ನಿನ್ನೆ ನಿಧನರಾದ ಖಜಾನಾಧಿಕಾರಿ ಕೊರೊನಾ ವರದಿ ಪಾಸಿಟಿವ್ : ಸುಳ್ಯದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇಲ್ಲ

Advt_Headding_Middle
Advt_Headding_Middle
Advt_Headding_Middle

ನಿನ್ನೆ ಪುತ್ತೂರಿನಲ್ಲಿ ನಿಧನರಾದ ಸುಳ್ಯದ ಖಜಾನಾಧಿಕಾರಿಯವರ ಕೊರೊನಾ ವರದಿ ಪಾಸಿಟಿವ್ ಎಂದು ಗೊತ್ತಾಗಿದೆ. ಆದ್ದರಿಂದ ಸುಳ್ಯದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ಇಲ್ಲ ಎಂದು ತಿಳಿದು ಬಂದಿದೆ.

ಖಜಾನಾಧಿಕಾರಿ ಮಂಡ್ಯದ ಅರುಣ್ ಕುಮಾರ್ ನಿನ್ನೆ ಪುತ್ತೂರಿನಲ್ಲಿ ಆಯೋಜಿಸಲಾದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದ ಸಂದರ್ಭದಲ್ಲಿ ಅವರಿಗೆ ಹೃದಯಾಘಾತವಾಗಿ ಅವರು ಮೃತಪಟ್ಟಿದ್ದರು. ಅವರ ಪಾರ್ಥಿವ ಶರೀರವನ್ನು ಇಂದು ಅವರ ಊರಾದ ಮಂಡ್ಯಕ್ಕೆ ಕೊಂಡೊಯ್ಯುವ ಸಂದರ್ಭದಲ್ಲಿ ಸುಳ್ಯ ಸರಕಾರಿ ನೌಕರರ ಸಂಘದ ಕಚೇರಿ ಎದುರು ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಆದರೆ ಅವರ ಕೊರೊನಾ ವರದಿ ಪಾಸಿಟಿವ್ ಇರುವುದರಿಂದ ಅಂತಿಮ ದರ್ಶನಕ್ಕೆ ಅವಕಾಶ ಇರುವುದಿಲ್ಲ ಎಂದು ಗೊತ್ತಾಗಿದೆ.

ಎರಡು ದಿನಗಳ ಕಾಲ ಖಜಾನೆ ಶಾಖೆಗೆ ನಿರ್ಬಂಧ (ಸ್ಯಾನಿಟೈಸ್ ಮಾಡಲು ) ಮಾಡಲಾಗಿದ್ದು, ಮುಂದಿನ ಆದೇಶದವರೆಗೆ ಬಿಲ್ ಇನ್ನಿತರ ಕೆಲಸಗಳು ಆಗುವುದಿಲ್ಲ. ಸರಕಾರಿ ನೌಕರರು ಸಹಕರಿಸುವಂತೆ ಸರಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಪೃಥ್ವಿಕುಮಾರ್ ವಿನಂತಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.