ಕಲ್ಮಕಾರು : ಕಲ್ಲು ಗಣಿಗಾರಿಕೆಯ ಮೆಶಿನ್ ಸೀಜ್ ಮಾಡಿದ ತಹಶಿಲ್ದಾರ್

Advt_Headding_Middle
Advt_Headding_Middle

 

ಯಂತ್ರ ವಶ ಪಡಿಸಿದ ಅಧಿಕಾರಿಗಳಿಗೆ ಸ್ಥಳೀಯರಿಂದ ತಡೆ

ಕಲ್ಮಕಾರು ಗ್ರಾಮದಲ್ಲಿ ಕಲ್ಲು ಗಣಿಗಾರಿಕೆಯ ಸ್ಥಳಗಳಿಗೆ ಸುಳ್ಯ ತಹಶೀಲ್ದಾರ್ ದಾಳಿ ನಡೆಸಿ ಗಣಿಗಾರಿಕೆ ನಡೆಸಲು ಬಳಸುತ್ತಿದ್ದ ಯಂತ್ರಗಳನ್ನು ವಶ ಪಡಿಸಿಕೊಂಡ ಹಾಗೂ ಅದನ್ನು ಕೊಂಡೊಯ್ಯಲು ಬಂದ ಲಾರಿ ಮತ್ತು ಕ್ರೇನ್ ನ್ನು ಊರವರು ತಡೆದ ಘಟನೆ ಅ.1 ರಂದು ನಡೆದಿದೆ.

ಕಲ್ಮಕಾರಿನ ಕೆಂಪು ಕಲ್ಲು ಕ್ವಾರಿ ನಡೆಸುವ ಕೆಲ ಸ್ಥಳಗಳಿಗೆ ತಹಶೀಲ್ದಾರ್ ಹಾಗೂ ತಂಡ ದಾಳಿ ನಡೆಸಿ ಕ್ವಾರಿ ನಡೆಸಲು ಉಪಯೋಗಿಸುವ ಯಂತ್ರೋಪಕರಣಗಳನ್ನು ಸೀಜ್ ಮಾಡಿ ತೆರಳಿತ್ತೆನ್ನಲಾಗಿದೆ. ಬಳಿಕ ಯಂತ್ರೋಪಕರಣಗಳನ್ನು ತೆಗೆದುಕೊಂಡು ಹೋಗಲು ಲಾರಿ ಮತ್ತು ಕ್ರೇನ್ ಅನ್ನು ಕಳುಹಿಸಲಾಗಿದ್ದು ಅದನ್ನು ಕಲ್ಮಕಾರಿನಲ್ಲಿ ಕೆಲ ಜನರು ಸೇರಿಕೊಂಡು ತಡೆಹಿಡಿದಿರುವುದಾಗಿ ವರದಿಯಾಗಿದೆ. ಘಟನಾ ಸ್ಥಳಕ್ಕೆ ಪೊಲೀಸರು ತೆರಳಿದ್ದು ಬಳಿಕ ಮಾತುಕತೆ ನಡೆದು, ಯಂತ್ರ ತರಲು ಹೋದ ವಾಹನಗಳು ಬಂದ ದಾರಿಗೆ ಶುಂಕವಿಲ್ಲದೆ ವಾಪಾಸು ಹೋಗಿರುವುದಾಗಿ ತಿಳಿದು ಬಂದಿದೆ. ಆದರೆ ಊರವರು ಸಂತೆಡ್ಕ ಸೇತುವೆ ದಾಟಿ ಕ್ರೇನ್ ಹೋಗಬೇಕಾಗಿದ್ದು ಕ್ರೇನ್ ಹೋದರೆ ಸೇತುವೆ ಡ್ಯಾಮೇಜ್ ಆಗಬಹುದಾಗಿದೆ ಅದಕ್ಕಾಗಿ ತಡೆಹಿಡಿದಿರುವುದಾಗಿ ಹೇಳಿದರೆಂದೂ ತಿಳಿದುಬಂದಿದೆ .

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.