ಕೇಂದ್ರ ಸರಕಾರ ಜಾರಿಗೊಳಿಸಿದ ಮಸೂದೆ ಖಂಡಿಸಿ ಸುಳ್ಯದಲ್ಲಿ ಎಸ್.ಡಿ.ಪಿ.ಐ. ಪ್ರತಿಭಟನೆ

Advt_Headding_Middle
Advt_Headding_Middle
Advt_Headding_Middle

 

ಹಳ್ಳಿ, ಹಳ್ಳಿಯಲ್ಲಿ ಸುತ್ತಾಡಿ ಜಾಗೃತಿ ಮಾಡೋಣ : ಎಂ.ಬಿ.ಸದಾಶಿವ

ಕೇಂದ್ರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳು ಜಾರಿಗೊಳಿಸಿರುವ ಜನ ವಿರೋಧಿ ಮಸೂದೆಯ ವಿರುದ್ದ ಹಳ್ಳಿ, ಹಳ್ಳಿ ಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಂ.ಬಿ. ಸದಾಶಿವ ಹೇಳಿದರು.

ಇಂದು ಸುಳ್ಯದಲ್ಲಿ ಎಸ್.ಡಿ.ಪಿ.ಐ. ನೇತೃತ್ವದಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. “ಮುಂದೆ ಗ್ರಾಮ ಪಂಚಾಯತ್ ಚುನಾವಣೆ ಬರುತ್ತದೆ ಆ ಸಂದರ್ಭ ಮನೆ ಬಾಗಿಲಿಗೆ ಓಟು ಕೇಳಿಕೊಂಡು ಬರುವವರೊಂದಿಗೆ ಕೇಂದ್ರ ಹಾಗೂ ರಾಜ್ಯ ಸರಕಾರ ಜಾರಿಗೊಳಿಸಿರುವ ಮಸೂದೆಗಳ ಕುರಿತು ಅವರಲ್ಲಿ ವಿಚಾರಿಸುವ ಕೆಲಸ ಜನರು ಮಾಡಬೇಕು. ಆ ನಿಟ್ಟಿನಲ್ಲಿ ಜಾಗೃತಿ ಕಾರ್ಯ ಹಳ್ಳಿ ಹಳ್ಳಿಯಲ್ಲಿ ನಡೆಯಬೇಕು ಎಂದು ಹೇಳಿದರು.

ಭೂ ಸುಧಾರಣಾ ಕಾನೂನು ತಿದ್ದುಪಡಿ ತಂದು ಉಳ್ಳವರನ್ನು ಶ್ರೀಮಂತರನ್ನಾಗಿಸುವ ಜತೆಗೆ ರೈತರನ್ನು ಬಡವರನ್ನಾಗಿಸಲಾಗುತ್ತಿದೆ ಇದರ ವಿರುದ್ದ ಎಲ್ಲರೂ ಒಗ್ಗಟ್ಟಾಗಿ ಜಾಗೃತರಾಗಬೇಕು ಎಂದು ಹೇಳಿದ ಅವರು ಎ.ಪಿ.ಎಂ.ಸಿ.ಯಲ್ಲಿ ದಳ್ಳಾಳಿ ಗಳಿದ್ದಾರೆ. ಆದ್ದರಿಂದ ಎ.ಪಿ.ಎಂ.ಸಿ. ಕಾನೂನಿಗೆ ತಿದ್ದುಪಡಿ ತರಲಾಗಿದೆ ಎಂದು ಹೇಳಲಾಗುತ್ತಿದೆ. ಹಾಗಾದರೆ ಸುಳ್ಯ, ಪುತ್ತೂರು ಎ.ಪಿ.ಎಂ.ಸಿ.ಯಲ್ಲಿ ಬಿಜೆಪಿ ಆಡಳಿತ ಇದೆ. ಅವರೆಲ್ಲ ದಳ್ಳಾಳಿಗಳೇ? ರಂದು ಎಂ.ಬಿ. ಪ್ರಶ್ನಿಸಿದರು.

ಕಡಬ ರೈತ ಸಂಘದ ವಿಕ್ಟರ್ ಮಾತನಾಡಿ “ರೈತ ಮಸೂದೆ ಜಾರಿಯನ್ನು ಈ ಭಾಗದ ಶಾಸಕರುಗಳು ಚರ್ಚಿಸಿ ಜಾರಿಗೊಳಿಸಲಾಗಿದೆ ಎಂದು ಹೇಳಿಕೆ ನೀಡುತ್ತಾರೆ. ನಮ್ಮನ್ನು ಎಲ್ಲಿ ಚರ್ಚೆಗೆ ಕರೆದಿದ್ದೀರಿ ?ಶಾಸಕರು ಟಿ.ವಿ.ಗಳಲ್ಲಿ ಯಾಕೆ ಸುಮ್ಮನೆ ಹೇಳಿಕೆ ನೀಡುತ್ತೀರಿ. ನಮ್ಮ ಜತೆ ಚರ್ಚೆಗೆ ಬನ್ನಿ ಎಂದು ಸವಾಲೋಡ್ಡೊದರು. ಈ ಭಾಗದ ರೈತರನ್ನು ಉಳಿಸುವ ನಿಟ್ಟಿನಲ್ಲಿ ಸಂಸದರು, ಶಾಸಕರುಗಳು ಕೆಲಸ ಮಾಡಬೇಕು ಎಂದು ಹೇಳಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.