ನ. 26 ರಂದು ಕಾರ್ಮಿಕರ ಮುಷ್ಕರ

Advt_Headding_Middle
Advt_Headding_Middle
Advt_Headding_Middle

ಸುಳ್ಯದಲ್ಲೂ ಪ್ರತಿಭಟನಾ ಪ್ರದರ್ಶನ

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ನ. 26 ರಂದು ಕಾರ್ಮಿಕರ ಸಾರ್ವತ್ರಿಕ ಮುಷ್ಕರಕ್ಕೆ ಕರೆ ನೀಡಿದ್ದು, ಸುಳ್ಯ ತಾಲೂಕು ಸಮಿತಿಯ ವತಿಯಿಂದ ಸುಳ್ಯದಲ್ಲೂ ಪ್ರತಿಭಟನಾ ಪ್ರದರ್ಶನ ನಡೆಯಲಿದೆ.
ಕಾರ್ಮಿಕ ಮುಖಂಡ ಕೆ.ಪಿ.ಜಾನಿ ಪತ್ರಿಕಾಗೋಷ್ಠಿಯಲ್ಲಿ ಈ ಮಾಹಿತಿ ನೀಡಿದರು.
ಲಾಕ್‌ಡೌನ್ ನಂತರದಲ್ಲಿ ಕಾರ್ಮಿಕ ವರ್ಗ ಮತ್ತು ರೈತಾಪಿ ವರ್ಗಗಳು ಆಡಳಿತದ ಕಡೆಯಿಂದ ಹೊಡೆತಗಳ ಮೇಲೆ ಹೊಡೆತ ತಿನ್ನುತ್ತಲೇ ಇದೆ. ಮಾತ್ರವಲ್ಲ ಪ್ರಾಕೃತಿಕ ಮಹಾಮಾರಿಯ ಹೊಡೆತ ಒಂದು ಕಡೆಯಾದರೆ ಸ್ವಯಂಕೃತ ಅಪರಾಧವೆನ್ನಬಹುದಾದ ರೀತಿಯಲ್ಲಿ ಸರಕಾರಗಳು ದೇಶಕ್ಕೆ ಅನ್ನ ನೀಡುವ ರೈತರ ಮತ್ತು ದೇಶದ ಸಂಪತ್ತು ಸಮತೋಲಿತವಾಗಿಡುವ ಕಾರ್ಮಿಕರ ಬೆನ್ನಿಗೆ ನಿಂತು ಆರ್ಥಿಕ ಸಹಾಯಗಳನ್ನು ನೇರವಾಗಿ ನೀಡಿ ಕೊಂಡು ಕೊಳ್ಳುವ ಅವರ ಶಕ್ತಿ ಕುಂದದ ಹಾಗೆ ನೋಡಿಕೊಳಲ್ಳುವ ಬದಲು ಕ್ಲಿಷ್ಟಕರವಾದ ಪರಿಸ್ಥಿತಿಯಲ್ಲಿ ಸರಕಾರವು ಕಾರ್ಪೊರೇಟ್ ಧಣಿಗಳಿಗೆ ಆಸ್ತಿ ಹೆಚ್ಚು ಮಾಡುವ ಪ್ರಯತ್ನ ಮಾಡುತ್ತಿದೆ. ಈ ಹಿಂದೆ ಕಾರ್ಮಿಕ ವರ್ಗ ತ್ಯಾಗ ಬಲಿದಾನಗಳಿಂದ ಹೋರಾಟದ ಮೂಲಕ ಪಡೆದ ೨೯ ಕಾರ್ಮಿಕ ಪರವಾದ ಕಾನೂನುಗಳನ್ನು ೪ ಸಂಹಿತೆಗಳನ್ನಾಗಿ ಬದಲಿಸಿ ಪ್ರಶ್ನೆ ಮಾಡುವ ಹಕ್ಕನ್ನು ಕಸಿದುಕೊಂಡು ದುಡಿಯುವ ವರ್ಗದ ಬೆನ್ನೆಲುಬನ್ನೇ ಮುರಿಯುವಂತೆ ಮಾಡಿದೆ. ಇದರಿಂದ ಕಾರ್ಮಿಕರಿಗೆ ಸಂಘ ಕಟ್ಟುವ ಹಕ್ಕು ಇರುವುದಿಲ್ಲ ಎಂದು ಅವರು ಆರೋಪಿಸಿದರು.
ಮಾಲೀಕರಿಂದ ಶೋಷಣೆ ದಬ್ಬಾಳಿಕೆಯಾದಾಗ ನ್ಯಾಯಾಲಯಗಳಲ್ಲಿ ಪ್ರಶ್ನಿಸುವಂತಹ ಈ ಹಿಂದೆ ಇದ್ದ ಕಾರ್ಮಿಕರ ಹಕ್ಕು ಕಸಿಯಲ್ಪಟ್ಟಿದೆ. ವೇತನದ ಬಗ್ಗೆ ಮತ್ತು ಕೆಲಸದ ಭದ್ರತೆ ಹಾಗೂ ಜೀವದ ಭದ್ರತೆ ಬಗ್ಗೆ ಸಂವಿಧಾನದ ಆಶಯದಂತೆ ಇದ್ದ ಕಾರ್ಮಿಕರ ಹಕ್ಕು ಮೊಟಕುಗೊಳಿಸಲಾಗಿದೆ. ಮೂಲ ವೇತನ ಕನಿಷ್ಠ ವೇತನ ತುಟ್ಟಿಭತ್ಯೆಯಂತಹ ಈ ಹಿಂದೆ ಇದ್ದ ವೈಜ್ಞಾನಿಕ ತಳಹದಿಯೂ ಕೆಡವಲ್ಪಟ್ಟು ಆಡಳಿತಕ್ಕೆ ಮತ್ತು ಮಾಲೀಕರಿಗೆ ವರದಾನವಾಗುವಂತೆ ತಿದ್ದುಪಡಿ ಮಾಡಿದ್ದು, ಈ ಹಿಂದೆ ಕಾನೂನಾಗಿದ್ದ ನಿಯಮಗಳನ್ನು ಕೇವಲ ಅಸ್ತಿಪಂಜರದ ರೀತಿ ಹೆಸರಿಗೆ ಮಾತ್ರವಾಗಿ ಉಳಿಯುವಂತೆ ಸಂಹಿತೆಯನ್ನು ಆಗಿ ಬದಲಿಸಲಾಗಿದೆ. ಇದು ಇನ್ನೂ ಸುಧಾರಿಸಬೇಕಿದೆ. ಕಾರ್ಮಿಕರ ಬಾಳನ್ನು ಮತ್ತೆ ಹಳೆಯ ಜೀತದಾಳು, ಅಸ್ಪೃಶ್ಯತೆ, ಗುಲಾಮಗಿರಿಯಂತಹ ಅಸಮತೋಲಿತ ಸಮಾಜವನ್ನು ಮರುಸೃಷ್ಟಿಸಿ ಹಳೆಯ ಊಳಿಗಮಾನ್ಯ ವ್ಯವಸ್ಥೆಗೆ ದೂಡುವಂತಹ ಹುನ್ನಾರವಾಗಿದೆ. ಅದರ ಭಾಗವಾಗಿಯೇ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದು ಇಡೀ ಭಾರತವನ್ನೇ ತನ್ನ ಕಪಿಮುಷ್ಟಿಗೆ ತೆಗೆದುಕೊಂಡ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ನಡವಳಿಕೆಯ ಮಾದರಿಯಂತೆಯೇ ಭಾರತದ ಒಂದೊಂದೇ ಸಂಸ್ಥೆಗಳು ಅಂಬಾನಿ ಅದಾನಿಗೆ ಮಾರಾಟವಾಗುತ್ತಿದೆ. ಈ ಎಲ್ಲಾ ಜನವಿರೋಧಿ ನಡವಳಿಕೆಗಳ ವಿರುದ್ದ ದೇಶದ ಪ್ರಮುಖ ಕಾರ್ಮಿಕ ಸಂಘಟನೆಗಳ ಸಂಯುಕ್ತ ಒಕ್ಕೂಟದ ವತಿಯಿಂದ ದೇಶವನ್ನು ಬ್ರಿಟಿಷ್ ಸಾಮ್ರಾಜ್ಯಶಾಹಿಗಳ ಕೈಯಿಂದ ಸ್ವತಂತ್ರ್ಯಗೊಳಿಸಲು ಮಹಾತ್ಮಾಜಿಯೊಂದಿಗೆ ರೈತ ಕಾರ್ಮಿಕ ವರ್ಗ ಕೈ ಜೋಡಿಸಿ ಹೋರಾಡಿದಂತೆ ಮಾಡು ಇಲ್ಲವೇ ಮಡಿ ಎನ್ನುವ ರೀತಿಯಲ್ಲಿ ಎರಡನೇ ಸ್ವಾತಂತ್ರ್ಯ ಚಳವಳಿ ಎಂದೇ ಬಣ್ಣಿಸಬಹುದಾದ ಹೋರಾಟದ ಮುಂದುವರಿದ ಭಾಗವಾಗಿ ಇಡೀ ದೇಶದಲ್ಲಿ ನ. ೨೬ ರಂದು ಸಾರ್ವತ್ರಿಕ ಮುಷ್ಕರಕ್ಕೆ ಕರೆಕೊಟ್ಟ ಕರೆಯಂತೆ ಸುಳ್ಯದಲ್ಲಿ ಅಂದು ಬೆಳಿಗ್ಗೆ ೧೦ಗಂಟೆಗೆ ಪ್ರತಿಭಟನಾ ಪ್ರದರ್ಶನ ನಡೆಯಲಿದೆ ಎಂದು ಅವರು ಹೇಳಿದರು ಕಾರ್ಮಿಕ ಸಂಘಟನೆಯ ಬಿಜು ಅಗಸ್ಟಿನ್, ವಿ.ಆರ್. ಪ್ರಸಾದ್, ಶ್ರೀಧರ್ ಕೆ. ಕೆ., ಮೋನಪ್ಪ ಜಯನಗರ, ನಾಗರಾಜ್ ಎಚ್.ಕೆ., ಅಬೂಬಕ್ಕರ್ ಜಟ್ಟಿಪಳ್ಳ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.