ಮರ್ಕಂಜ ದ ಬಲ್ನಾಡುಪೇಟೆ ಪ್ರಭಾತ್ ಜೈನ್ ರವರಿಗೆ ಪಿ.ಎಚ್.ಡಿ. ಪದವಿ

Advt_Headding_Middle
Advt_Headding_Middle

 

 

ಜೈನ್ ಪದವಿ ಪೂರ್ವ ಕಾಲೇಜಿನ ಇತಿಹಾಸ ಉಪನ್ಯಾಸಕ ಮರ್ಕಂಜ ಗ್ರಾಮದ ಬಲ್ನಾಡುಪೇಟೆ ಪ್ರಭಾತ್ ಜೈನ್ ರವರು ಉಜಿರೆ ಡಾ.ಹಾ.ಮಾ.ನಾ. ಸಂಶೋಧನಾ ಕೇಂದ್ರದ ಮೂಲಕ ಸಲ್ಲಿಸಿದ್ದ ‘ಕೆಳದಿ ಆಳ್ವಿಕೆಯ ತುಳುನಾಡಿನ ಸಮಾಜೋ – ಆರ್ಥಿಕ ಅಧ್ಯಯನ’ ಎಂಬ ಪ್ರೌಢ ಸಂಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವವಿದ್ಯಾನಿಲಯವು ಪಿ.ಎಚ್.ಡಿ.ಪದವಿ ನೀಡಿದೆ. ಪ್ರಭಾತ್ ರವರಿಗೆ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಗಣಪತಿ ಗೌಡ ಎಸ್. ರವರು ಮಾರ್ಗದರ್ಶನ ಮಾಡಿದ್ದಾರೆ.
ಪ್ರಭಾತ್ ಜೈನ್ ರವರು ಮರ್ಕಂಜ ದ ಪಂಚಸ್ಥಾಪನೆಗಳ ಮಾಜಿ ಆಡಳಿತ ಮೊಕ್ತೇಸರ ಹಾಗೂ ಬಲ್ನಾಡು ಪೇಟೆ ಜೈನ ಬಸದಿಯ ಆಡಳಿತ ಮೊಕ್ತೇಸರ, ಯಕ್ಷಗಾನ ಕಲಾವಿದ, ಹಾಗೂ ಸಂಘಟಕರಾಗಿದ್ದ ಯುವರಾಜ ಜೈನ್ ಮತ್ತು ಪ್ರಸನ್ನಾ ದಂಪತಿಗಳ ಪುತ್ರ. ಪ್ರಭಾತ್ ರವರು ಯಕ್ಷಗಾನ ಕಲಾವಿದರಾಗಿ, ತಾಳಮದ್ದಳೆ ಅರ್ಥದಾರಿಯಾಗಿ, ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿಯೂ ಸಕ್ರಿಯರಾಗಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.