Breaking News

ಕೆ.ವಿ.ಜಿ ಪಾಲಿಟೆಕ್ನಿಕ್ ಸ್ಮಾರ್ಟ್ ಕ್ಲಾಸ್ ರೂಮ್ ಉದ್ಘಾಟನೆ       

Advt_Headding_Middle
Advt_Headding_Middle
     
ಕುರುಂಜಿ ವೆಂಕಟ್ರಮಣ ಗೌಡ ಪಾಲಿಟೆಕ್ನಿಕ್ ನ ಇಲೆಕ್ಟ್ರಾನಿಕ್ಸ್  ವಿಭಾಗದ ಅಂತಿಮ ವರ್ಷದ  ವಿದ್ಯಾರ್ಥಿಗಳು ತಮ್ಮ  ಅಂತಿಮ ವರ್ಷದ ಪ್ರಾಜೆಕ್ಟ್ ಆಗಿ ನಿರ್ಮಿಸಿದ  ” ಸ್ಮಾರ್ಟ್ ಕ್ಲಾಸ್ ರೂಮ್” ನ್ನು ಇಂದು ಸಂಸ್ಥೆಗೆ ಹಸ್ತಾಂತರಿಸಲಾಯಿತು.  ಸಂಸ್ಥೆಯ ನಿವ್ರತ್ತ ಪ್ರಾಂಶುಪಾಲ ಬಾಲಕ್ರಷ್ಣ ಗೌಡ ಬೊಳ್ಳೂರು  ಕಾರ್ಯಕ್ರಮವನ್ನು ಉದ್ಘಾಟಿಸಿದರು. 
ಮುಖ್ಯ ಅತಿಥಿಗಳಾಗಿ  ಎಸ್.ಎನ್.ಎಂ ಮೂಡುಬಿದ್ರೆ ಪಾಲಿಟೆಕ್ನಿಕ್ ನ ಅಟೋಮೋಬೈಲ್  ವಿಭಾಗ ಮುಖ್ಯಸ್ಥ  ಗಣೇಶನ್  ಹಾಗೂ ನಿಟ್ಟೆ ಪಾಲಿಟೆಕ್ನಿಕ್ ನ ಉಪನ್ಯಾಸಕ ರೋಷನ್ ಬೆಳ್ಳೂರು  ಉಪಸ್ಥಿತರಿದ್ದು ಡಿಜಿಟಲ್ ಡೋರ್ ನ್ನು ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಜಯಪ್ರಕಾಶ್ ಕೆ. ಯವರ  ಅಧ್ಯಕ್ಷತೆ ಯಲ್ಲಿ ನಡೆದ   ಕಾರ್ಯಕ್ರಮದಲ್ಲಿ  ವಿಭಾಗದ ಉಪನ್ಯಾಸಕ ಫಾಲಚಂದ್ರ ವೈ.ವಿ  ವೇದಿಕೆಯಲ್ಲಿ ಉಪಸ್ಥಿತರಿದ್ದರು.
 ಕ್ಲಾಸ್ ರೂಮ್ ನಿರ್ಮಾಣದಲ್ಲಿ ತಾಂತ್ರಿಕ ಸಹಕಾರ ನೀಡಿದ  ಎನ್.ಎಸ್.ಎಸ್. ನ ಹಿರಿಯ ವಿದ್ಯಾರ್ಥಿ ಸುಜಿತ್ ರವರನ್ನು ಸನ್ಮಾನಿಸಲಾಯಿತು. 
ವಿದ್ಯಾರ್ಥಿಗಳಾದ ರಿತೇಶ್ ಸ್ವಾಗತಿಸಿ,  ನಿಶ್ಮಿತಾ ವಂದಿಸಿದರು. ಕಿಶೋರ್ ಎ.ಪಿ ಕಾರ್ಯಕ್ರಮ ನಿರೂಪಿಸಿದರು.
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.