ಯೇನೆಕಲ್ಲು: ಅಕ್ರಮ ಕೆಂಪು ಕಲ್ಲು ಗಣಿಗಾರಿಕೆ ಆರೋಪ

Advt_Headding_Middle
Advt_Headding_Middle
Advt_Headding_Middle

 

ಸುಬ್ರಹ್ಮಣ್ಯ ಪೋಲೀಸರಿಂದ ಸ್ಥಳಕ್ಕೆ ಭೇಟಿ

ಸುಬ್ರಹ್ಮಣ್ಯ ಗ್ರಾ.ಪಂ ವ್ಯಾಪ್ತಿಯ ಯೇನೆಕಲ್ಲು ಗ್ರಾಮದ ಹಲವು ಕಡೆಗಳಲ್ಲಿ ಕೆಂಪು ಕಲ್ಲು ಅಕ್ರಮ ಗಣಿಗಾರಿಕೆ ನಡೆಯುತ್ತಿದೆಯೆಂದು ಪ್ರಚಾರವಾಗಿ ಸಾಮಾಜಿಕ ಜಾಲತಾಣಗಳಲ್ಲೂ ಪ್ರಚಾರಗೊಂಡ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣಾ ಪಿ.ಎಸ್.ಐ. ಸ್ಥಳಕ್ಕೆ ಹೋಗಿ ಪರಿಶೀಲಿಸಿದ ಘಟನೆ ನ. 18 ರಂದು ನಡೆದಿದೆ.

ಈ ಬಗ್ಗೆ ಸುದ್ದಿಗೆ ಪ್ರತಿಕ್ರಿಯಿಸಿದ ಪಿ.ಎಸ್.ಐ. ಓಮನರವರು ಮಾಧ್ಯಮಗಳಲ್ಲಿ ಬಂದ ವರದಿಯನ್ನು ಗಮನಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದೇನೆ. ಎರಡು ದಿನಗಳಿಂದ ಕಾಮಗಾರಿ ನಡೆಯುತ್ತಿಲ್ಲ. ಯಂತ್ರವನ್ನು ಟರ್ಪಾಲು ಹಾಕಿ ಮುಚ್ಚಿಟ್ಟಿದ್ದಾರೆ. ಇದು ನಮ್ಮ ಇಲಾಖೆಗೆ ಸಂಬಂಧಿಸದಿರುವುದರಿಂದ ನಾನು ಈ ಬಗ್ಗೆ ತಹಶಿಲ್ದಾರರಿಗೆ, ಗಣಿ ಇಲಾಖೆಗೆ ಮಾಹಿತಿ ನೀಡಬಹುದಷ್ಟೆ ಎಂದಿದ್ದಾರೆ.

ಕಂದಾಯ ಇಲಾಖೆಯವರೂ ಭೇಟಿ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಈ ಏನು ಕ್ರಮ ಕೈಗೊಳ್ಳಲಿದ್ದಾರೆಂದು ಕಾದು ನೋಡಬೇಕಿದೆ. ಗಣಿಗಾರಿಕೆಯಿಂದಾಗಿ ಬಾನಡ್ಕ ರಸ್ತೆಯು ಹದಗೆಟ್ಟು ಹೋಗುತ್ತಿದೆ ಮತ್ತು ಜೂನ್ ತಿಂಗಳಿನಿಂದ ಅಕ್ಟೋಬರ್ ತನಕ ಈ ರಸ್ತೆಯಲ್ಲಿ ವಾಹನಗಳಲ್ಲಿ ಕಲ್ಲು ಸಾಗಾಟ ಮಾಡಬಾರದೆಂದು ಸ್ಥಳೀಯರು ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬಂದಿದ್ದರಾದರೂ ಈ ಬಗ್ಗೆ ಸ್ಥಳೀಯಾಡಳಿತ ಯಾವುದೇ ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಲಾಗಿದೆ.

ಗಣಿಗಾರಿಕೆಯಿಂದ ಉಂಟಾಗುವ ಜೆಸಿಬಿ, ಟಿಪ್ಪರ್ ಮತ್ತು ಕಲ್ಲು ಕತ್ತರಿಸುವ ಯಂತ್ರಗಳ ಕರ್ಕಶ ಶಬ್ದ ಮತ್ತು ರಸ್ತೆ ಹಾಳಾಗುತ್ತಿರುವುದರಿಂದ ಮನನೊಂದ ಊರವರೇ ಈ ಬಗ್ಗೆ ಮಾದ್ಯಮದವರಿಗೆ ಮತ್ತು ಇಲಾಖೆಯವರಿಗೆ ದೂರು ನೀಡಿರುವುದೆಂದು ಹೇಳಲಾಗಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.