ಕುಕ್ಕೆ ದೇವಳದಲ್ಲಿ ಕೋಟ್ಯಾಂತರ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆಯ ಆರೋಪ

Advt_Headding_Middle
Advt_Headding_Middle
Advt_Headding_Middle

 

ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮೇಲೆ ಎ.ಸಿ.ಬಿ. ಗೆ ದೂರು

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತಾಧಿಕಾರಿ ಮತ್ತು ಕಾರ್ಯನಿರ್ವಹಣಾಧಿಕಾರಿ ಅವರ ಮೇಲೆ ಭ್ರಷ್ಟಾಚಾರ ನಿಗ್ರಹ ಕ್ಕೆ ಶ್ರೀನಾಥ್ ಭಟ್ ಎಂಬವರು ದೂರು ನೀಡಿದ ಘಟನೆ ವರದಿಯಾಗಿದೆ.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕೆಲ ಆಭರಣಗಳ ಮಾಹಿತಿ ಕೋರಿ ಒಂದು ವರ್ಷಗಳ ಹಿಂದೆ ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಮೋನಪ್ಪ ಮಾನಾಡು ಹಾಗೂ ಇತ್ತೀಚಿಗೆ ಶ್ರೀನಾಥ್ ಭಟ್ ಎಂಬವರು ಮಾಹಿತಿ ಕೇಳಿದ್ದರು. ಈ ಬಗ್ಗೆ ದೇವಸ್ಥಾನದ ವತಿಯಿಂದ ಯಾವುದೇ ಮಾಹಿತಿ ಒದಗಿಸಿರಲಿಲ್ಲ. ಈ ಬಗ್ಗೆ ಶ್ರೀನಾಥ್ ಭಟ್ ಅವರು ಭ್ರಷ್ಟಾಚಾರ ನಿಗ್ರಹ ದಳ ಪಶ್ಚಿಮ ವಲಯ ಮಂಗಳೂರು ಇಲ್ಲಿಗೆ ದೂರು ಸಲ್ಲಿಸಿದ್ದು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿರುವ ಕೋಟ್ಯಾತರ ರೂ. ಮೌಲ್ಯದ ಚಿನ್ನಾಭರಣಗಳಲ್ಲಿ ಕೆಲವು ಕಾಣೆಯಾಗಿದೆ ಎಂಬ ಶಂಕೆ ಇದೆ. ಆ ಬಗ್ಗೆ ವಿವರ ನೀಡುವಂತೆ ನಾವು ಮಾಹಿತಿ ಹಕ್ಕು ಪ್ರಕಾರ ಮಾಹಿತಿ ಕೇಳಿದ್ದರೂ ಕೊಟ್ಟಿಲ್ಲ. ಆದ್ದರಿಂದ ಆಭರಣದ ವಿಚಾರವಾಗಿ ಅವ್ಯವಹಾರ ನಡೆದಿರುವಂತೆ ಭಾಸವಾಗುತ್ತಿದೆ. ಈ ಕೂಡಲೇ ಚಿನ್ನಾಭರಣದ ಬಗ್ಗೆ ತನಿಖೆ ನಡೆಸಿ ಭಕ್ತಾದಿಗಳಿಗೆ ಸತ್ಯ ಹೇಳಬೇಕು. ದೇವಳದ ಆಡಳಿತಾಧಿಕಾರಿ ಎ.ಡಿ.ಸಿ. ರೂಪ, ಕಾರ್ಯನಿರ್ವಹಣಾಧಿಕಾರಿ ರವೀಂದರ್ರ ರವರ ಮೇಲೆ ಕೇಸು ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಬರೆದಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.