Breaking News

ಸುಳ್ಯದಲ್ಲಿ ಎಸ್.ಡಿ.ಪಿ.ಐ. ಪಾದಯಾತ್ರೆ – ಪ್ರತಿಭಟನೆ

Advt_Headding_Middle
Advt_Headding_Middle
Advt_Headding_Middle

 

ರೈತ ಕಾನೂನು ಜಾರಿಯಿಂದ ರೈತರನ್ನು ಗುಲಾಮಗಿರಿಗೆ ತಳ್ಳುವ ಬಿಜೆಪಿ : ಅಶ್ರಫ್ ಮಾಚಾರ್

“ಕೇಂದ್ರದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ ನಿರಂತರವಾಗಿ ಜನ ವಿರೋಧಿ ಕಾನೂನನ್ನೇ ಜಾರಿಗೊಳಿಸುತ್ತಿದೆ. ಇಂದು ಕೃಷಿ ಮಸೂದೆಯನ್ನು ಜಾರಿಗೊಳಿಸಿ ಈ ದೇಶದ ಬೆನ್ನೆಲುಬಾಗಿರುವ ರೈತರನ್ನು ಗುಲಾಮಗಿರಿಗೆ ತಳ್ಳುವಂತೆ ಮಾಡಿದೆ. ಈ ನೀತಿಯ ವಿರುದ್ಧ ದೊಡ್ಡ ರೀತಿಯ ಜನಾಂದೋಲನದ ಅಗತ್ಯವಿದೆ” ಎಂದು ಎಸ್.ಡಿ.ಪಿ. ಐ. ರಾಜ್ಯ ಕಾರ್ಯದರ್ಶಿ ಅಶ್ರಫ್ ಮಾಚಾರ್ ಹೇಳಿದರು.

ಇಂದು ಸುಳ್ಯದಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿರುವ ಕೃಷಿ ಸೇರಿದಂತೆ ಇತರ ಮಸೂದೆಗಳನ್ನು ವಿರೋಧಿಸಿ ಎಸ್.ಡಿ.ಪಿ.ಐ.ಹಮ್ಮಿಕೊಂಡ ಪಾದಯಾತ್ರೆ ಹಾಗೂ ಪ್ರತಿಭಟನೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಿಜೆಪಿ ಪಕ್ಷ ಅಂದರೆ ಭಾರತೀಯ ಜನ ವಿರೋಧಿ ಪಕ್ಷ. ಈ ದೇಶದ ಜನರ ಅಭಿವೃದ್ದಿಯ ಕಲ್ಪನೆ ಆ ಪಕ್ಷಕ್ಕಿಲ್ಲ. ಹಿಂದುತ್ವದ ಅಜೆಂಡಾ ಇಟ್ಟುಕೊಂಡು ಕೋಮು ಸಂಘರ್ಷ ಸೃಷ್ಟಿ ಸಲು ಯತ್ನಿಸುವ ಸರಕಾರ ಇಂದು ಜನ ವಿರೋಧಿ, ರೈತ ವಿರೋಧಿ ನೀತಿಯನ್ನು ಜಾರಿಗೊಳಿಸುತ್ತದೆ. ಆರಂಭದಲ್ಲಿ 370 ಆರ್ಟಿಕಲ್ ವಾಪಸ್ ಪಡೆದು ಕಾಶ್ಮೀರದಲ್ಲಿ ಜನರನ್ನು ಬದುಕಲು ಸಾಧ್ಯವಿಲ್ಲದಂತೆ ಮಾಡಿದರು. ತ್ರಿವಳಿ ತಲಾಕ್ ಮೂಲಕ ಮುಸಲ್ಮಾನ ಮಹಿಳೆಯರ ಸಂಸ್ಕ್ರತಿಯ ಸ್ವತಂತ್ರತೆಯ ವಿರುದ್ದ ಕಾನೂನು ಆಗಿದೆ. ಒಂದು ಧರ್ಮವನ್ನು ಬದಿಗಿಡುವ ನಿಟ್ಟಿನಲ್ಲಿ ಎನ್.ಆರ್.ಸಿ. ತಂದರು. ಹೀಗೆ ಒಂದಲ್ಲ ಒಂದು ಕಾನೂನು ಸುಗ್ರಿವಾಜ್ಞೆಯ ಮೂಲಕ ತಂದು ಇಂದು ಈ ದೇಶವನ್ನೆ ಕಾರ್ಪೋರೆಟ್ ಕಂಪೆನಿಗಳಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ಕೃಷಿ ಮಸೂದೆ ತಂದು ಕೃಷಿಕರನ್ನು ಗುಲಾಮಗಿರಿಗೆ ತಳದಳುವಂತಾಗಿದೆ. ಎ.ಪಿ.ಎಂ.ಸಿ. ಕಾಯಿದೆ ಎಲ್ಲ ಮಸೂದೆ ಗಳು ಕೂಡಾ ಜನ ವಿರೋಧಿಯಾಗಿದೆ. ಬಂಡವಾಳಶಾಹಿ ಗಳಿಗೆ ಬೇಕಾದ ರೀತಿಯಲ್ಲಿ ಈ ಸರಕಾರ ನಡೆಯುತ್ತಿದ್ದು ಭಾರತೀಯರನ್ನು ಮೂರ್ಕರನ್ನಾಗಿಸುತ್ತಿದೆ. ಇದರ ವಿರುದ್ದ ಪ್ರಜ್ಞಾವಂತ ನಾಗರಿಕರಿಂದ ಜಾಗೃತಿ ನಡೆಯಬೇಕಾಗಿದೆ. ರಜ್ಯದ ಬಿಜೆಪಿ ಸರಕಾರವೂ ಕೂಡಾ ಕೇಂದ್ರ ಸರಕಾರದ ದಾರಿಯಲ್ಲೇ ನಡೆಯುತ್ತಿದೆ ಎಂದು ಅವರು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.