ಕ್ಯಾನ್ಸರ್ ಆಸ್ಪತ್ರೆಗೆ ಕೇಶದಾನ ಮಾಡಿ ಮಾನವೀಯತೆ ಮೆರೆದ ಸುಳ್ಯದ ಯುವಕ

Advt_Headding_Middle
Advt_Headding_Middle
Advt_Headding_Middle

 

 

 

ಎಲ್ಲ ಯುವಕರು ಉದ್ದನೆಯ ಕೂದಲು ಬೆಳೆಸುವುದಿಲ್ಲ.‌ ಸುಳ್ಯದ ಯುವಕನೊಬ್ಬ ತಾನು ಇಷ್ಟ ಪಟ್ಟು ಬೆಳೆಸಿದ ಕೂದಲನ್ನು ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡುವ ಮೂಲಕ ಎಲ್ಲರ ಶ್ಲಾಘನೆಗೆ ಪಾತ್ರರಾಗಿದ್ದಾರೆ.

ಸುಳ್ಯದ ಸಾಹಿತ್ಯ ಸಂಗೀತ ಕಲಾಕೇಂದ್ರದ ಶಿಕ್ಷಕಿ ಶ್ರೀಮತಿ ಆರತಿ ಮತ್ತು ಪುರುಷೋತ್ತಮ ದಂಪತಿಗಳ ಸುಪುತ್ರ ಶಿಶಿರ್ ಕೇರ್ಪಳ ಇವರು ಮಂಗಳೂರಿನ Mahalasa college of visual art ನಲ್ಲಿ ದ್ವಿತೀಯ ‌ವರ್ಷದ ಪದವಿ ವಿದ್ಯಾರ್ಥಿ. ಜಾಲತಾಣದಲ್ಲಿನ Hair for hope India ಅನ್ನುವ ಖಾತೆಯಲ್ಲಿ ಕೂದಲು ದಾನ ಮಾಡುವ ಕುರಿತಂತೆ ಉಲ್ಲೇಖಿಸಲ್ಪಟ್ಟ ಮಾಹಿತಿಯಿಂದ ಪ್ರೇರಣೆಗೊಂಡ ಇವರು ಇದರ ನಿಯಮಗಳನ್ನು ತಿಳಿದುಕೊಂಡು ಅದರಂತೆ ಹಲವಾರು ತಿಂಗಳಿನಿಂದ ತಮ್ಮ ಕೂದಲನ್ನು ಬೆಳೆಸತೊಡಗಿದ್ದು ನಿರ್ದಿಷ್ಟ ಅಳತೆಯ ಉದ್ದಕ್ಕೆ ಬೆಳೆದ ಬಳಿಕ ಇಂದು ತಮ್ಮ ಕೂದಲನ್ನು ಚೆನ್ನೈನ ಕ್ಯಾನ್ಸರ್ ಆಸ್ಪತ್ರೆಗೆ ದಾನ ಮಾಡಿರುತ್ತಾರೆ.

ಉರಗ ರಕ್ಷಣೆ, ವನ್ಯಜೀವಿಗಳ ರಕ್ಷಣೆ, ಶ್ವಾನಪ್ರೇಮ, ವರ್ಣಚಿತ್ರ ರಚನೆ ಹೀಗೆ ಹಲವು ಹವ್ಯಾಸಗಳನ್ನು ಮೈಗೂಡಿಸಿಕೊಂಡಿರುವ ಶಿಶಿರ್ ಅವರ ಸಮಾಜ ಸೇವೆ ಹಲವು ಯುವಕರಿಗೆ ಪ್ರೇರಣೆ‌‌. ಶಿಶಿರ್ ರ ಈ ಸಮಾಜಸೇವೆಗೆ ಶ್ಲಾಘನೆ ವ್ಯಕ್ತವಾಗುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.