ಕೊರೊನಾ ಹಿನ್ನೆಲೆ ಸುಳ್ಯ ದಸರಾ ಈ ಬಾರಿ ಒಂದು ದಿನ ಮಾತ್ರ ಆಚರಿಸಲು ನಿರ್ಧಾರ: ಎಸ್.ಅಂಗಾರ ಮುಂದಿನ ವರ್ಷ ವಿಜೃಂಭಣೆಯಿಂದ ಸುವರ್ಣ ಮಹೋತ್ಸವಕ್ಕೆ ನಿರ್ಧಾರ

Advt_Headding_Middle
Advt_Headding_Middle

 

ಶ್ರೀ ಶಾರದಾಂಬ ಉತ್ಸವ “ಸುಳ್ಯ ದಸರಾ”ವನ್ನು ಮಹಾಮಾರಿ ಕೊರೊನಾ ಹಿನ್ನೆಲೆಯಲ್ಲಿ ಒಂದು ದಿನ ಮಾತ್ರ ಆಚರಿಸಲು ನಿರ್ಧರಿಸಲಾಗಿದೆ ಎಂದು ದಸರಾ ಉತ್ಸವ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಎಸ್. ಅಂಗಾರ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

 


ಸುಳ್ಯದ ನಿರೀಕ್ಷಣ ಮಂದಿರದಲ್ಲಿ ಜರುಗಿದ ಸಾರ್ವಜನಿಕ ಶ್ರೀ ಶಾರದಾಂಬ ಸೇವಾ ಸಮಿತಿ ಹಾಗೂ ದಸರಾ ಉತ್ಸವ ಸಮಿತಿಯ ವತಿಯಿಂದ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಬಾರಿ ಸುಳ್ಯದಲ್ಲಿ 49ನೇ ವರ್ಷದ ಶ್ರೀ ಶಾರದಾಂಬ ಉತ್ಸವ, ಸುಳ್ಯ ದಸರವನ್ನು ಆಚರಿಸಬೇಕಿತ್ತು. ಆದರೆ ಈ ಬಾರಿ ಕೊರೊನಾ ಹಿನ್ನೆಲೆಯಲ್ಲಿ ಸರಕಾರದ ನಿರ್ದೆಶನದಂತೆ ಜನಸೇರಬಾರದೆಂಬ ನಿಯಮವಿರುವ ಕಾರಣ ದಸರಾವನ್ನು ಒಂಭತ್ತು ದಿನಗಳ ದಸರಾವನ್ನು ಕೇವಲ ಒಂದು ದಿನ ಅಂದರೆ ಅ.21ರಂದು ಮಾತ್ರ ನಡೆಸಲು ನಿರ್ಧರಿಸಲಾಗಿದೆ.


ಅಂದು ಬೆಳಿಗ್ಗೆ ಪುರೋಹಿತ ನಾಗರಾಜ ಭಟ್ ಅವರ ನೇತೃತ್ವದಲ್ಲಿ ಗಣಪತಿ ಹವನದೊಂದಿಗೆ ಪ್ರಾರಂಭಿಸಿ, ಶ್ರೀ ಶಾರದಾ ದೇವಿಯ ವಿಗ್ರಹದ ಪ್ರತಿಷ್ಠಾಪನೆ ನಡೆಯಲಿದೆ.
ಶ್ರೀ ದೇವಿಗೆ ಮಧ್ಯಾಹ್ನದ ಮಹಾಪೂಜೆ ಮತ್ತು ಸಂಜೆಯ ವಿಸರ್ಜನಾ ಪೂಜೆಯೊಂದಿಗೆ ಶ್ರೀ ದೇವಿಯ ವಿಗ್ರಹದ ಜಲಸ್ಥಂಭನ ಕಾರ್ಯ ನಡೆಯಲಿದೆ.
ಭಕ್ತಾದಿಗಳು ಪ್ರತೀ ವರ್ಷದಂತೆ ಈ ವರ್ಷವೂ ಸಹಕರಿಸುವುದಲ್ಲದೇ ಮುಂದಿನ ವರ್ಷ ಸುವರ್ಣ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ ಎಂದು ಶಾಸಕ ಎಸ್. ಅಂಗಾರ ಅವರು ಹೇಳಿದರು.


ಶ್ರೀ ಶಾರದಾಂಬ ಉತ್ಸವ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ ಮಾತನಾಡಿ ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಅತ್ಯಂತ ಸರಳ ರೀತಿಯಲ್ಲಿ ಒಂದು ದಿನ ಮಾತ್ರ ದಸರಾ ಆಚರಿಸಲು ನಿರ್ಧರಿಸಿದ್ದು, ಭಕ್ತಾದಿಗಳು ಸಹಕರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ದಸರಾ ಉತ್ಸವ ಸಮಿತಿ ಗೌರವಾಧ್ಯಕ್ಷ ಕೆ.ಗೋಕುಲ್ ದಾಸ್, ಉಪಾಧ್ಯಕ್ಷರುಗಳಾದ ಚಿದಾನಂದ ವಿದ್ಯಾನಗರ, ರವಿಚಂದ್ರ ಕೊಡಿಯಾಲಬೈಲು, ಪ್ರಧಾನ ಕಾರ್ಯದರ್ಶಿ ಬೂಡು ರಾಧಾಕೃಷ್ಣ ರೈ, ಕಾರ್ಯದರ್ಶಿ ರಾಜೇಶ್ ಕುರುಂಜಿಗುಡ್ಡೆ, ಖಜಾಂಜಿ ರಾಜು ಪಂಡಿತ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ನ.ಪಂ. ಸದಸ್ಯ ವಿನಯ ಕುಮಾರ್ ಕಂದಡ್ಕ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.