Breaking News

ಬಳ್ಪ: ಬೋಗಾಯನಕೆರೆ – ಎಣ್ಣೆಮಜಲು ರಸ್ತೆಯಲ್ಲಿ ಬಾಳೆಗಿಡ ನೆಟ್ಟು ಆಕ್ರೋಶ

Advt_Headding_Middle
Advt_Headding_Middle

ಆದರ್ಶ ಗ್ರಾಮದ ಬಳ್ಪದ ಕೆಲವು ಭಾಗದ ರಸ್ತೆಗಳು ಸಂಪೂರ್ಣ ಕೆಟ್ಟು ಹೋಗಿದ್ದು, ಮಳೆಗಾಲದಲ್ಲಿ ಸಂಚರಿಸಲು ಕಷ್ಟಕರವಾಗಿದೆ. ಬೋಗಾಯನಕೆರೆ, ಬೀದಿಗುಡ್ಡೆ, ಅಡ್ಡಬೈಲು ರಸ್ತೆಯು ರಿಂಗ್ ರೋಡ್ ಮಾದರಿಯಲ್ಲಿ ಗ್ರಾಮ ಸಡಕ್ ಯೋಜನೆಯಲ್ಲಿ ಸುಮಾರು 8.5 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವುದಾಗಿ ಸಂಸದರು ಆಶ್ವಾಸನೆ ನೀಡಿರುವುದಲ್ಲದೆ ಸದ್ಯದಲ್ಲೇ ಕಾಮಗಾರಿಗೆ ಚಾಲನೆ ದೊರೆಯಲಿದೆ ಎನ್ನಲಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಬೋಗಾಯನಕೆರೆ ಬೀದಿಗುಡ್ಡೆ ರಸ್ತೆಯು ಕೆಸರುಮಯವಾಗಿರುವುದರಿಂದ ಅ. 1 ರ ಕಳೆದ ರಾತ್ರಿ ಈ ರಸ್ತೆಯ ಬಾಳೆಗಿಡ ನೆಟ್ಟಿದ್ದಾರೆ. ಈ ರಸ್ತೆಯನ್ನು ಅಭಿವೃದ್ಧಿ ಪಡಿಸುತ್ತಿಲ್ಲ ಎಂದು ಆರೋಪಿಸಿ ಸೆ. 27ರಂದು ಆ ಭಾಗದ ಜನರು‌ ಒಟ್ಟು ಸೇರಿ ಹೋರಾಟ ಸಮಿತಿಯನ್ನು ರಚಿಸಿರುತ್ತಾರೆ. ಈ ಬಗ್ಗೆ ಬಳ್ಪ ಗ್ರಾಮ ವಿಕಾಸ ಪ್ರತಿಷ್ಠಾನದ ಅಧ್ಯಕ್ಷ ವಿನೋದ್ ಬೊಳ್ಮಲೆಯವರನ್ನು ಸಂಪರ್ಕಿಸಿದಾಗ ‘ರಸ್ತೆ ಅಭಿವೃದ್ಧಿ ಕಾಮಗಾರಿಗೆ ಈಗಾಗಲೇ ಚಾಲನೆ ದೊರೆಯಬೇಕಿತ್ತು. ಕೊರೋನಾ ಮತ್ತು ಅಕಾಲಿಕ ಮಳೆಯ ಸಮಸ್ಯೆಯಿಂದಾಗಿ ತಡವಾಗಿದೆ. ಸದ್ಯದಲ್ಲೇ ಕಾಮಗಾರಿ ನಡೆಯಲಿದೆ” ಎಂದು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.