ಕೊಲೆ ಆರೋಪಿಗಳು ಪೊಲೀಸ್ ಬಲೆಗೆ ಬಿದ್ದಿರುವ ದಟ್ಟ ವದಂತಿ

Advt_Headding_Middle
Advt_Headding_Middle

ಕೊಲೆಗಾರರಿಗೆ ಕೋವಿ ಮತ್ತು ಹಣ ಪೂರೈಸಿದವರಾರು ?
ಕಳಗಿ ಕೊಲೆ ಆರೋಪಿಗಳಲ್ಲೊಬ್ಬನಾದ ಸಂಪತ್ ಕುಮಾರ್‌ನನ್ನು ಸುಳ್ಯದ ಶಾಂತಿನಗರದಲ್ಲಿ ಹತ್ಯೆಗೈದ ಆರೋಪಿಗಳನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆಂಬ ದಟ್ಟ ವದಂತಿ ಹಬ್ಬಿದೆ.

ಆರೋಪಿಗಳಾರೆಂಬ ಬಗ್ಗೆ ಸುಳಿವು ಪಡೆದು ಖಚಿತ ಪಡಿಸಿಕೊಂಂಡ ಪೊಲೀಸರು ಅವರ ಬಂಧನಕ್ಕಾಗಿ ಎರಡು ದಿನಗಳಿಂದ ಪ್ರಯತ್ನ ನಡೆಸುತ್ತಿದ್ದರು. ಹಾಸನದಲ್ಲಿ ಆರೋಪಿಗಳು ಸಿಕ್ಕಿದ್ದಾರಂತೆ, ಕುಶಾಲನಗರದಲ್ಲಿ ಸಿಕ್ಕಿದ್ದಾರಂತೆ ಎಂಬ ವದಂತಿಗಳು ನಿನ್ನೆ ಬೆಳಿಗ್ಗೆಯಿಂದಲೇ ಹರಡತೊಡಗಿತ್ತು. ನಿನ್ನೆ ಮಧ್ಯಾಹ್ನದ ವೇಳೆಗೆ ಆರೋಪಿಗಳು ಉಪಯೋಗಿಸಿದ್ದ ಕ್ವಾಲಿಸ್ ವಾಹನ ಅರಂತೋಡು ಕಳುಬೈಲಿನ ರಬ್ಬರ್ ತೋಟವೊಂದರಲ್ಲಿ ಪತ್ತೆಯಾದ ಹಿನ್ನಲೆಯಲ್ಲಿ ಆರೋಪಿಗಳು ಬಹಳ ದೂರ ಹೋಗಿರುವ ಸಾಧ್ಯತೆ ಇಲ್ಲವೆಂಬ ಅಭಿಪ್ರಾಯವೂ ಕೇಳಿ ಬರತೊಡಗಿತ್ತು.
ಪೊಲೀಸರು ಗುರುತಿಸಿರುವ ನಾಲ್ವರು ಆರೋಪಿಗಳಾದ ಮನು ಕಲ್ಲುಗುಂಡಿ, ಮಧು ಕಲ್ಲುಗುಂಡಿ, ಕಾರ್ತಿಕ್ ಕಲ್ಲುಗುಂಡಿ ಮತ್ತು ಬಿಪಿನ್ ಕಲ್ಲುಗುಂಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾರೆಂಬ ವದಂತಿ ಇದೀಗ ಹರಡಿದೆ.
ಇವರಲ್ಲದೆ ಇತರ ಕೆಲವರು ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಮಾಹಿತಿಗಳ ಹಿನ್ನಲೆಯಲ್ಲಿ ಪೊಲೀಸರು ಹಲವರನ್ನು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಕೊಲೆ ಕೃತ್ಯ ನಡೆಸಲು ಆರೋಪಿಗಳಿಗೆ ಕಳ್ಳ ಕೋವಿಗಳನ್ನು ಒದಗಿಸಿದವರು ಯಾರು?, ಹಣ ಕೊಟ್ಟವರು ಯಾರು?, ಕಾರಲ್ಲಿ ಕರೆದೊಯ್ದವರು ಯಾರು? ಎಂಬೆಲ್ಲ ಮಾಹಿತಿಯನ್ನು ಕಲೆಹಾಕುವುದಕ್ಕಾಗಿ ಪೊಲೀಸರು ಹಲವರನ್ನು ಠಾಣೆಗೆ ಕರೆಯಿಸಿ ವಿಚಾರಣೆ ನಡೆಸಿದ್ದಾರೆ. ಕಳಗಿ ಬಾಲಚಂದ್ರರ ಮನೆಯವರೊಡನೆ ಕೂಡಾ ಪ್ರಕರಣದ ಬಗ್ಗೆ ವಿಚಾರಿಸಿದ್ದಾರೆಂದು ತಿಳಿದುಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.