ಉಬರಡ್ಕದಲ್ಲಿ ಸರ್ವ ಋತು ಸಂಪರ್ಕ ಸೇತುವೆ ಮತ್ತು ರಸ್ತೆ ಅಭಿವೃದ್ಧಿ ಮಾಡುವಂತೆ ಬ್ಯಾನರ್ ಅಳವಡಿಕೆ

Advt_Headding_Middle
Advt_Headding_Middle
Advt_Headding_Middle

 

ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಗೊಳಪಟ್ಟ,ಸುಳ್ಯ ಕೊಡಿಯಾಲಬೈಲ್ ರಸ್ತೆಯಿಂದ ಉಬರಡ್ಕವನ್ನು ಸಂಪರ್ಕಿಸುವ ಸೇತುವೆ ಮತ್ತು ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು, ರಸ್ತೆ ಮತ್ತು ಸೇತುವೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಮುಂದೆ ಚುನಾಯಿತರಾಗುವ ಜನಪ್ರತಿನಿಧಿಗಳೇ ಸಂಪೂರ್ಣ ಜವಾಬ್ದಾರರು ಎಂದು ಬ್ಯಾನರ್ ಅಳವಡಿಸಲಾಗಿದೆ.
ಉಬರಡ್ಕ ಕ್ರಾಸ್ ನಲ್ಲಿ ನಾಗರಿಕರು ಕಮಿಲಡ್ಕ,ನೀರಬಿದಿರೆ ಎಂಬ ಹೆಸರಿನಲ್ಲಿ ಬ್ಯಾನರ್ ಅಳವಡಿಸಿದ್ದು,’ಉಬರಡ್ಕ ಮಿತ್ತೂರು ಗ್ರಾಮ ಪಂಚಾಯತ್ ಗೊಳಪಟ್ಟ ಕೊಡಿಯಾಲಬೈಲ್,ಕಮಿಲಡ್ಕ,ನೀರಬಿದಿರೆ ಪ್ರದೇಶದ ಗ್ರಾಮಸ್ಥರಿಗೆ ಗ್ರಾಮ ಕೇಂದ್ರವಾದ ಉಬರಡ್ಕವನ್ನು ಸಂಪರ್ಕಿಸಲು ಸೂಕ್ತ ವಾದ ಸೇತುವೆ ಮತ್ತು ರಸ್ತೆ ಸಂಪರ್ಕವಿರುವುದಿಲ್ಲ.ಈ ಭಾಗದ ಗ್ರಾಮಸ್ಥರು ಮಳೆಗಾಲ ವಾಹನಗಳಲ್ಲಿ ಸುಮಾರು 10 ಕಿ.ಮೀ.ಬಳಸಿ ದೂರದ ಕಂದಡ್ಕ ಅಥವಾ ಸುಳ್ಯದ ಮೂಲಕ ಗ್ರಾಮ ಕೇಂದ್ರವನ್ನು ಸಂಪರ್ಕಿಸುವ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ.
ಆದ್ದರಿಂದ ಈ ಬಾರಿಯ ಗ್ರಾಮ ಪಂಚಾಯತ್ ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಈ ಪ್ರಮುಖ ಸಮಸ್ಯೆಗೆ ಶಾಶ್ವತ ಪರಿಹಾರದ ಜವಾಬ್ದಾರಿಯನ್ನು ವಹಿಸಿಕೊಂಡು ಚುನಾವಣೆಗೆ ಸ್ಪರ್ಧಿಸಬೇಕಾಗಿ ವಿನಂತಿ. ಮುಂದಿನ ದಿನಗಳಲ್ಲಿ ರಸ್ತೆ ಮತ್ತು ಸೇತುವೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ಚುನಾಯಿತ ಸದಸ್ಯರೇ ಜವಾಬ್ದಾರರು’ಎಂದು ಬರೆಯಲಾಗಿದೆ.
ಉಬರಡ್ಕದಲ್ಲಿ ಕಂದಡ್ಕ ಸೇತುವೆಗೆ ನಿರ್ಮಿಸಿದ ಸೇತುವೆ ತೀರಾ ಕಿರಿದಾಗಿದ್ದು, ಕೇವಲ ದ್ವಿಚಕ್ರ ಮತ್ತು ಅಟೋ ಸಂಚರಿಸಲು ಮಾತ್ರ ಸಾಧ್ಯ ವಾಗುತ್ತದೆ. ಸೇತುವೆಯೂ ಶಿಥಿಲವಾಗಿದ್ದು ಅಪಾಯಕಾರಿ ಯಾಗಿದೆ.ಸುಮಾರು ವರ್ಷಗಳ ಹಿಂದೆ ನಿರ್ಮಾಣವಾದ ಸೇತುವೆ ಇದಾಗಿದ್ದು ಸೂಕ್ತ ನಿರ್ವಹಣೆ ಕೂಡಾ ಇಲ್ಲದೆ ಇರುವುದು ಕಂಡುಬರುತ್ತಿದೆ. ಈ ರಸ್ತೆಯು ಅಭಿವೃದ್ಧಿ ಕಾಣದೆ ಸಂಚರಿಸಲು, ನಡೆದಾಡಲೂ ಕೂಡ ಕಷ್ಟವಾಗಿದೆ. ಈ ಭಾಗದ ಜನರು ಶಾಲೆ, ಪಂಚಾಯತ್, ಸೊಸೈಟಿ ಹಾಗೂ ವ್ಯವಹಾರಗಳಿಗೆ ಗ್ರಾಮ ಕೇಂದ್ರವಾದ ಉಬರಡ್ಕಕ್ಕೆ ಈ ರಸ್ತೆಯ ಮೂಲಕ ಹಾಗೂ ಸೇತುವೆಯ ಮೂಲಕ ಹೋಗಬೇಕಾದ ಅನಿವಾರ್ಯತೆ ಇರುವುದರಿಂದ,ಮಳೆಗಾಲದಲ್ಲಂತೂ ಸುತ್ತು ಬಳಸಿ ಹೋಗಬೇಕಾಗಿರುವುದರಿಂದ ಹೋರಾಟ ಅನಿವಾರ್ಯತೆ ಇದೆ ಎಂದು ಕೊಡಿಯಾಲಬೈಲ್,ಕಮಿಲಡ್ಕ ಹಾಗು ನೀರಬಿದಿರೆ ಭಾಗದ ಜನರು ಹೇಳಿದ್ದಾರೆ.

ಜನಪ್ರತಿನಿಧಿಗಳ ಇಚ್ಛಾಶಕ್ತಿಯ ಕೊರತೆ
ಈ ರಸ್ತೆಯ ಅಭಿವೃದ್ಧಿ ಮತ್ತು ಸೇತುವೆಯನ್ನು ಪುನರ್ ನಿರ್ಮಾಣ ಮಾಡಬೇಕಾಗಿರುವುದು ತೀರಾ ಅಗತ್ಯ. ಮುಂದೆ ಬರಲಿರುವ ಗ್ರಾಮ ಪಂಚಾಯತ್ ಚುನಾವಣೆಯ ದೃಷ್ಟಿಯಿಂದ ಈ ಹೋರಾಟ ಅನಿವಾರ್ಯ.ಆರಿಸಿ ಬರುವ ಜನಪ್ರತಿನಿಧಿಗಳು ಜನರ ಕಷ್ಟಗಳ ಬಗ್ಗೆ ಗಮನ ಹರಿಸಬೇಕು.ಗ್ರಾಮಸ್ಥರಿಗೆ ಆಗುವ ತೊಂದರೆಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕು.
ಬಾಲಕೃಷ್ಣ ನಾಯರ್ ನೀರಬಿದಿರೆ
ಗ್ರಾಮಸ್ಥರು

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.