ದಕ್ಷಿಣ ಕನ್ನಡ ಜಿಲ್ಲಾ ಸಾಮಾನ್ಯ ಸೇವಾ ಕೇಂದ್ರದ ಪ್ರತಿನಿಧಿಗಳ ಸಭೆ

Advt_Headding_Middle
Advt_Headding_Middle

 

ದಕ್ಷಿಣ ಕನ್ನಡ ಜಿಲ್ಲಾ ಸಾಮಾನ್ಯ ಸೇವಾಕೇಂದ್ರ (ವಿಎಲ್‌ಇ) ಸೊಸೈಟಿ ಇದರ ಸುಳ್ಯ ತಾಲೂಕು ಸಭೆ ಸೆ.೨೬ ರಂದು ಸಿ.ಎ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ರೋಹಿತ್ ಕುಮಾರ್ ವಹಿಸಿದ್ದರು.


ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಜಿ ಎಸ್. ಅಬೂಬಕ್ಕರ್ ಆರ್ಲಪದವು ಮಾಹಿತಿ ನೀಡಿದರು. ವೇದಿಕೆಯಲ್ಲಿ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಹೇಮಚಂದ್ರ, ಜಿಲ್ಲಾ ಉಪಾಧ್ಯಕ್ಷ ನವೀನ್ ಸುಳ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಸರಕಾರಗಳಿಂದ ಸಾರ್ವಜನಿಕರಿಗೆ ದೊರೆಯುವ ಸೇವಾ ಮಾಹಿತಿಯನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಯಾವ ರೀತಿ ಚಟುವಟಿಕೆಗಳನ್ನು ತಮ್ಮ ತಮ್ಮ ಸೇವಾ ಕೇಂದ್ರದಲ್ಲಿ ನಡೆಸಬೇಕು ಎಂಬುವುದರ ಬಗ್ಗೆ ಚರ್ಚೆ ನಡೆಯಿತು.
ವಿವಿಧ ಸಂಘ ಸಂಸ್ಥೆಗಳು ಆಯೋಜಿಸುವ ಶಿಬಿರಗಳಲ್ಲಿ ಅನಧಿಕೃತ ಸಂಸ್ಥೆಗಳನ್ನು ತಡೆಯುವ ಉದ್ದೇಶದಿಂದ ನೋಂದಾಯಿತ ಸೇವಾ ಕೇಂದ್ರದ ಸದಸ್ಯರುಗಳಿಗೆ ಖಾಯಂ ಗುರುತಿನ ಚೀಟಿ ನೀಡುವ ಬಗ್ಗೆ ಚರ್ಚಿಸ ಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಸಮಾವೇಶ ನಡೆಸುವ ಬಗ್ಗೆ ಕುರಿತು ಚರ್ಚಿಸಲಾಯಿತು.
ಹಳೆಗೇಟು ಡೋಝರ್ ಟೆಕ್ನಿಕಲ್ ಸಂಸ್ಥೆಯ ಮಾಲಕ ಮಹಮ್ಮದ್ ಇತ್ಬಾನ್ ರವರು ವೈಫೈ ಚೊಪಲ್ ಬಗ್ಗೆ ಮಾಹಿತಿ ನೀಡಿದರು.
ಈ ಸಭೆಯಲ್ಲಿ ಸುಳ್ಯ ತಾಲೂಕಿನ ವಿವಿಧ ಸಾಮಾನ್ಯ ಸೇವಾ ಕೇಂದ್ರಗಳ ಮಾಲಕರುಗಳು ಹಾಗೂ ತಾಲೂಕಿನ ವಿವಿಧ ಗ್ರಾಮಗಳ ವಿ ಎಲ್ ಇ ಗಳು ಭಾಗವಹಿಸಿದ್ದರು. ಸುಳ್ಯ ನಗರದ ಸೇವಾ ಕೇಂದ್ರದ ರಶೀದ್ ಜಟ್ಟಿಪಳ್ಳ, ವಿಶ್ವಾಸ್ ಎಲಿಮಲೆ, ಪ್ರವೀಣ್ ಕುಮಾರ್ ಬೆಳ್ಳಾರೆ, ಉಲ್ಲಾಸ್ ಹರಿಹರ ಪಲ್ಲತಡ್ಕ, ಸುರೇಶ್ ಗುತ್ತಿಗಾರು, ರವಿವರ್ಮ ನಿಂತಿಕಲ್ಲು, ಭವಾನಿಶಂಕರ್ ಕಲ್ಮಡ್ಕ, ಕಿಶೋರ್ ಕುಮಾರ್ ಸಂಪಾಜೆ, ಸತೀಶ್ ಕಾಟೂರು , ಪ್ರದೀಪ್ ಕುಮಾರ್ ಬೆಳ್ಳಾರೆ, ಭರತ್ ಸುಳ್ಯ, ಮಹಮ್ಮದ್ ಇತ್ಬಾನ್ ಅಬ್ದುಲ್ಲ ಸುಳ್ಯ, ವಿನೋದ್ ಕುಮಾರ್ ಪಂಜ, ಅಬ್ದುಲ್ ರಜಾಕ್ ಎಣ್ಮೂರು, ಭವಾನಿಶಂಕರ್ ಕಲ್ಮಡ್ಕ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.