Breaking News

ಕೊರೋನಾ ಪರೀಕ್ಷೆ ಕಡ್ಡಾಯವಲ್ಲ, ಸ್ವಯಂ ಪ್ರೇರಿತ: ದ.ಕ. ಸಿಇಒ ಸ್ಪಷ್ಟನೆ

Advt_Headding_Middle
Advt_Headding_Middle

 

ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಕೊರೋನ ಪರೀಕ್ಷೆ ನಡೆಸುವುದು ಕಡ್ಡಾಯವಲ್ಲ. ಆದರೆ ಜಿಲ್ಲೆಯ ಎಲ್ಲರೂ ಸ್ವಯಂ ಪ್ರೇರಿತವಾಗಿ ಕೊರೋನ ಪರೀಕ್ಷೆ ಮಾಡಿಸಬಹುದು ಎಂದು ಜಿಲ್ಲಾ ಪಂಚಾಯತ್ ಪ್ರಕಟನೆ ಸ್ಪಷ್ಟಪಡಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ನಾಗರಿಕರು ಕಡ್ಡಾಯವಾಗಿ ಕೊರೊನಾ ಪರೀಕ್ಷೆ ನಡೆಸಬೇಕೆಂದು ನಿನ್ನೆ ಜಿಲ್ಲಾ ಪಂಚಾಯತ್ ಹೊರಡಿಸಿದ ಅಧಿಕೃತ ಆದೇಶ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು.

ಆ ಆದೇಶದ ಕುರಿತು ಇಂದು ಸ್ಪಷ್ಟನೆ ನೀಡಿರುವ ಜಿಲ್ಲಾ ಪಂಚಾಯತ್ ಸಿಇಒ ಆರ್.ಸೆಲ್ವಮಣಿ, ನಿನ್ನೆ ಜಿಲ್ಲಾ ಪಂಚಾಯತ್ ಹೊರಡಿಸಿದ ಆದೇಶದಲ್ಲಿ ಕಡ್ಡಾಯವಾಗಿ ಕೊರೊನಾ ಪರೀಕ್ಷೆಗೆ ಒಳಪಡಿಸಬೇಕೆಂದು ಮುದ್ರಣದ ಸಂದರ್ಭದಲ್ಲಿ ಉಂಟಾದ ದೋಷ ಸಾರ್ವಜನಿಕರಲ್ಲಿ ಗೊಂದಲವನ್ನು ಸೃಷ್ಟಿಸಿದೆ. ಪರೀಕ್ಷೆ ಕಡ್ಡಾಯ ಅಲ್ಲ. ಸ್ವಯಂ ಪ್ರೇರಿತವಾಗಿ ನಡೆಯುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದರಿಂದ ಕೋವಿಡ್ ಪರೀಕ್ಷೆಗಳನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಸುತ್ತೋಲೆಯ ಪ್ರಕಾರ, ಪರೀಕ್ಷೆಗಳನ್ನು ನಡೆಸಲು ದ.ಕ. ಜಿಲ್ಲೆಯ ನಿರ್ದಿಷ್ಟ ವಲಯಗಳಲ್ಲಿ ಶಿಬಿರಗಳನ್ನು ಏರ್ಪಡಿಸಲಾಗುವುದು. ಪರೀಕ್ಷೆಗೆ ಒಳಗಾಗಲು ಮಂಗಳೂರಿನಲ್ಲಿ 21 ಕೇಂದ್ರಗಳು, ಬಂಟ್ವಾಳದಲ್ಲಿ 19, ಬೆಳ್ತಂಗಡಿಯಲ್ಲಿ 13, ಪುತ್ತೂರಿನಲ್ಲಿ 10 ಮತ್ತು ಸುಳ್ಯದಲ್ಲಿ ಏಳು ಕೇಂದ್ರಗಳಿವೆ. ಶಿಬಿರದ ಅವಧಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 5 ರವರೆಗೆ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.