Breaking News

ದುಗಲಡ್ಕ : ಮಲೆನಾಡು ಜನಹಿತ ರಕ್ಷಣಾ ವೇದಿಕೆ – ಪರಿಸರ ಸಂರಕ್ಷಣಾ ಕಾರ್ಯಕ್ರಮ

Advt_Headding_Middle
Advt_Headding_Middle

 

 ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ಪರಿಸರ ಸಂರಕ್ಷಣೆ ಕಾರ್ಯಕ್ರಮ ಅಂಗವಾಗಿ ಧಾರ್ಮಿಕ ಕೇಂದ್ರ, ಶಿಕ್ಷಣ ಕೇಂದ್ರ, ರಸ್ತೆ ಇಕ್ಕೆಲಗಳಲ್ಲಿ ಹಮ್ಮಿಕೊಂಡಿರುವ ಗಿಡ ನೆಡುವ ಕಾರ್ಯಕ್ರಮಕ್ಕೆ ಮಂಗಳವಾರ ದುಗ್ಗಲಡ್ಕದ ಶ್ರೀ ದುಗ್ಗಲಾಯ ದೇವಸ್ಥಾನದ ವಠಾರದಲ್ಲಿ ಸಾಂಕೇತಿಕವಾಗಿ ಚಾಲನೆ‌ ನೀಡಲಾಯಿತು.


ದೈವಸ್ಥಾನದ ಸಮಿತಿ ಅಧ್ಯಕ್ಷ ದಯಾನಂದ ಸಾಲ್ಯಾನ್ ಹಾಗು ನಾಗನಕಟ್ಟೆ ಅಭಿವೃದ್ಧಿ ಸಮಿತಿ ಸದಸ್ಯರಾದ ಕುಶಾಲಪ್ಪ ಕಜೆ ಅವರು ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವೇದಿಕೆಯ ಜಿಲ್ಲಾ ಸಮಿತಿ ಸದಸ್ಯ ಟಿ.ಎನ್. ಸತೀಶ್ ಕಲ್ಮಕಾರ್, ವೇದಿಕೆ ಪರಿಸರ ಸಂರಕ್ಷಣಾ ಸಮಿತಿ ವತಿಯಿಂದ ನಿರ್ದರಿತದಂತೆ ಹಮ್ಮಿಕೊಂಡಿದ್ದು ಪ್ರಚಾರಕ್ಕೋಸ್ಕರವಲ್ಲ, ಬದಲಾಗಿ ಉತ್ತಮ ರೀತಿಯಲ್ಲಿ ನೆಟ್ಟು, ಜನತೆಗೆ ಅದರ ಸದ್ಭಳಕೆಯಾಗುವಂತೆ ಹಮ್ಮಿಕೊಳ್ಳಲಾಗಿದೆ. ವೇದಿಕೆ ಜನಸಾಮಾನ್ಯರಿಗೆ ಸರಕಾರದ ಸವಲತ್ತುಗಳ ಮಾಹಿತಿ, ಭ್ರಷ್ಟಾಚಾರ ವಿರುದ್ಧದ ಹೋರಾಟ, ಶೈಕ್ಷಣಿಕ ಕ್ಷೇತ್ರ, ರೈತರ ಸಂಕಷ್ಟಗಳ ಸಹಿತ ಜನಪರ ಹೋರಾಟಗಳಲ್ಲಿ ಧ್ವನಿಯಾಗುತಿದೆ. ಸಾರ್ವಜನಿಕರು ವೇದಿಕೆಯೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.


ವೇದಿಕೆಯ ಪರಿಸರ ಪ್ರಮುಖ್ ಅಭಿಷೇಕ್, ತಾಲುಕು ಸಮಿತಿ ಸದಸ್ಯ ಭರತ್ ಕನ್ನಡ್ಕ, ಗ್ರಾಮಸ್ಥರಾದ ಯತೀಶ್ ರೈ, ಗಂಗಾಧರ, ಮನು, ರೂಪೇಶ್, ಕಿಶೋರ್, ಹರೀಶ್, ಶಿವ, ದಿನೇಶ್ ಮಣಿಯಾಣಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.