ಆರು ತಿಂಗಳ ಪ್ರೀತಿ – ಸಾವಿನಲ್ಲಿ ಅಂತ್ಯ

Advt_Headding_Middle
Advt_Headding_Middle
Advt_Headding_Middle

ಆತ್ಮಹತ್ಯೆಗೂ ಮೊದಲು ತಮಗೇ ಶ್ರದ್ಧಾಂಜಲಿ ಕೋರಿ ನೇಣಿಗೆ ಕೊರಳೊಡ್ಡಿದ ಯುವ ಜೋಡಿ

ಓದಬೇಕಾದ ವಯಸ್ಸಿನಲ್ಲಿ ಪ್ರೀತಿ, ಪ್ರೇಮ ಎಂದು ಅಮಲೇರಿಸಿಕೊಂಡ ಯುವ ಜೋಡಿಯೊಂದು ಕೊನೆಗೆ ಜತೆಯಾಗಿ ನೇಣಿಗೆ ಕೊರಳೊಡ್ಡಿ ತಮ್ಮ ಜೀವಕ್ಕೆ ಅಂತ್ಯ ಹಾಡಿದ್ದಾರೆ.  ಆತ್ಮಹತ್ಯೆಗೂ ಮೊದಲೇ ಆ ಜೋಡಿ ವಾಟ್ಸಾಪ್ ಸ್ಟೇಟಸ್ ನಲ್ಲಿ ಶ್ರದ್ಧಾಂಜಲಿ ಸಲ್ಲಿಸಿಕೊಂಡಿದ್ದಾರೆ.
ಈ ಘಟನೆ ನಡೆದಿರುವುದು ಸುಳ್ಯದಲ್ಲಿ. ಆತ ಸುಳ್ಯ ಐವರ್ನಾಡಿನ ಕಟ್ಟತ್ತಾರಿನ ತಿಮ್ಮಪ್ಪ ಗೌಡರ 19 ವರ್ಷ ಪ್ರಾಯದ ಪುತ್ರ ದರ್ಶನ್ .ಆಕೆ ಧರ್ಮಸ್ಥಳದ ನಾರ್ಯ ಕಲ್ಕಜೆ ಶೇಷಪ್ಪ ಗೌಡರ ಪುತ್ರಿ 19 ವರ್ಷ ಪ್ರಾಯದ ಇಂದಿರಾ.


ದರ್ಶನ್ ಹಾಗೂ ಇಂದಿರಾರಿಗೆ 6 ತಿಂಗಳ ಹಿಂದೆಯಷ್ಟೇ ಪರಿಚಯವಾಗಿತ್ತು.


ಆ ಬಳಿಕ ಫೋನ್ ಮೂಲಕ ಮಾತನಾಡುತ್ತಿದ್ದ ಅವರಿಬ್ಬರೂ ಕೆಲ ತಿಂಗಳುಗಳಿಂದ ಪ್ರೀತಿಸಲಾರಂಭಿಸಿದ್ದರು.

ಬೈಕ್ ನಲ್ಲಿ ಸುತ್ತಾಡುತ್ತಿದ್ದರು.
ಇಬ್ಬರ ಮನೆಯವರಿಗೂ ಪ್ರೀತಿಯ ವಿಷಯ ಗೊತ್ತಿದ್ದು,  ಎಚ್ಚರಿಕೆ ನೀಡಿದ್ದರಾದರೂ ಪ್ರೀತಿಯ ಮುಂದೆ ಅದ್ಯಾವುದೂ ಈ ಜೋಡಿಗೆ ಕಾಣಲಿಲ್ಲ.


ಎರಡು ದಿನದ ಹಿಂದೆಯೂ ದರ್ಶನ್ ಹಾಗೂ ಇಂದಿರಾ ಬೈಕಿನಲ್ಲಿ ಸುತ್ತಾಡಿದ್ದಾರೆ. ಆ ದಿನ ರಾತ್ರಿ ಸುಳ್ಯಕ್ಕೆ ಬಂದ ಜೋಡಿ ದರ್ಶನ್ ಮೊದಲು ಕೆಲಸ ಮಾಡುತ್ತಿದ್ದ ಹೋಟೆಲ್ ಇದ್ದಲ್ಲೆ ಲಾಡ್ಜ್ ಗೆ ಹೋಗಿ ಪರಿಚಯದ ಮೇಲೆ ರೂಂ ಗಿಟ್ಟಿಸಿಕೊಂಡಿದ್ದ.


ರಾತ್ರಿ ಕೊಠಡಿಯೊಳಗಿದ್ದ ಜೋಡಿ ಮರುದಿನ ಬೆಳಗ್ಗೆ ಸುತ್ತಾಡಿ ಮತ್ತೆ ರೂಂ ಸೇರಿದ್ದು ಮಧ್ಯಾಹ್ನದ ವೇಳೆಗೆ ಚೂಡಿದಾರದ ವೇಲನ್ನೆ ಕುಣಿಕೆ ಮಾಡಿ ಸಾವಿಗೆ ಶರಣಾಗಿದ್ದರು.

ಸ್ಟೇಟಸ್ ನಲ್ಲಿ ಶ್ರದ್ದಾಂಜಲಿ :

ಸಾವಿಗೂ ಮೊದಲು ದರ್ಶನ್ ತನ್ನ ಮೊಬೈಲ್ ನ ಸ್ಟೇಟಸ್ ನಲ್ಲಿ ಮರಳಿ ಬಾರದೂರಿಗೆ ನನ್ನ ಹಾಗೂ ನನ್ನ ಲವರ್ ನ ಪಯಣ ಎಂದು ಬರೆದು ವಿವಿಧ ಫೋಟೊಗಳನ್ನು ಹಾಕಿಕೊಂಡಿದ್ದಾನೆ. ಅಲ್ಲದೆ RIP ಎಂದು ಕೂಡಾ ಬರೆದುಕೊಂಡಿದ್ದಾನೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.