Breaking News

ಅತಿವೃಷ್ಠಿ ಪಟ್ಟಿಗೆ ಸುಳ್ಯ ಸೇರ್ಪಡೆಯಾಗದ ವಿಚಾರ ಶಾಸಕರು ಸರಕಾರಕ್ಕೆ ಪತ್ರ ಬರೆಯುವುದಲ್ಲ – ಸಿ.ಎಂ. ಎದುರು ಕುಳಿತು ಸೇರಿಸಿಕೊಂಡು ಬರಬೇಕು : ಕಾಂಗ್ರೆಸ್ ಸಲಹೆ

Advt_Headding_Middle
Advt_Headding_Middle

 

ಅತಿವೃಷ್ಠಿ ಪಟ್ಟಿಯಲ್ಲಿ ಸುಳ್ಯವನ್ನು ಸೇರಿಸಬೇಕೆಂದು ಶಾಸಕರು ಸರಕಾರಕ್ಕೆ ಪತ್ರ ಬರೆಯುವುದಲ್ಲ. ಮುಖ್ಯಮಂತ್ರಿ ಗಳ ಎದುರು ಕುಳಿತು ಇಲ್ಲಿಯ ಪರಿಸ್ಥಿತಿ ವಿವರಿಸಿ ಪಟ್ಟಿಗೆ ಸೇರಿಸಿಕೊಂಡು ಬರಬೇಕು ಎಂದು ಕಾಂಗ್ರೆಸ್ ಸಲಹೆ ನೀಡಿದೆ.

ಇಂದು ಸುಳ್ಯದಲ್ಲಿ ನಡೆದ ಕಾಂಗ್ರೆಸ್ ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಬ್ಲಾಕ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು ಅತಿವೃಷ್ಠಿ ಪಟ್ಟಿಯಲ್ಲಿ ಸುಳ್ಯವನ್ನು ಬಿಡಲಾಗಿದೆ. ಸೇರಿಸುವಂತೆ ನಾನು ಸರಕಾರಕ್ಕೆ ಪತ್ರ ಬರೆದಿರುವುದಾಗಿ ಹೇಳುತ್ತಾರೆ. ಆದರೆ ಶಾಸಕರು ಪತ್ರ ಬರೆಯುವುದಲ್ಲ. ಸೇರಿಸಿಕೊಂಡೇ ಬರಬೇಕು ಎಂದು ಅವರು ಹೇಳಿದರು.

ಸುಳ್ಯದ ಸಮಸ್ಯೆಗಳನ್ನು, ಆಗಬೇಕಾದ ಅಗತ್ಯ ಕೆಲಸಗಳ ಬಗ್ಗೆ ವಿರೋಧ ಪಕ್ಷವಾಗಿ ನಾವು ತೋರಿಸಿದ್ದೇವೆ. ಅದಕ್ಕಲ್ಲದಕ್ಕೂ ಬಿಜೆಪಿಯವರು ಹಾರಿಕೆ ಉತ್ತರ ನೀಡಿದ್ದನ್ನು ಸುಳ್ಯದ ಜನ ನೋಡಿದ್ದಾರೆ. ನಾವು ಅಧಿಕಾರಿಗಳ ಎದುರು ಸಮಸ್ಯೆ ಪರಿಹಾರಕ್ಕೆ ಪ್ರತಿಭಟಿಸಿದ್ದೇವೆ. ಅದು ಕೋಣನ ಮುಂದೆ ಕಿನ್ನರಿ ಬಾರಿಸಿದಂತಾಗಿದೆ. ಏನೂ ಕೆಲಸ ಆಗುತ್ತಿಲ್ಲ. ಆಯ್ಕೆಯಾದ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿ ಇಲ್ಲ ಎಂದು ರೈಗಳು ಹೇಳಿದರು.

ನಮ್ಮ ಬೆಂಬಲ : ಆರೋಗ್ಯ ಇಲಾಖೆಯ ಗುತ್ತಿಗೆ ನೌಕರರು ಕೊರೊನಾ ಸಂದರ್ಭದಲ್ಲಿ ರಿಸ್ಕ್ ತೆಗೆದು ಕೆಲಸ ಮಾಡಿದ್ದಾರೆ. ಆದರೆ ಅವರ ಬೇಡಿಕೆಗೆ ಸರಕಾರ ಸ್ಪಂದಿಸುತ್ತಿಲ್ಲ. ಅವರ ಜತೆ ಕಾಂಗ್ರೆಸ್ ಸದಾ ಬೆಂಬಲವಾಗಿ ನಿಲ್ಲುತ್ತದೆ. ಅವರ ಬೇಡಿಕೆಗೆ ಸ್ಪಂದಿಸುಂತೆ ನಾವು ಒತ್ತಾಯಿಸುವುದಾಗಿ ಹೇಳಿದರು.

ಗಂಟಲು ಹಿಡಿಯಬಾರದು : ಮುಖ್ಯಮಂತ್ರಿ ಮಗನ ಮೇಲೆ ಆರೋಪವನ್ನು ಮಾಧ್ಯಮವೊಂದು ಮಾಡಿತೆಂಬ ಕಾರಣಕ್ಕೆ ಆ ಸಂಸ್ಥೆಯ ಗಂಟಲು ಹಿಚುಕುವ ಕೆಲಸ ಆಗಿದೆ. ಇದು ಸರಿಯಲ್ಲ. ದುರಾಡಳಿತವನ್ನು ಬಯಲಿಗೆಳೆದರೆ ಮಾಧ್ಯಮ ದ ಬಾಯಿ ಮುಚ್ಚಿಸುವ ಕೆಲಸ ಎಂದಿಗೂ ಆಗಬಾರದು ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಎಸ್.ಸಂಶುದ್ದೀನ್, ಕೆ.ಗೋಕುಲ ದಾಸ್, ಸಚಿನ್ ರಾಜ್ ಶೆಟ್ಟಿ, ಶಾಫಿ ಕುತ್ತಮೊಟ್ಟೆ, ಭವಾನಿಶಂಕರ್ ಕಲ್ಮಡ್ಕ, ನಂದರಾಜ ಸಂಕೇಶ, ಶಶಿಧರ ಎಂ.ಜೆ. ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.