ಸಂಪತ್ ಕುಮಾರ್ ಕೊಲೆ ಪ್ರಕರಣ

Advt_Headding_Middle
Advt_Headding_Middle

ನಾಲ್ವರು ಆರೋಪಿಗಳಿಗೆ ಪೊಲೀಸ್ ಕಸ್ಟಡಿ

ಓರ್ವ ಆರೋಪಿಗೆ ನ್ಯಾಯಾಂಗ ಕಸ್ಟಡಿ

ಬಾಲಚಂದ್ರ ಕಳಗಿ ಹತ್ಯೆ ಪ್ರಕರಣದ ಆರೋಪಿಗಳಲ್ಲಿ ಓರ್ವನಾದ ಸಂಪತ್‌ಕುಮಾರ್‌ನನ್ನು ಅ. 8 ರಂದು ಹತ್ಯೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಐವರು ಆರೋಪಿಗಳ ಪೈಕಿ ನಾಲ್ವರಿಗೆ ಪೊಲೀಸ್ ಕಸ್ಟಡಿ ಹಾಗೂ ಓರ್ವನಿಗೆ ನ್ಯಾಯಾಂಗ ಕಸ್ಟಡಿ ವಿಧಿಸಲಾಗಿದೆ.
ಸಂಪತ್‌ಕುಮಾರ್ ಹತ್ಯೆ ಪ್ರಕರಣವನ್ನು ಬೇಧಿಸಿದ ಪೊಲೀಸ್ ತಂಡ ಆರೋಪಿಗಳಾದ ಮನಮೋಹನ್ ಯಾನೆ ಮನು ಕಲ್ಲುಗುಂಡಿ, ಮನೋಜ್ ಯಾನೆ ಮಧು ದಂಡಕಜೆ, ಬಿಪಿನ್ ಕೂಲಿಶೆಡ್ಡ್, ಕಾರ್ತಿಕ್ ದಂಡಕಜೆ ಹಾಗೂ ಶಿಶಿರ್ ಅಡ್ಕಾರ್ ಎಂಬವರನ್ನು ಬಂಧಿಸಿದ್ದರು. ಇಂದು ಅವರನ್ನು ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ ನ್ಯಾಯಾಧೀಶರು ಮನು, ಮಧು, ಬಿಪಿನ್ ಹಾಗೂ ಕಾರ್ತಿಕ್ ಅವರನ್ನು ಪೊಲೀಸ್ ಕಸ್ಟಡಿಗೂ, ಶಿಶರ್‌ನನ್ನು ನ್ಯಾಯಾಂಗ ಕಸ್ಟಡಿಗೂ ಒಪ್ಪಿಸಿ ಆದೇಶಿಸಿದ್ದಾರೆ.
ಈ ಆರೋಪಿಗಳನ್ನು ಕಾರವಾರದಲ್ಲಿ ಪೊಲೀಸರು ಬಂಧಿಸಿ ಸುಳ್ಯಕ್ಕೆ ಕರೆತಂದಿದ್ದು, ನಿನ್ನೆ ಘಟನಾ ಸ್ಥಳಕ್ಕೆ ಮಹಜರಿಗಾಗಿ ಕರೆದೊಯ್ಯಲಾಗಿತ್ತು. ಇಂದು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.