ಎಡನೀರು ಮಠದ ನೂತನ ಪೀಠಾಧಿಪತಿಗಳಾಗಿ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಪೀಠಾರೋಹಣ

Advt_Headding_Middle
Advt_Headding_Middle
Advt_Headding_Middle

ಎಡನೀರು ಮಠದ ನೂತನ ಪೀಠಾಧಿಪತಿಯಾಗಿ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರು ಪೀಠಾರೋಹಣಗೈಯ್ಯುವ ಕಾರ್ಯಕ್ರಮ ಇಂದು ಎಡನೀರು ಮಠದಲ್ಲಿ ನಡೆಯುತ್ತಿದೆ.
ಎಡನೀರು ಮಠದ ಪೀಠಾಧಿಪತಿಯಾಗಿದ್ದ ಕೇಶವಾನಂದ ಭಾರತೀ ಸ್ವಾಮೀಜಿಯವರು ದೇಹಾಂತರಾದುದರಿಂದ ಜಯರಾಮ ಮಂಜತ್ತಾಯರನ್ನು ಉತ್ತರಾಧಿಕಾರಿಯಾಗಿ ಆರಿಸಿ, ಅವರಿಗೆ ಅ.26ರಂದು ಕಂಚಿ ಕಾಮಕೋಟಿ ಪೀಠಾಧಿಪತಿಯವರು ಸನ್ಯಾಸಿ ದೀಕ್ಷೆ ನೀಡಿ, ಸಚ್ಚಿದಾನಂದ ಭಾರತೀ ಸ್ವಾಮೀಜಿಯವರೆಂದು ನಾಮಕರಣಗೈದಿದ್ದರು. ಸಚ್ಚಿದಾನಂದ ಸ್ವಾಮೀಜಿಯವರ ಪುರಪ್ರವೇಶ ಕಾರ್ಯಕ್ರಮ ನಿನ್ನೆ ನಡೆದು, ಇಂದು ಪೀಠಾರೋಹಣ ಕಾರ್ಯಕ್ರಮ ನಡೆಯುತ್ತಿದೆ. ಪೀಠಾರೋಹಣ ಸಮಿತಿ ಅಧ್ಯಕ್ಷ ಟಿ. ಶ್ಯಾಮ ಭಟ್ಟರು ಸ್ವಾಮೀಜಿಗೆ ಚಿನ್ನದ ಕಿರೀಟ ಧಾರಣೆ ಮಾಡಿದರು.


ಕಾರ್ಯಕ್ರಮದಲ್ಲಿ ಉಡುಪಿಯ ಪರ್ಯಾಯ ಪೀಠಾಧಿಪತಿಯವರಾದ ಪಲಿಮಾರು ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರು, ಸುಬ್ರಹ್ಮಣ್ಯದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು, ಕಾಸರಗೋಡು ಸಂಸದರಾದ ರಾಜ್ ಮೋಹನ್ ಉಣ್ಣಿತ್ತಾನ್, ಕರ್ನಾಟಕದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಗಣ್ಯರ ಉಪಸ್ಥಿತರಿದ್ದಾರೆ. ಕಂಚಿ ಕಾಮಕೋಟಿ ಮಠದ ಪ್ರತಿನಿಧಿಗಳು ಪೀಠಾರೋಹಣ ವಿಧಿವಿಧಾನ ನೆರವೇರಿಸುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.