Breaking News

ಧರ್ಮಪಾಲ ಕೊಯಿಂಗಾಜೆ ವಜಾಕ್ಕೆ ಆಲೆಟ್ಟಿ ಗ್ರಾಮ ಕಾಂಗ್ರೆಸ್ ಅಸಮಾಧಾನ

Advt_Headding_Middle
Advt_Headding_Middle

 

ಸ್ಪಷ್ಟ ಮಾಹಿತಿ ನೀಡದಿದ್ದರೆ ಪಕ್ಷದ ಕಾರ್ಯಚಟುವಟಿಕೆಯಿಂದ ದೂರ ನಿಲ್ಲಲು ನಿರ್ಧಾರ

ಬ್ಲಾಕ್ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಆಲೆಟ್ಟಿಯ ಧರ್ಮಪಾಲ ಕೊಯಿಂಗಾಜೆ ಯವರನ್ನು ಮುಕ್ತಗೊಳಿಸಿದ ಬ್ಲಾಕ್ ಅಧ್ಯಕ್ಷರ ನಡೆಗೆ ಅಸಮಾಧಾನ ಗೊಂಡಿರುವ ಆಲೆಟ್ಟಿ ಕಾಂಗ್ರೆಸ್ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದಿದ್ದರೆ ಪಕ್ಷದ ಚಟುವಟಿಕೆಯಿಂದ ದೂರ ನಿಲ್ಲುವ ಎಚ್ಚರಿಕೆ ನೀಡಿದೆ. ಅಲ್ಲದೆ ಈ ಕುರಿತು ಜಿಲ್ಲಾ ಸಮಿತಿಗೆ ದೂರು ನೀಡಲು ನಿರ್ಧರಿಸಿದೆ.

ಸುಳ್ಯ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಆಲೆಟ್ಟಿ ಗ್ರಾಮ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚಂದ್ರಕಾಂತ ನಾರ್ಕೊಡು ರವರ ಅಧ್ಯಕ್ಷತೆಯಲ್ಲಿ ಸೆ.30 ರಂದು ಆಲೆಟ್ಟಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪ್ರ.ಕಾರ್ಯದರ್ಶಿ ಧರ್ಮಪಾಲ ಕೊಯಿಂಗಾಜೆ ಮುಕ್ತಗೊಳಿಸಿದ ವಿಷಯದ ಬಗ್ಗೆ ಸಭೆಗೆ ತಿಳಿಸುವಂತೆ ಸೂಚನೆ ನೀಡಲಾಯಿತು . ಈ ಬಗ್ಗೆ ಧರ್ಮಪಾಲ ರವರು ಮಾತನಾಡಿ
ಎ ಐ ಸಿ ಸಿ ಹಾಗು ಕೆಪಿಸಿಸಿ ಯ ನಿರ್ದೇಶನದಂತೆ ಕೇಂದ್ರ ಸರಕಾರದ ರೈತ , ಕಾರ್ಮಿಕ , ದಲಿತ ವಿರೋಧಿ ನೀತಿಯನ್ನು ಖಂಡಿಸಿ ರೈತ ಹೋರಾಟಗಾರರ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಕರೆ ನೀಡಲಾಗಿತ್ತು . ರೈತ ಪರ ಹೋರಾಟದಲ್ಲಿ ಪಾಲ್ಗೊಳ್ಳುವಂತೆ ವಾಟ್ಸಪ್ ಮೆಸೇಜ್ ಹಾಕಿರುತ್ತೇನೆ. ಇದನ್ನು ಅಧ್ಯಕ್ಷರು ಕೂಡಲೆ ದೂರವಾಣಿ ಮುಖೇನ ನನ್ನ ಜೊತೆ ಕೇಳಿದ್ದರು.
ಆಗ ಹೈಕಮಾಂಡ್ ಆದೇಶದಂತೆ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದೇನೆ ಎಂದು ಉತ್ತರಿಸಿದ್ದೇನೆ ಎಂದು ಸಭೆಗೆ ತಿಳಿಸಿದ್ದರು . ಬ್ಲಾಕ್ ಕಾಂಗ್ರೆಸ್ ಸಮಿತಿ ಇದರ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಧರ್ಮಪಾಲ ಕೊಯಿಂಗಾಜೆ ಇವರನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಏಕಾಏಕಿ ನಿರ್ದೇಶನಗಳನ್ನು ಉಲ್ಲಂಘಿಸಿ ತತ್ ಕ್ಷಣದಿಂದ ಜಾರಿಗೆ ಬರುವಂತೆ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗು ಬ್ಲಾಕ್ ಮಟ್ಟದ ಎಲ್ಲಾ ಜವಾಬ್ದಾರಿಗಳಿಂದ ಮುಕ್ತಗೊಳಿಸಲಾಗಿದೆ ಎಂದು ಆದೇಶ ನೀಡಿರುವುದು ಖಂಡನಾರ್ಹ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಇಂತಹ ನಡೆಯನ್ನು ನಾವುಗಳು ಖಂಡಿಸುತ್ತೇವೆ . ನಮಗೆ ಒಂದು ವಾರದ ಒಳಗಡೆ ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡದಿದ್ದರೇ ನಾವೆಲ್ಲರೂ ಮುಂದಿನ ದಿನದಲ್ಲಿ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗವಹಿಸುವುದಿಲ್ಲವೆಂದು ನಿರ್ಣಯ ಮಾಡಿದ ಮನವಿಯ ಜೊತೆ ಸಹಿ ಮಾಡಿದ ಪತ್ರವನ್ನು ಬ್ಲಾಕ್ ಅಧ್ಯಕ್ಷ ಎನ್ ಜಯಪ್ರಕಾಶ್ ರೈಯವರಿಗೆ , ಜಿಲ್ಲಾ ಕಾಂಗ್ರೆಸ್ ಆಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ , ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ , ಹಾಗೂ ಕೆಪಿಸಿಸಿ ಗೆ ಕಳುಹಿಸಿ ಕೊಡುವುದೆಂದು ತಿರ್ಮಾನಿಸಲಾಯಿತು.
ಸಭೆಯಲ್ಲಿ ಮಾಜಿ ಜಿ.ಪಂ. ಸದಸ್ಯ ದೇವಪ್ಪ ನಾಯ್ಕ್ ಬಡ್ಡಡ್ಕ , ಹಿರಿಯ ಕಾಂಗ್ರೆಸ್ ಮುಂದಾಳು ಬಾಪು ಸಾಹೇಬ್ ಅರಂಬೂರು , ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಗೀತಾ ಕೋಲ್ಚಾರು , ಸತ್ಯಕುಮಾರ್ ಅಡಿಂಜ , ಹರೀಶ್ ಕೊಯಿಂಗಾಜೆ , ಜಯಂತಿ ಕೂಟೇಲು , ನಿತಿನ್ ಗುಂಡ್ಯ , ಜೀವರತ್ನ ನಾಗಪಟ್ಟಣ , ತವಿದ್ ಅರಂಬೂರು , ಲತೀಫ್ ಅರಂಬೂರು ಚಂದ್ರಶೇಖರ ಕೆ ವಿ ಕೋಲ್ಚಾರು ಮತ್ತಿತರರು ಉಪಸ್ಥಿತರಿದ್ದರು .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.