ಕಸ್ತೂರಿ ರಂಗನ್ ವರದಿ ವಿರುದ್ಧ ಆಕ್ರೋಶ

Advt_Headding_Middle
Advt_Headding_Middle
Advt_Headding_Middle

ಕುಕ್ಕಶ್ರೀ ಸುಬ್ರಹ್ಮಣ್ಯದಲ್ಲಿ ಜಾಗೃತಿ ಜಾಥಾ


ಕಸ್ತೂರಿ ರಂಗನ್ ವರದಿ ವಿರುದ್ದದ ಮಲೆನಾಡು ಜನಹಿತ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನ.೨೭ ನಡೆಯಲಿರುವ ಪ್ರತಿಭಟನಾ ಸಭೆಯ ಪೂರ್ವಭಾವಿಯಾಗಿ ಹಮ್ಮಿಕೊಂಡ ಜಾಗೃತಿ ಜಾಥಾ ಇಂದು ಮಧ್ಯಾಹ್ನ ಕುಕ್ಕೆಶ್ರೀ ಸುಬ್ರಹ್ಮಣ್ಯ ಕಾಶಿಕಟ್ಟೆಯಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ, ನಮ್ಮದು ಜನಪರ ಹೋರಾಟ. ಕಸ್ತೂರಿರಂಗನ್ ವರದಿ ಜಿಪಿಎಸ್ ಆಧಾರಿತ ವರದಿ. ಗ್ರಾಮೀಣ ಭಾಗದ ಜನರ ಅಭಿಪ್ರಾಯ ಪಡೆಯದೆ ಜಾರಿಗೊಳಿಸಲು ಉದ್ದೇಶಿಸಿರುವ ಈ ವರದಿ ವಿಫಲವಾದುದು. ನಮ್ಮ ಮಣ್ಣಿನ ಸಂಬಂಧ ಬಿಡಬೇಕಾದ ಯೋಜನೆಯನ್ನು ವಿರೋಧಿಸಬೇಕು. ಎಲ್ಲಾ ಹೋರಾಟಗಳನ್ನು ರಾಜಕೀಯಗೊಳಿಸಲು ಪ್ರಯತ್ನಿಸುವುದು ದುರಂತ. ಇದನ್ನೆಲ್ಲಾ ಮೆಟ್ಟಿನೆಲ್ಲಬೇಕಾಗಿದೆ. ಮನೆಯಲ್ಲಿ ಕೂತು ಮಾತನಾಡುವರು ಹೊರಗೆ ಬಂದು ಮಾತನಾಡುವಂತಾಗಲಿ. ಹೊರಗೆ ಬಂದು ಮಾತನಾಡುವವರು ಬೀದಿಯಲ್ಲಿ ನಿಂತು ಮಾತನಾಡುವಂತಾಗಲಿ ಎಂದರು. ಹರೀಶ್ ಇಂಜಾಡಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಕಮಲಾಕ್ಷ ಮುಳ್ಳುಬಾಗಿಲು, ರವೀಂದ್ರ ಕುಮಾರ್ ರುದ್ರಪಾದ, ಭಾಲಕೃಷ್ಣ ಮರೀಲ್, ಮೋಹನದಾಸ್ ರೈ, ಜಯರಾಮ ಕಟ್ಟೆಮನೆ, ಶೈಲೇಶ್ ಕಟ್ಟೆಮನೆ, ಸುರೇಶ್ ಉಜಿರಡ್ಕ, ಮತ್ತಿತರರು ಉಪಸ್ಥಿತರಿದ್ದರು.

 

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.