ಸುಳ್ಯದಲ್ಲಿ ನೂತನವಾಗಿ ನಿರ್ಮಾಣಗೊಂಡು ಲೋಕಾರ್ಪಣೆಗೆ ಸಿದ್ಧಗೊಂಡ ಆಯುರ್ಧಾಮ ಆಯುರ್ವೇದ ಆಸ್ಪತ್ರೆ

Advt_Headding_Middle
Advt_Headding_Middle
Advt_Headding_Middle

 

 

ಸುಳ್ಯ ಹಳಗೇಟಿನಲ್ಲಿ ಸುಮಾರು 11 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಆಯುರ್ಧಾಮ ಆಯುರ್ವೇದ ಆಸ್ಪತೆಯು ಆಯುರ್ವೇದ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸುವುದರೊಂದಿಗೆ ಅಪಾರ ಜನಮನ್ನಣೆಗೆ ಪಾತ್ರವಾಗಿದೆ. ವಿದೇಶದಿಂದಲೂ ಆಯುರ್ವೇದ ಚಿಕಿತ್ಸೆ ಹಾಗೂ ಅಧ್ಯಯನಕ್ಕೆ ಇಲ್ಲಿಗೆ ಆಗಮಿಸಿ ಚಿಕಿತ್ಸೆ ಹಾಗೂ ಮಾರ್ಗದರ್ಶನ ಪಡೆದುಕೊಂಡಿರುತ್ತಾರೆ. ಇದೀಗ ಹೆಚ್ಚಿನ ಅನೂಕೂಲತೆಗೋಸ್ಕರ ನೂತನವಾಗಿ ಸಕಲ ಸುವ್ಯವಸ್ಥಿತ ವ್ಯವಸ್ಥೆಯೊಂದಿಗೆ ಆಸ್ಪತ್ರೆಯ ನೂತನ ಸಂಕೀರ್ಣ ನಿರ್ಮಾಣಗೊಂಡು ಜನಸೇವೆಗೆ ಲೋಕಾರ್ಪಣೆಯಾಗಲು ಸಿದ್ಧಗೊಂಡಿದೆ. ಅ.18 ರಂದು ಪುರೋಹಿತ್ ನಾಗರಾಜ್ ಭಟ್ ರವರ ನೇತೃತ್ವದಲ್ಲಿ ವಿವಿಧ ವೈದಿಕ ಕಾರ್ಯಕ್ರಮಗಳು ನಡೆಯಿತು. ಗಣಹೋಮ, ವಾಸ್ತು ಹೋಮ, ಸುದರ್ಶನ ಹೋಮ ಮತ್ತು ಧನ್ವಂತರಿ ಪೂಜೆಯನ್ನು ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ.ಹರಿಪ್ರಸಾದ್ ಶೆಟ್ಟಿ, ಡಾ.ಸುಷ್ಮಾ ಹೆಚ್. ಶೆಟ್ಟಿ, ಪುರುಷೋತ್ತಮ ಶೆಟ್ಟಿ, ಶಿವಪ್ರಸಾದ್ ಶೆಟ್ಟಿ, ಡಾ.ಅಭಿಜಿತ್ ಕೆ.ಪಿ, ಡಿ.ಕೆ.ಯಸ್. ಕನ್ಸಟ್ರಕ್ಷನ್ ನ ದೇವಿಪ್ರಸಾದ್ ಸುಳ್ಯ ಮತ್ತಿತರರು ಉಪಸ್ಥಿತರಿದ್ದರು. ಆಸ್ಪತ್ರೆಯ ಕಟ್ಟಡದ ಉಳಿದ ಕೆಲಸ ಕಾರ್ಯಗಳು ಸಂಪೂರ್ಣಗೊಂಡು ಶೀಘ್ರವಾಗಿ ಜನಸೇವೆಗೆ ತೆರುದುಕೊಳ್ಳಲಿರುವುದು ಹಾಗೂ ನುರಿತ ವೈದ್ಯರಿಂದ ವಿಶೇಷವಾಗಿ ಪಂಚಕರ್ಮ ಚಿಕಿತ್ಸೆ ವ್ಯವಸ್ಥೆ ಲಭ್ಯವಿರುವುದಾಗಿ ಸಂಸ್ಥೆಯ ಆಡಳಿತ ನಿರ್ದೇಶಕ ಡಾ. ಹರಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.