ಮುಕ್ಕೂರು : ಅಡಿಕೆ ಮರ ಏರುವ ಮೋಟಾರು ಹಾಗೂ ಮಿನಿ ಟಿಪ್ಪರ್ ಪ್ರಾತ್ಯಕ್ಷಿಕೆ -ಸನ್ಮಾನ

Advt_Headding_Middle
Advt_Headding_Middle
Advt_Headding_Middle

ಯಂತ್ರೋಪಕರಣಗಳ ಬಳಕೆಯಿಂದ ಕೃಷಿಯಲ್ಲಿ ಯಶಸ್ವಿ – ದಯಾಕರ ಆಳ್ವ

ಹೊಸ ಆವಿಷ್ಕಾರದಿಂದ ಕೃಷಿಯಲ್ಲಿ ಪ್ರಗತಿ – ಜಗನ್ನಾಥ ಪೂಜಾರಿ

ಮುಕ್ಕೂರು- ಕುಂಡಡ್ಕ ನೇಸರ ಯುವಕ ಮಂಡಲ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಆಶ್ರಯದಲ್ಲಿ ಹಾಗೂ ಆಳ್ವ ಫಾರ್ಮ್ಸ್ ಪೆರುವಾಜೆ ಇದರ ಸಹಯೋಗದಲ್ಲಿ ಬಂಟ್ವಾಳದ ಪ್ರಗತಿಪರ ಕೃಷಿಕ ಸಂಶೋಧಿಸಿದ ಅಡಿಕೆ ಮರ ಏರುವ ಮೋಟಾರು ಹಾಗೂ ಮಂಜುನಾಥನಗರದ ವಿದ್ಯಾರ್ಥಿ ಸಂಶೋಧಿಸಿದ ಮಿನಿ ಟಿಪ್ಪರ್ ಪ್ರಾತ್ಯಕ್ಷಿಕೆ ವಿನೂತನ ಕಾರ್ಯಕ್ರಮವು ನ. 21 ರಂದು ಬೋಳಕುಮೇರು ಆಳ್ವ ಫಾರ್ಮ್ಸ್ ಕೃಷಿ ತೋಟದಲ್ಲಿ ನಡೆಯಿತು.
ಬೋಳಕುಮೇರು ಆಳ್ವ ಫಾರ್ಮ್ಸ್ ನ ಕುಂಬ್ರ ಲಲಿತಾ ಎಸ್.ಆಳ್ವರವರು ಕಾರ್ಯಕ್ರಮವನ್ನು ಹಿಂಗಾರ ಅರಳಿಸುವ ಮೂಲಕ ಉದ್ಘಾಟಿಸಿ ಶುಭಹಾರೈಸಿದರು.
ಮುಕ್ಕೂರು ಕುಂಡಡ್ಕ ನೇಸರ ಯುವಕ ಮಂಡಲದ ಗೌರವಾಧ್ಯಕ್ಷ ಜಗನ್ನಾಥ ಪೂಜಾರಿ ಮುಕ್ಕೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿ ಸಂಶೋಧಕ ಪುರುಷೋತ್ತಮ ಮಂಜುನಾಥನಗರರವರನ್ನು ಮತ್ತು ಹಿರಿಯರಾದ ಆಳ್ವ ಫಾರ್ಮ್ಸ್ ನ ಕುಂಬ್ರ ಲಲಿತಾ ಎಸ್.ಆಳ್ವರವರನ್ನು ಶಾಲು ಹೊದಿಸಿ,ಫಲ,ಪುಷ್ಪ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಯಂತ್ರೋಪಕರಣ ಪ್ರದರ್ಶನದ ಅಗ್ರಿ ಡಿಪೋ ದ ರಾಜಾರಾಮ್ ಕಡೂರುರವರನ್ನು ಕುಂಬ್ರ ದಯಾಕರ ಆಳ್ವರವರು ಶಾಲು ಹೊದಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ಶ್ರೀಮತಿ ಶಾಲಿನಿ ಆಳ್ಬ,ಕು.ದೀಕ್ಷಾ ಆಳ್ವರವರು ಉಪಸ್ಥಿತರಿದ್ದರು.
ಬೃಂದಾ ಮುಕ್ಕೂರು ಮತ್ತು ರಕ್ಷಿತ್ ಕಾನಾವು ಸನ್ಮಾನ ಪತ್ರ ವಾಚಿಸಿದರು.
ಮುಖ್ಯ ಅತಿಥಿಗಳಾಗಿ ಪ್ರಗತಿಪರ ಕೃಷಿಕ ಗೋಪಾಲಕೃಷ್ಣ ಭಟ್ ಕಾನಾವು,ಪೆರುವಾಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಉಮೇಶ್ ಕೆ.ಎಂ.ಬಿ,ಪ್ರಗತಿಪರ ಕೃಷಿಕರಾದ ಜಯಸೂರ್ಯ ರೈ ಬೋರಡ್ಕ, ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ನಿರ್ದೇಶಕ ಗುಡ್ಡಪ್ಪ ಗೌಡ ಅಡ್ಯತಕಂಡ,ಮುಕ್ಕೂರು ಜ್ಯೋತಿ ಯುವಕ ಮಂಡಲದ ಅಧ್ಯಕ್ಷ ಸತ್ಯಪ್ರಸಾದ್ ಕಂಡಿಪ್ಪಾಡಿ,ಶಾರದೋತ್ಸವ ಸಮಿತಿ ಅಧ್ಯಕ್ಷ ಕಿರಣ್ ಚಾಮುಂಡಿಮೂಲೆ,ಮುಕ್ಕೂರು ಪೆರುವಾಜೆ ಯುವಸೇನೆ ಅಧ್ಯಕ್ಷ ಸಚಿನ್ ರೈ ಪೂವಾಜೆ,ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಪೂವಪ್ಪ ನಾಯ್ಕ ಅಡೀಲು,ನೇಸರ ಯುವಕ ಮಂಡಲದ ಅಧ್ಯಕ್ಷ ರಮೇಶ್ ಕಾನಾವು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮುಕ್ಕೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕುಂಬ್ರ ದಯಾಕರ ಆಳ್ವರವರು ಸ್ವಾಗತಿಸಿ,ರಕ್ಷಿತಾ ಅಡ್ಯತಕಂಡ ಕಾರ್ಯಕ್ರಮ ನಿರೂಪಿಸಿ, ಶ್ರಾವ್ಯ ರೈ ಪೂವಾಜೆ ಪ್ರಾರ್ಥಿಸಿ,ಶಶಿಕುಮಾರ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಆಳ್ವ ಫಾರ್ಮ್ಸ್ ತೋಟದಲ್ಲಿ ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿತೆ ನಡೆಯಿತು.
 ಕೃಷಿಕರು ಕಾರ್ಯಕ್ರಮದ  ಪ್ರಯೋಜನ ಪಡೆದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.