂ. ಅಧಿಕಾರಿಗಳ ಸಭೆ ಸುಳ್ಯ ತಾಲೂಕು ಕಚೇರಿಯಲ್ಲಿ ನಡೆಯಿತು.

ಸುಳ್ಯಕ್ಕೆ ಬಂದಿದ್ದ ಪುತ್ತೂರು ಸಹಾಯಕ ಕಮಿಷನರ್ ಡಾ.ಯತೀಶ್ ಉಳ್ಳಾಲ್ ರವರು ನ.ಪಂ. ಮುಖ್ಯಾಧಿಕಾರಿ ಮತ್ತಡಿ ಹಾಗೂ ಇತರ ಸಿಬ್ಬಂದಿಗಳನ್ನು ತಾಲೂಕು ಕಚೇರಿಗೆ ಕರೆಸಿಕೊಂಡು ಕಸ ವಿಲೇವಾರಿ ಕುರಿತು ಚರ್ಚೆ ನಡೆಸಿದರು. ನ.ಪಂ. ಆಡಳಿತಾಧಿಕಾರಿಯೂ ಆಗಿರುವ ತಹಶೀಲ್ದಾರ್ ಅನಂತಶಂಕರ್ ಕೂಡಾ ಈ ಚರ್ಚೆ ಯಲ್ಲಿದ್ದರು.
ಸುಧೀರ್ಘ ಮಾತುಕತೆ ನಡೆದು ಕಲ್ಚೆರ್ಪೆ ಯಲ್ಲೇ ಕಸ ವಿಲೇ ಮಾಡುವುದು ಮತ್ತು ಅದಕ್ಕಿಂತಲೂ ಮೊದಲು ಸ್ಥಳೀಯ ರೊಂದಿಗೆ ಸಮಾಲೋಚನೆ ನಡೆಸಲು ಎ.ಸಿ.ಯವರು ಸೂಚನೆ ನೀಡಿದರೆನ್ನಲಾಗಿದೆ.‌ ಅದರಂತೆ ಅ.1 ರಂದು ಎ.ಸಿ.ಯವರಿದ್ದು ಕಲ್ಚೆರ್ಪೆ ಯಲ್ಲೇ ಊರ ಪ್ರಮುಖರೊಂದಿಗೆ ಚರ್ಚಿಸಲು ಮತ್ತು ಆಧುನಿಕ ತಂತ್ರಜ್ಞಾನ ದ ಕುರಿತು ಊರವರಿಗೆ ಮನವರಿಕೆ ಮಾಡಿಕೊಡುವ ನಿಟ್ಟಿನಲ್ಲಿಯೂ ಸಭೆ ನಡೆಸಲು ನಿರ್ಧರಿಸಲಾಗಿದೆ. ಸಭೆಗೆ ಅರಣ್ಯ ಇಲಾಖೆಯವರನ್ನು ಕರೆಯುವುದೆಂದು ನಿರ್ಧರಿಸಲಾಯಿತು.

ಸಭೆಯಲ್ಲಿ 2008ರಿಂದ ಕಲ್ಚೆರ್ಪೆ ಯಲ್ಲಿ ಕಸ ವಿಲೇವಾರಿ ಗೆ ನ.ಪಂ. ಬಳಸಿಕೊಂಡ ಅನುದಾನದ ಕುರಿತು ಪ್ರಸ್ತಾಪವಾಯಿತೆಂದೂ ಹೇಳಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.